ಪುರುಷರನ್ನು ಕಾಡುವ ಸ್ಟ್ರೆಚ್ ಮಾರ್ಕ್ಸ್ ನಿವಾರಣೆಗೆ ಮನೆಯಲ್ಲೇ ಇದೆ ಮದ್ದು

ಪುರುಷರನ್ನು ಕಾಡುವ ಸ್ಟ್ರೆಚ್ ಮಾರ್ಕ್ಸ್ ನಿವಾರಣೆಗೆ ಮನೆಯಲ್ಲೇ ಇದೆ ಮದ್ದು

ಮಹಿಳೆಯರೊಂದೇ ಅಲ್ಲ ಪುರುಷರು ಕೂಡ ತಮ್ಮ ಸೌಂದರ್ಯದ ಬಗ್ಗೆ ಕಾಳಜಿ ವಹಿಸ್ತಾರೆ. ಹಾರ್ಮೋನ್ ಏರುಪೇರಿನಿಂದಾಗಿ ಸ್ಟ್ರೆಚ್ ಮಾರ್ಕ್ಸ್ ಕಾಣಿಸಿಕೊಳ್ಳುತ್ತದೆ. ಈ ಸ್ಟ್ರೆಚ್ ಮಾರ್ಕ್ಸನ್ನು ಸುಲಭವಾಗಿ ಮನೆ ಮದ್ದಿನ ಮೂಲಕ ಕಡಿಮೆ ಮಾಡಿಕೊಳ್ಳಬಹುದು.

ಅಪ್ರಿಕಾಟ್ : ಕ್ಯಾಲ್ಸಿಯಂ, ಸತು, ಕಬ್ಬಿಣ, ಮ್ಯಾಗ್ನೆಸಿಮ್, ಖನಿಜಗಳು ಸಾಕಷ್ಟಿವೆ.

ಇದು ಪುರುಷರನ್ನು ಕಾಡುವ ಸ್ಟ್ರೆಚ್ ಮಾರ್ಕ್ಸ್ ಕಡಿಮೆ ಮಾಡಲು ಬಹಳ ಉಪಯೋಗಕಾರಿ. 2-3 ಅಪ್ರಿಕಾಟ್ ತೆಗೆದುಕೊಂಡು ಪೇಸ್ಟ್ ಮಾಡಿ. ಅದನ್ನು ಸ್ಟ್ರೆಚ್ ಮಾರ್ಕ್ಸ್ ಗೆ ಹಚ್ಚಿ 15 ನಿಮಿಷ ಬಿಡಿ. ನಂತ್ರ ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ಪ್ರತಿದಿನ ಹೀಗೆ ಮಾಡ್ತಾ ಬಂದ್ರೆ ಆದಷ್ಟು ಬೇಗ ಸ್ಟ್ರೆಚ್ ಮಾರ್ಕ್ಸ್ ಕಡಿಮೆಯಾಗಲಿದೆ.

ತೆಂಗಿನ ಎಣ್ಣೆ : ತೆಂಗಿನ ಎಣ್ಣೆ ತ್ವಚೆಯ ಸೌಂದರ್ಯ ವೃದ್ಧಿಗೆ ಬಹಳ ಉಪಯೋಗಕಾರಿ. 2 ಟೀ ಸ್ಪೂನ್ ತೆಂಗಿನ ಎಣ್ಣೆ ಹಾಗೂ 1 ಟೀ ಸ್ಪೂನ್ ನಿಂಬೆ ಹಣ್ಣನ್ನು ಪೇಸ್ಟ್ ಮಾಡಿ. ಸ್ಟ್ರೆಚ್ ಮಾರ್ಕ್ಸ್ ಗೆ ಹಚ್ಚಿ 10 ನಿಮಿಷ ಬಿಡಿ.

ಅವಕೋಡಾ: ಅವಕೋಡಾದಲ್ಲಿ ಬಿ7 ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಇದು ಸ್ಟ್ರೆಚ್ ಮಾರ್ಕ್ಸ್ ಹೋಗಲಾಡಿಸುವ ಕೆಲಸ ಮಾಡುತ್ತದೆ. ಒಂದು ಅವಕೋಡಾ, 1 ಚಮಚ ನಿಂಬೆ ರಸ, ಒಂದು ಚಮಚ ಜೇನು ತುಪ್ಪವನ್ನು ಸೇರಿಸಿ ಸ್ಟ್ರೆಚ್ ಮಾರ್ಕ್ಸ್ ಗೆ ಹಚ್ಚಿ. 15 ನಿಮಿಷ ಹಚ್ಚಿ ನಂತ್ರ ತೊಳೆದುಕೊಳ್ಳಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಾಜ್ಯದಲ್ಲಿ ಮತ್ತೆ ʼನೈಟ್‌ ಕರ್ಫ್ಯೂʼ ಜಾರಿ?

Thu Dec 23 , 2021
ಬೆಂಗಳೂರು : ದೇಶದಲ್ಲಿ ಒಮಿಕ್ರಾನ್‌ ಪ್ರಕರಣಗಳು ಹೆಚ್ಚುತ್ತಿದ್ದಂತೆ ಎಚ್ಚೆತ್ತಿರುವ ಕೇಂದ್ರ ಸರ್ಕಾರ, ಎಲ್ಲ ರಾಜ್ಯಗಳು ಸೇರಿ ಕೇಂದ್ರಾಡಳಿತ ಪ್ರದೇಶಗಳಿಗೆ ಒಮಿಕ್ರಾನ್‌ ಹರಡದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ ಎಂದು ಸೂಚನೆ ನೀಡಿದೆ. ಈ ಕುರಿತು ಪತ್ರ ಬರೆದಿರುವ ಕೇಂದ್ರ ಸರ್ಕಾರ, ರಾಜ್ಯದಲ್ಲಿ ನೈಟ್‌ ಕರ್ಫ್ಯೂ ಬಗ್ಗೆ ಚಿಂತನೆ ನಡೆಸಿ ಮತ್ತು ಸಭೆ ಸಮಾರಂಭಗಳಲ್ಲಿ ಹೆಚ್ಚಿನ ಜನ ಸೇರದಂತೆ ಎಚ್ಚರ ವಹಿಸಿ ಎಂದಿದೆ. ಇನ್ನು ಜನರನ್ನ ರಕ್ಷಿಸಲು ಕೊರೊನಾ ಲಸಿಕೆ ಹಾಕುವುದನ್ನ ವೇಗಗೊಳಿಸಿ. […]

Advertisement

Wordpress Social Share Plugin powered by Ultimatelysocial