ರೇಸ್ ಪರ್ಫಾರ್ಮೆನ್ಸ್ ಪ್ರೇರಿತ ಅಪಾಚೆ ಆರ್‌ಟಿಆರ್ 165 ಆರ್‌ಪಿ ಬಿಡುಗಡೆ ಮಾಡಿದ ಟಿವಿಎಸ್

ರೇಸ್ ಪರ್ಫಾರ್ಮೆನ್ಸ್ ಪ್ರೇರಿತ ಅಪಾಚೆ ಆರ್‌ಟಿಆರ್ 165 ಆರ್‌ಪಿ ಬಿಡುಗಡೆ ಮಾಡಿದ ಟಿವಿಎಸ್

ಟಿವಿಎಸ್ ಮೋಟಾರ್(TVS Motor) ಕಂಪನಿಯು ರೇಸ್ ಪರ್ಫಾರ್ಮೆನ್ಸ್ ಪ್ರೇರಿತ ಅಪಾಚೆ ಆರ್‌ಟಿಆರ್ 165 ಆರ್‌ಪಿ ಬಿಡುಗಡೆ ಮಾಡಿದ್ದು, ಹೊಸ ಬೈಕ್ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 1.45 ಲಕ್ಷ ಬೆಲೆ ಹೊಂದಿದೆ.

ರೇಸ್ ಪರ್ಫಾರ್ಮೆನ್ಸ್ (RP) ಸರಣಿಯ ಅಡಿಯಲ್ಲಿ ಟಿವಿಎಸ್ ಮೋಟಾರ್ ಕಂಪನಿಯು ಅಪಾಚೆ ಆರ್‍‌ಟಿಆರ್ 165 ಆರ್‌ಪಿ ಮಾದರಿಯನ್ನು ಬಿಡುಗಡೆ ಮಾಡಿದ್ದು, ಸೀಮಿತ ಸಂಖ್ಯೆಯಲ್ಲಿ ಮಾತ್ರ ಖರೀದಿಗೆ ಲಭ್ಯವಿರುವ ಹೊಸ ಬೈಕ್ ಕೇವಲ 200 ಯುನಿಟ್‌ಗಳು ಮಾತ್ರವೇ ಖರೀದಿಗೆ ಲಭ್ಯವಿರಲಿವೆ.

ನಿಗದಿತ ಸಂಖ್ಯೆಯ ನಂತರ ಮಾರಾಟವು ಸ್ಥಗಿತಗೊಳ್ಳಲಿದ್ದು, ಹೊಸ ಬೈಕ್ ಮಾದರಿಯು ಸ್ಟ್ಯಾಂಡರ್ಡ್ ಅಪಾಚೆ ಆರ್‍‌ಟಿಆರ್ ಮಾದರಿಗಿಂತಲೂ ಹೆಚ್ಚು ಶಕ್ತಿಶಾಲಿ ಎಂಜಿನ್ ಮತ್ತು ರೇಸಿಂಗ್ ಪ್ರೇರಿತ ಬಣ್ಣದ ಆಯ್ಕೆ ಪಡೆದುಕೊಂಡಿದೆ.

ಹೊಸ ಅಪಾಚೆ ಆರ್‌ಟಿಆರ್ 165 ರೇಸ್ ಪರ್ಫಾರ್ಮೆನ್ಸ್ ಮಾದರಿಯು 160 ಸಿಸಿ ವಿಭಾಗದಲ್ಲೇ ಅತ್ಯಂತ ಶಕ್ತಿಶಾಲಿ ಬೈಕ್ ಎಂದು ಟಿವಿಎಸ್ ಕಂಪನಿಯು ಹೇಳಿಕೊಂಡಿದ್ದು, ಈ ಬೈಕ್ ಅನ್ನು ಹೊಸ ಎಂಜಿನ್ ಮತ್ತು ಸುಧಾರಿತ ವೈಶಿಷ್ಟ್ಯಗಳೊಂದಿಗೆ ಪರಿಚಯಿಸಲಾಗಿದೆ.

