ವೈರಲ್ ಆಯ್ತು ನಟ ರಾಹುಲ್ ರಾಮಕೃಷ್ಣ ಕಿಸ್ಸಿಂಗ್ ಫೋಟೋ..!

 

ತೆಲುಗಿನ ಅರ್ಜುನ್ ರೆಡ್ಡಿ ಸಿನಿಮಾದ ಮೂಲಕ ಸಿನಿಮಾ ಜಗತ್ತಿಗೆ ಪರಿಚಿತರಾದ ರಾಹುಲ್ ರಾಮಕೃಷ್ಣ ತಮ್ಮ ಮದುವೆ ವಿಚಾರದಲ್ಲಿ ಎಡವಟ್ಟು ಮಾಡಿಕೊಂಡಿದ್ದಾರೆ. ಹುಡುಗಿಯೊಬ್ಬಳಿಗೆ ಮುತ್ತಿಡುವ ಫೋಟೋವನ್ನು ಟ್ವಿಟರ್ ನಲ್ಲಿ ಹಂಚಿಕೊಂಡು, ‘ಕೊನೆಗೂ ಮದುವೆ ಆಗುತ್ತಿದ್ದೇನೆ.

ಶೀಘ್ರದಲ್ಲೇ’ ಎಂದು ಬರೆದುಕೊಂಡಿದ್ದರು. ಈ ಟ್ವಿಟ್ ಮಾಡಿದ ಕೆಲವೇ ನಿಮಿಷಗಳಲ್ಲೇ ಈ ಅಕ್ಷರಗಳನ್ನು ಎಡಿಟ್ ಮಾಡಿ, ಆಗುತ್ತಿದ್ದ ಮುಜಗರವನ್ನು ತಪ್ಪಿಸಿಕೊಂಡಿದ್ದಾರೆ. ತೆಲುಗಿನಲ್ಲಿ ಹಲವು ಚಿತ್ರಗಳನ್ನು ಮಾಡಿರುವ ರಾಹುಲ್ ರಾಮಕೃಷ್ಣ, ಮೂಲತಃ ಲೇಖಕರೂ ಹೌದು.

ಸೈನ್ಮಾ ಎಂಬ ಕಿರುಚಿತ್ರದ ಮೂಲಕ ಬಣ್ಣದ ಜಗತ್ತಿಗೆ ಕಾಲಿಟ್ಟವರು ಆನಂತರ ಹಲವು ಚಿತ್ರಗಳಲ್ಲಿ ನಟಿಸಿದರು. ಇವರನ್ನು ಹೆಚ್ಚು ಜನಪ್ರಿಯತೆಗೆ ತಂದ ಸಿನಿಮಾ ವಿಜಯ್ ದೇವರಕೊಂಡ ನಾಯಕನಾಗಿ ನಟಿಸಿದ್ದ ಅರ್ಜುನ್ ರೆಡ್ಡಿ. ರಾಹುಲ್ ರಾಮಕೃಷ್ಣ ಈ ಹಿಂದೆ ಬಿಂದು ಎಂಬ ಹುಡುಗಿಯೊಂದಿಗೆ ಅಫೇರ್ ಇತ್ತು. ಇಬ್ಬರೂ ಗಾಢವಾಗಿಯೇ ಪ್ರೀತಿಸುತ್ತಿದ್ದರು. ಹಾಗಾಗಿ ರಾಹುಲ್ ಯುವತಿಯೊಬ್ಬಳ ತುಟಿಗೆ ತುಟಿ ಬೆರೆಸಿ ಹಾಕಿದ್ದ ಫೋಟೋವನ್ನು ಬಹುತೇಕರು ಬಿಂದು ಎಂದೇ ನಂಬಿದ್ದರು.

ಹೊಸ ಜೋಡಿಗೆ ಶುಭವಾಗಲಿ ಎಂದು ಹಲವು ಸಂದೇಶ ರವಾನಿಸಿದ್ದರು. ಬಿಂದು ಮತ್ತು ನಿಮ್ಮ ಜೀವನ ಸುಖಮಯವಾಗಿರಲಿ ಎಂದೂ ಹಾರೈಸಿದ್ದರು. ಇದನ್ನು ಅರಿತ ರಾಹುಲ್ ತಕ್ಷಣವೇ ಟ್ವಿಟ್ ಅನ್ನು ತಿದ್ದುಪಡೆ ಮಾಡಿ ಸ್ಪಷ್ಟೀಕರಣ ನೀಡಿದ್ದಾರೆ. ರಾಹುಲ್ ಮದುವೆ ಆಗುತ್ತಿರುವ ಹುಡುಗಿ ಬಿಂದು ಅಲ್ಲವಂತೆ. ಆಕೆ ಹರಿತ ಎಂದು ಅವರೇ ಸ್ಪಷ್ಟೀಕರಣ ನೀಡಿದ್ದಾರೆ. ‘ಸಣ್ಣ ತಿದ್ದುಪಡೆ ಅಂದರೆ, ನಾನು ಮದುವೆ ಆಗುತ್ತಿರುವ ಹುಡುಗಿಯ ಹೆಸರು ಬಿಂದು ಅಲ್ಲ, ಹರಿತ’ ಎಂದು ಅವರೇ ಬರೆದುಕೊಂಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಾಲ್ಯ ಸ್ನೇಹಿತನ ಮದುವೆಗೆ ಪತ್ನಿ ಸಮೇತ ಆಗಮಿಸಿದ ಯಶ್!

Fri May 13 , 2022
  ನಟ ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿರಬಹುದು ಆದರೆ ಹತ್ತಿದ ಏಣಿಯನ್ನು ಮರೆತಿಲ್ಲ. ತನಗೆ ಸಹಾಯ ಮಾಡಿದವರು, ತನ್ನ ಆಪ್ತ ಸ್ನೇಹಿತರನ್ನು ಯಶ್ ಹತ್ತಿರದಲ್ಲಿಯೇ ಇಟ್ಟುಕೊಂಡಿದ್ದಾರೆ. ‘ಕೆಜಿಎಫ್ 2’ ಸಿನಿಮಾದ ಪ್ರಚಾರ ಸಂದರ್ಭದಲ್ಲಿ ಹಿಂದಿಯ ಚಾನೆಲ್ ಒಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಮಾತನಾಡಿದ್ದ ಯಶ್ ಮೈಸೂರಿನಲ್ಲಿ ನನಗೆ ಹಲವಾರು ಮಂದಿ ಗೆಳೆಯರಿದ್ದಾರೆ. ಬಾಲ್ಯ, ಯೌವ್ವನದಲ್ಲಿ ನನಗೆ ಸ್ನೇಹಿತರಾದವರು ಈಗಲೂ ನನ್ನ ಸ್ನೇಹಿತರಾಗಿಯೇ ಮುಂದುವರೆಯುತ್ತಿದ್ದಾರೆ. ನನ್ನ ಆತ್ಮೀಯ ಸ್ನೇಹಿತರು ಈಗಲೂ ನನ್ನ […]

Advertisement

Wordpress Social Share Plugin powered by Ultimatelysocial