ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುತ್ತಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುತ್ತಿದೆ. ಈ ಮಧ್ಯೆ ಮಂಗಳೂರು-ಹಾಸನ ಸಂಪರ್ಕಿಸುವ ಬಿಸಿರೋಡ್-ಅಡ್ಡಹೊಳೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದಾಗಿ ರಸ್ತೆಯನ್ನು ಅಗೆಯಲಾಗಿದೆ. ಹೀಗಾಗಿ ಪ್ರತಿದಿನ ಕಲ್ಲಡ್ಕ, ಸೂರಿಕುಮೇರು, ಮೆಲ್ಕಾರ್ ಎಂಬಲ್ಲಿ ಹೆವಿ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಇಂದು ಕೂಡಾ ಬೆಳಗ್ಗೆ ಮಳೆ ಮಧ್ಯೆ ವಿವಿಧ ಕೆಲಸದ ನಿಮಿತ್ತ ವಾಹನಗಳಲ್ಲಿ ಹೊರಟ ಮಂದಿ ಕಲ್ಲಡ್ಕದಲ್ಲಿ ಗಂಟೆಗಟ್ಟಲೇ ಕಾಲ
ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿ ಪರದಾಡುವಂತಾಯಿತು. ಡಾಮರು ರಸ್ತೆಯನ್ನು ಸಂಪೂರ್ಣ ಅಗೆದು ತೆಗೆಯಲಾಗಿದ್ದು ಹೀಗಾಗಿ ಬಸ್, ಕಾರು, ಲಾರಿ, ದ್ವಿಚಕ್ರ ವಾಹನ ಸವಾರರು ದಿನಾಲೂ ಪರದಾಡಿ ಪರದಾಡಿ ಸಂಚರಿಸುವಂತಾಗಿದೆ. ಮಳೆಗಾಲದಲ್ಲಿ ಕಾಮಗಾರಿ ಕಷ್ಟ ಎಂದು ಗೊತ್ತಿದ್ದರೂ ಅವೈಜ್ಞಾನಿಕವಾಗಿ ಕಾಮಗಾರಿ ಮಾಡಲಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಅಲ್ಲದೇ ರಸ್ತೆಯಲ್ಲಿರುವ ಗುಂಡಿಯು ಮಳೆ ನೀರಿನಿಂದ ಆವೃತ್ತವಾಗಿದೆ. ಇದರಿಂದ ಅನೇಕ ಅಪಘಾತಗಳು ನಡೆದಿವೆ. ಆದರೆ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskann

Please follow and like us:

Leave a Reply

Your email address will not be published. Required fields are marked *

Next Post

ಬಾಲಿವುಡ್​ ನಟ ರಾಜ್ ಬಬ್ಬರ್ ಗೆ 2 ವರ್ಷ ಜೈಲು ಶಿಕ್ಷೆ

Fri Jul 8 , 2022
  ಮತಗಟ್ಟೆ ಅಧಿಕಾರಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಬಾಲಿವುಡ್ ನಟ ಹಾಗೂ ಮಾಜಿ ರಾಜ್ಯ ಸಭಾ ಸದಸ್ಯ, ಕಾಂಗ್ರೆಸ್ ನಾಯಕ ರಾಜ್ ಬಬ್ಬರ್ ಅವರಿಗೆ ಇಲ್ಲಿನ ನ್ಯಾಯಾಲಯ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.  ಸಾರ್ವಜನಿಕ ಸೇವಕನನ್ನು ತನ್ನ ಕರ್ತವ್ಯವನ್ನು ನಿರ್ವಹಿಸದಂತೆ ತಡೆಯಲು ಮತ್ತು ಇತರ ಮೂರು ಅಪರಾಧಗಳನ್ನು ಭಾಗಿಯಾಗಿದ್ದ ನಟ ರಾಜ್ ಬಬ್ಬರ್ಗೆ ಶಿಕ್ಷೆ ವಿಧಿಸಲಾಗಿದೆ.ಮೇ 1996 ರಲ್ಲಿ ಚುನಾವಣೆಯ ಸಂದರ್ಭದಲ್ಲಿ ಮತಗಟ್ಟೆ ಅಧಿಕಾರಿ ಬಬ್ಬರ್ ವಿರುದ್ಧ […]

Related posts

Advertisement

Wordpress Social Share Plugin powered by Ultimatelysocial