ರಾಹುಲ್ ಗಾಂಧಿ ಅರೆಹುಚ್ಚ ಅನ್ನೋ ಯತ್ನಾಳ ಹೇಳಿಕೆಗೆ ಸಮರ್ಥನೆ..!

ಗದಗನಲ್ಲಿ ಸಮರ್ಥನೆ ಕೊಟ್ಟ ಶಾಸಕ ಬಸನಗೌಡ ಪಾಟೀಲ. ಬಟಾಟಿಯಿಂದ ಬಂಗಾರ ತೆಗೆದರೆ ಶಾಣ್ಯಾ ಅಂತಾರೆಯೇ? ಒಂದು ಲೀಟರ್ ಗೋಧಿ‌ ಅಂದ್ರೆ ಶಾಣ್ಯಾ ಅಂತಾರೆಯೇ?  200 ಲೀಟರ್ ಕರೆಂಟ್ ಕೊಡ್ತಿನಿ‌ ಅಂದ್ರೆ ಶಾಣ್ಯಾ ಅಂತಾರೆನ್ರಿ…? ರಾಹುಲ್ ಗಾಂಧಿಯಂಥ ಬುದ್ಧಿವಂತ ರಾಜಕಾರಣಿ‌ ಇಡೀ ವಿಶ್ವದಲ್ಲೇ ಹುಟ್ಟಿಲ್ಲ ಅಂತ ಬರೆಯಿರಿ. ನಮಗೇನಾಬೇಕು? ಸೋನಿಯಾ ಗಾಂಧಿ ವಿಷಕನ್ಯೆ ಅನ್ನೋ ಯತ್ನಾಳ‌ ಹೇಳಿಕೆಗೆ ಸ್ಪಷ್ಟನೆ.  ನಾನು ಸೋ‌ನಿಯಾ ಗಾಂಧಿ ವಿಷಕನ್ಯೆಯೇ ಅಂತಾ ಕ್ವಷನ್ ಮಾರ್ಕ್ ಇಟ್ಟಿದ್ದೇನೆ.

ಪ್ರಧಾನಿಗಳು ವಿಷಸರ್ಪ‌ ಅಂದಾಗ, ಸೋನಿಯಾ ಗಾಂಧಿ ವಿಷಕನ್ಯೆಯೇ? ಅಂತ ಪ್ರಶ್ನೆ ಹಾಕಿದ್ದೇನೆ. ಹೌದೋ‌ ಅಲ್ಲವೋ ಅನ್ನೋದನ್ನ ಖರ್ಗೆ ಹೇಳಬೇಕು, ರಾಹುಲ್ ಗಾಂಧಿ ಹೇಳಬೇಕು. ಪ್ರಧಾನಿ ಮೋದಿಗೆ ಪ್ರಿಯಾಂಕ ಖರ್ಗೆ ನಾಲಾಯಕ್ ಮಗ ಅನ್ನೋ ಹೇಳಿಕೆ ವಿಚಾರ, ನಾವು ಅವರಿಗೆ ಗೌರವ ಕೊಡ್ತಿದ್ದೇವೆ.  ದಲಿತ ಮುಖಂಡರಿದ್ದಾರೆಂದು ಇಷ್ಟು ದಿನ ಗೌರವ ಕೊಡ್ತಿದ್ದೇವೆ. ಏನಾದರು ಅಂದ ತಕ್ಷಣ ಅದನ್ನ ಒಯ್ದು ದಲಿತರಿಗೆ ಹಚ್ಚತಾರೆ. ಈಗಿನ ರಾಜಕಾರಣ ಜಾತಿಗೆ ಒಯ್ದು ಹಚ್ಚುತ್ತಾರೆ. ಹಾಗಂತ ಸುಮ್ಮನೇ ಕೂತಿದ್ದೇವೆ ಅಂದ್ರೆ, ಅದರರ್ಥ,ಅವರಾಗಿಯೇ ಸತ್ಯಾನಾಶ ಆಗುತ್ತಿದ್ದಾರೆ. ಸುಮ್ಮನೇ ಪಾಪ ಖರ್ಗೆ ಬಗ್ಗೆ ಯಾಕೆ ಮಾತನಾಡಬೇಕು. ಪ್ರೀಯಾಂಕ ಖರ್ಗೆಗೆ ಇನ್ನೂ ಸಹ ಮ್ಯಾಚುರಿಟಿ ಇಲ್ಲ. ಇವರಿಗೆಲ್ಲ ಹಿಂದೂಗಳ‌ ವಿರುದ್ಧ ಮಾತನಾಡಿದರೆ ಖುಷಿ..

