ರಶ್ಮಿಕಾ ಮಂದಣ್ಣ ಹೇಳಿಕೆಗೆ ಸೌತ್​ ಸಿನಿ ಪ್ರಿಯರ ಆಕ್ರೋಶ; ಅಷ್ಟಕ್ಕೂ ಈ ಸುಂದ್ರಿ ಅಂದಿದ್ದೇನು..?

ನ್ನಡದ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಕಿರಿಕ್​ನಿಂದಲೇ ಫುಲ್​ ಫೇಮಸ್​. ಯಾವಾಗಲೂ ಒಂದಲ್ಲ ಒಂದು ರೀತಿ ಹೇಳಿಕೆ ನೀಡಿ ವಿವಾದದ ಬಿರುಗಾಳಿಯೇ ಎಬ್ಬಿಸುತ್ತಿರುತ್ತಾರೆ. ಸದ್ಯ ದಕ್ಷಿಣ ಭಾರತದ ಸಿನಿಮಾ ಸಾಂಗ್​ಗಳೆಲ್ಲ ಮಾಸ್​ ಮಸಾಲಾ ಐಟಮ್​ ಡ್ಯಾನ್ಸ್​ ಎಂದು ಹೇಳಿ ಸಿನಿ ಪ್ರಿಯರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.ಬಾಲಿವುಡ್​ನ ಸ್ಟಾರ್ ಸಿದ್ಧಾರ್ಥ್​ ಮಲ್ಹೋತ್ರಾ ಜೊತೆ ರಶ್ಮಿಕಾ ಮಿಷನ್ ಮಜ್ನು ಎಂಬ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಈ ಸಿನಿಮಾದ ಸಾಂಗ್​ ಲಾಂಚ್​ನ ಇವೆಂಟ್​ನಲ್ಲಿ ರಶ್ಮಿಕಾ ಸೌತ್​ ಸಿನಿಮಾ ಸಾಂಗ್​ಗಳ ಕುರಿತು ಅವಮಾನ ಮಾಡಿದ್ದಾರೆ ಎನ್ನಲಾಗುತ್ತಿದೆ.ಮಿಷನ್ ಮಜ್ನು ಸಿನಿಮಾದ ಸಾಂಗ್​ ಲಾಂಚ್​ನ ಇವೆಂಟ್​ನಲ್ಲಿ ಮಾತನಾಡುತ್ತಾ, ಬಾಲಿವುಡ್​ನಲ್ಲಿ ರೊಮ್ಯಾಂಟಿಕ್​ ಸಾಂಗ್​ಗಳಿವೆ. ಇವು ಮಸ್ತ್​ ಆಗಿವೆ. ಆದ್ರೆ, ದಕ್ಷಿಣ ಭಾರತದ ಸಿನಿಮಾ ಸಾಂಗ್​ಗಳೆಲ್ಲ ಮಾಸ್​ ಮಸಾಲಾ ಐಟಮ್​ ಡ್ಯಾನ್ಸ್​ ನಂಬರ್ಸ್​ ಎಂದಿದ್ದಾರೆ. ಈ ಹೇಳಿಕೆಗೆ ದಕ್ಷಿಣ ಭಾರತದ ಸಿನಿ ಫ್ಯಾನ್ಸ್​ ವಿರೋಧ ವ್ಯಕ್ತಪಡಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

2022 ಕನ್ನಡ ಚಿತ್ರರಂಗಕ್ಕೆ ಗೋಲ್ಡನ್ ಇಯರ್ ಎಂದು ಹೇಳಲು ಇಲ್ಲಿವೆ ಐದು ಕಾರಣಗಳು.

Thu Dec 29 , 2022
2022 ವರ್ಷ ಬಾಲಿವುಡ್ ಸಿನಿ ಮಂದಿಗೆ ಅತಿಕೆಟ್ಟ ವರ್ಷವಾಗಿ ಪರಿಣಮಿಸಿದರೂ ಸಹ ದಕ್ಷಿಣ ಭಾರತ ಚಿತ್ರರಂಗಗಳ ಸಿನಿ ಮಂದಿಗೆ ಮಾತ್ರ ಗೋಲ್ಡ್ ಇಯರ್ ಆಗಿದೆ. ಹೌದು, ಕಳೆದೆರಡು ವರ್ಷಗಳಿಂದ ಕೊರೊನಾ ಲಾಕ್ ಡೌನ್ ತಲೆ ನೋವನ್ನು ಎದುರಿಸಿದ್ದ ದಕ್ಷಿಣ ಭಾರತ ಚಿತ್ರರಂಗಗಳಿಗೆ ಈ ವರ್ಷ ಬಿಡುಗಡೆಗೊಂಡ ಹಲವಾರು ಚಿತ್ರಗಳು ಭರ್ಜರಿಯಾಗಿ ಗೆದ್ದು ಮರುಜೀವ ಪಡೆದುಕೊಳ್ಳುವಂತೆ ಮಾಡಿವೆ. ಅದರಲ್ಲಿಯೂ ಈ ವರ್ಷ ವಿಶೇಷವಾಗಿ ಕನ್ನಡ ಚಲನಚಿತ್ರರಂಗಕ್ಕೆ ಗೋಲ್ಡನ್ ಇಯರ್ ಎಂದೇ ಹೇಳಬಹುದು. […]

Advertisement

Wordpress Social Share Plugin powered by Ultimatelysocial