ಅಪಾಚೆ ಆರ್‌ಟಿಆರ್ 165 ಆರ್‌ಪಿ ಮಾದರಿಯಲ್ಲಿ ಟಿವಿಎಸ್ ಕಂಪನಿಯು 164.9 ಸಿಸಿ ಸಿಂಗಲ್ ಸಿಲಿಂಡರ್ ಪ್ರೇರಿತ 4 ವಾಲ್ವ್ ಎಂಜಿನ್‌ ಜೋಡಣೆ ಮಾಡಿದ್ದು, ಇದು 10,000 ಆರ್‌ಪಿಎಂನಲ್ಲಿ 19.2 ಬಿಎಚ್‌ಪಿ ಮತ್ತು 8,750 ಆರ್‌ಪಿಎಂನಲ್ಲಿ 14.2 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಟಿವಿಎಸ್ ಕಂಪನಿಯು 164.9 ಸಿಸಿ ಸಿಂಗಲ್ ಸಿಲಿಂಡರ್ ಪ್ರೇರಿತ 4 ವಾಲ್ವ್ ಎಂಜಿನ್‌ ಅನ್ನು ವಿಶೇಷವಾಗಿ ರೇಸಿಂಗ್ ಕಾರ್ಯಕ್ಷಮತೆಗಾಗಿ ವಿನ್ಯಾಸಗೊಳಿಸಲಾಗಿದ್ದು, ಈ ಬೈಕ್‌ನಲ್ಲಿ ಹೊಸ ಸಿಲಿಂಡರ್ ಅನ್ನು ಅಳವಡಿಸಲಾಗಿದೆ.

ರೇಸಿಂಗ್ ಮಾದರಿಯಲ್ಲಿರುವ ಹೊಸ ಸಿಲಿಂಡರ್ ಶೇಕಡಾ 35ರಷ್ಟು ಕಾರ್ಯಕ್ಷಮತೆ ಹೆಚ್ಚಿಸಲಿದ್ದು, ಇದರ ಜೊತೆಗೆ ಹೊಸ ಎಂಜಿನ್ ನಲ್ಲಿ ನೀಡಲಾಗಿರುವ ಟ್ವಿನ್ ಎಲೆಕ್ಟ್ರೋಡ್ ಸ್ಪಾರ್ಕ್ ಪ್ಲಗ್ ಕೂಡಾ ಉತ್ತಮವಾಗಿದೆ.

ಎಂಜಿನ್‌ನ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಸುಧಾರಿತ ಎಂಜಿನ್ ಜೊತೆಗೆ ಶೇಕಡಾ 15 ರಷ್ಟು ದೊಡ್ಡ ವಾಲ್ವ್‌ಗಳನ್ನು ಅಳವಡಿಸಲಾಗಿದ್ದು, ಇದು ಎಂಜಿನ್‌ನ ಕಾರ್ಯಕ್ಷಮತೆಯನ್ನು ಹೆಚ್ಚಿಸಿದೆ. ಇದಲ್ಲದೆ ಎಂಜಿನ್ ಪಿಸ್ಟನ್‌ನ ಸಂಕೋಚನ ಅನುಪಾತವನ್ನು ಸಹ ಹೆಚ್ಚಿಸಲಾಗಿದ್ದು, ಡಿಕಾಲ್, ಸ್ಲಿಪ್ಪರ್ ಕ್ಲಚ್, ಹೊಂದಾಣಿಕೆ ಮಾಡಬಹುದಾದ ಬ್ರೇಕ್ ಲಿವರ್ ಮತ್ತು ಕ್ಲಚ್ ಸಹ ಹೊಂದಿದೆ.

ಇನ್ನು ಬೈಕ್ ಪ್ರೀಮಿಯಂ ಲುಕ್ ಹೆಚ್ಚಿಸಲು ಎಲ್‌ಇಡಿ ಹೆಡ್‌ಲೈಡ್, ಸ್ಲಿಪ್ಪರ್ ಕ್ಲಚ್, ಸಿಗ್ನೇಚರ್ ಎಲ್‌ಇಡಿ ಲೈಟ್, ಬೈಕ್ ಹಿಂಭಾಗದಲ್ಲಿ ರೇಡಿಯಲ್ ಟೈರ್, ಕೆಂಪು ಮಿಶ್ರಲೋಹದ ಚಕ್ರಗಳು, ಕಸ್ಟಮೈಸ್ ಮಾಡಲಾದ ಸ್ಟಿಕ್ಕರ್, ಬ್ರಾಸ್ ಕೋಟಿಂಗ್ ಮಾಡಲಾದ ಡ್ರೈವ್ ಚೈನ್ ಮತ್ತು ಸ್ಪ್ರಾಕೆಟ್ ಅನ್ನು ಪಡೆದುಕೊಂಡಿದೆ.

ಇದಲ್ಲದೇ 160ಸಿಸಿ ಬೈಕ್ ವಿಭಾಗದಲ್ಲೇ ಮೊದಲ ಬಾರಿಗೆ ಈ ಬೈಕಿನಲ್ಲಿ 240 ಎಂಎಂ ಡಿಸ್ಕ್ ಬ್ರೇಕ್ ನೀಡಲಾಗಿದ್ದು, ಇದರೊಂದಿಗೆ ಇತ್ತೀಚೆಗೆ ಕಂಪನಿಯು ಅಪಾಚೆ ಬೈಕ್ ಸರಣಿಯಲ್ಲಿ ನೀಡಲಾಗುತ್ತಿರುವ ಟಿವಿಎಸ್ ಕನೆಕ್ಟ್ ಅಪ್ಲಿಕೇಶನ್ ಅನ್ನು ನವೀಕರಿಸಿ ಹೊಸ ಮಾದರಿಯಲ್ಲಿ ಜೋಡಿಸಿದೆ.