ಸಿದ್ಧಗಂಗಾ ಸ್ವಾಮಿಗಳು ಲಿಂಗೈಕ್ಯರಾದಾಗ AIMM ನ ಓಎಸಿ ಕಾನ್ಫುರೆನ್ಸ್ ಮಾಡ್ತಾರೆ. ಬೆಂಗಳೂರಿನ ಸ್ಟಾರ್ ಹೋಟೆಲ್ ನಲ್ಲಿ ದಲಿತ ಹಾಗೂ ಮುಸ್ಲಿಮರ ಕಾನ್ಫುರೆನ್ಸ್ ಮಾಡ್ತಾರೆ. ಸಿದ್ಧಗಂಗಾ ಮಠದ ಶ್ರೀಗಳು ಲಿಂಗೈಕ್ಯರಾದಾಗ ಪ್ರೀಯಾಂಕ ಖರ್ಗೆ ಇದನ್ನ ಮಾಡುತ್ತಾರೆ. ಮಾತಿಗೊಮ್ಮೆ ಬಾಬಾಸಾಹೇಬ ಅಂಬೇಡ್ಕರ್ ವರನ್ನ ತೆಗೆದುಕೊಳ್ತಾರೆ. ಕಾಂಗ್ರೆಸ್ ಅನ್ನುವದು ನಮ್ಮ ದಲಿತರ ಮಾರಣಹೋಮ ಮಾಡುವಂಥದ್ದು ಅಂತಾ ಅಂಬೇಡ್ಕರ್ ಹೇಳಿದ್ದರು. ಅದಕ್ಕೆ ಯಾರೂ ಹೋಗಬೇಡಿ ಅಂತ ಹೇಳಿದ್ದರು. ಹಾಗಾದ್ರೆ ಬಾಬಾಸಾಹೇಬ ಅಂಬೇಡ್ಕರ್ ಹೇಳಿದಂತೆ ಖರ್ಗೆ ನಡೆಯಬೇಕಿತ್ತು.

ಅಂಬೇಡ್ಕರವರನ್ನ ಕಾಂಗ್ರೆಸ್ ನವರು‌ ಸಾಕಷ್ಟು‌ಅವಮಾನ ಮಾಡಿದ್ದಾರೆ. ವೀರಸಾವರ್ಕರ್ ಬಗ್ಗೆ ಬಾಯಿಗೆ‌ ಬಂದಂತೆ ಮಾತನಾಡಿದ್ದಾರೆ. ದೇಶದ ಪ್ರಧಾನಿಗಳ ಬಗ್ಗೆ ಬಾಯಿಗೆ ಬಂದಂತೆ ಮಾತಾಡಿದಾರೆ. ರಾಹುಲ್ ಗಾಂಧಿ, ಸೋನಿಯಾ ಗಾಂಧಿಗೆ ನೈತಿಕತೆಯೇ ಇಲ್ಲ. ಅವ್ರು ಯಾರೋ? ಯಾರಿಗೆ ಯಾರೋ? ಅವರು ಯಾರ ಉತ್ಪಾದನೇಯೋ, ಯಾವ ಪ್ರೊಡಕ್ಷನ್ ಇದೆಯೋ ಗೊತ್ತಿಲ್ಲ. ಮೈಕೋ ಅಥವಾ ಎಮ್ ಎಸ್ ಆಫೀಸ್ ಒನ್ ಇದೆಯೋ ಗೊತ್ತಿಲ್ಲ. ಅದು ಇಂಡಿಯನ್ ಕೂಡ ಅಲ್ಲ. ಇಂಡಿಯನ್ ತಲೆ ಇದ್ರೆ ಈ ರೀತಿ ಆಗುವದೂ ಇಲ್ಲ. ಗದಗನಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಂಗಣ್ಣ ಕರಡಿ ಕುಟುಂಬ ರಾಜಕಾರಣಕ್ಕೆ ಬ್ರೇಕ್ ಹಾಕಲು ಅಬ್ಬರದ ಪ್ರಚಾರ..!

Tue May 2 , 2023
ಕೊಪ್ಪಳ ಕ್ಷೇತ್ರದಲ್ಲಿ ಪ್ರತಿಷ್ಠೆಗಾಗಿ ನಡೆಯುತ್ತಿರುವ ಚುನಾವಣಾ ಯುದ್ಧ,  ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ತ್ರಿಕೋನ ಜಿದ್ದಾಜಿದ್ದಿ ಸ್ಪರ್ಧೆ, ಬಿಜೆಪಿ ಟಿಕೆಟ್ ವಂಚಿತ ಸಿ.ವಿ ಚಂದ್ರಶೇಖರಗೆ ಸಂಸದ ಸಂಗಣ್ಣ ಕರಡಿ ಟಾರ್ಗೆಟ್, ಬಿಜೆಪಿ ತೊರೆದು ಜೆಡಿಎಸ್ ಟಿಕೆಟ್ ಪಡದ ಸಿ.ವಿ ಚಂದ್ರಶೇಖರ, ಸಂಗಣ್ಣ ಕರಡಿ ಕುಟುಂಬ ರಾಜಕಾರಣಕ್ಕೆ ಬ್ರೇಕ್ ಹಾಕಲು ಅಬ್ಬರದ ಪ್ರಚಾರ. ಸಂಗಣ್ಣ ಕರಡಿ ಕುಟುಂಬದಿಂದ ನೋವುಂಡ ಸಿ.ವಿ ಚಂದ್ರಶೇಖರ. ಜಿದ್ದಿಗೆ ಬಿದ್ದು ಜೆಡಿಎಸ್ ಟಿಕೆಟ್ ಗಿಟ್ಟಿಸಿಕೊಂಡು ಸಂಗಣ್ಣ ಕರಡಿಗೆ ಸೆಡ್ಡುಹೊಡೆದ […]

Advertisement

Wordpress Social Share Plugin powered by Ultimatelysocial