ಟಿವಿಎಸ್ ಹೊಸ ಕನೆಕ್ಟ್ ಅಪ್ಲಿಕೇಶನ್ ನಲ್ಲಿ What3words ವೈಶಿಷ್ಟ್ಯವನ್ನು ಹೊಸದಾಗಿ ಅಪ್‌ಡೆಟ್ ಮಾಡಲಾಗಿದ್ದು, ಇದು ಜಿಪಿಎಸ್ ನ್ಯಾವಿಗೇಶನ್ ಅನ್ನು ಹೆಚ್ಚು ನಿಖರವಾಗಿ ತಿಳಿಸುತ್ತದೆ. What3words ವೈಶಿಷ್ಟ್ಯವು ಈಗಾಗಲೇ ನಾಲ್ಕು ಚಕ್ರಗಳ ವಿಭಾಗದಲ್ಲಿ ಲಭ್ಯವಿದ್ದು, ಟಿವಿಎಸ್ ಮೋಟಾರ್ ಕಂಪನಿಯು ಈ ವೈಶಿಷ್ಟ್ಯತೆಯನ್ನು ದ್ವಿಚಕ್ರ ವಾಹನ ವಿಭಾಗಕ್ಕೆ ಪರಿಚಯಿಸಿದ ಮೊದಲ ವಾಹನ ತಯಾರಿಕ ಕಂಪನಿಯಾಗಿ ಗುರುತಿಸಿಕೊಂಡಿದೆ.

ಅಪಾಚೆ ಶ್ರೇಣಿಯಲ್ಲಿ ಟಿವಿಎಸ್ ಕಂಪನಿಯು ಅಪಾಚೆ ಆರ್‌ಟಿಆರ್ 160 4ವಿ, ಅಪಾಚೆ ಆರ್‌ಟಿಆರ್ 200 4ವಿ ಮತ್ತು ಅಪಾಚೆ ಆರ್‌ಆರ್ 310 ಮಾದರಿಗಳಲ್ಲಿ ಹೊಸ ವೈಶಿಷ್ಟ್ಯತೆಯುಳ್ಳ ಟಿವಿಎಸ್ ಕನೆಕ್ಟ್ ಅಪ್ಲಿಕೇಶನ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತಿದ್ದು, ಎನ್‌ಟಾರ್ಕ್ 125 ಸ್ಕೂಟರ್‌ನಲ್ಲೂ ಈ ಅಪ್ಲಿಕೇಶನ್ ಲಭ್ಯವಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

UPSC CDS II Result 2021 : ಯುಪಿಎಸ್ಸಿ ಸಿಡಿಎಸ್ ಪರೀಕ್ಷೆಯ ಫಲಿತಾಂಶ ರಿಲೀಸ್

Fri Dec 24 , 2021
ಕೇಂದ್ರ ಲೋಕಾಸೇವಾ ಆಯೋಗವು ಕಂಬೈನ್ಡ್ ಡಿಫೆನ್ಸ್ ಸರ್ವೀಸಸ್ II ಲಿಖಿತ ಪರೀಕ್ಷೆಯ ಫಲಿತಾಂಶವನ್ನು ಪ್ರಕಟ ಮಾಡಲಾಗಿದೆ. ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಇದೀಗ ಫಲಿತಾಂಶವನ್ನು ವೀಕ್ಷಿಸಬಹುದು. ಯುಪಿಎಸ್ಸಿ ಒಟ್ಟು 339 ಹುದ್ದೆಗಳನ್ನು ಭರ್ತಿ ಮಾಡಲು ಆನ್‌ಲೈನ್ ಮೂಲಕ ಆಗಸ್ಟ್ 4,2021 ರಿಂದ ಆಗಸ್ಟ್ 24,2021ರೊಳಗೆ ಅರ್ಜಿಯನ್ನು ಆಹ್ವಾನಿಸಲಾಗಿತ್ತು. ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುವುದು. ಲಿಖಿತ ಪರೀಕ್ಷೆಯನ್ನು ನವೆಂಬರ್ 14,2021ರಂದು ನಡೆಸಲಾಗಿತ್ತು. ಇದೀಗ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಲಾಗಿದೆ. […]

Advertisement

Wordpress Social Share Plugin powered by Ultimatelysocial