‘ರಶ್ಮಿಕಾ ಹೇಳಿಕೆ ಎಸ್‌ಪಿಬಿ, ಎಸ್‌ ಜಾನಕಿ, ಹಂಸಲೇಖರಿಗೆ ಅವಮಾನ ಮಾಡಿದಂತೆ” – ಡಾ. ವಿ. ನಾಗೇಂದ್ರ ಪ್ರಸಾದ್!

ಶ್ಮಿಕಾ ಮಂದಣ್ಣ ವಿವಾದದಲ್ಲಿ ಸಿಕ್ಕಿಕೊಳ್ಳೋದು ಹೊಸತೇನೂ ಅಲ್ಲ. ಏನಾದರೂ ಒಂದು ಹೇಳಿಕೆ ಕೊಟ್ಟು ಪೇಚಿಗೆ ಸಿಲುಕುತ್ತಾರೆ. ಈಗ ನ್ಯಾಷನಲ್ ಕ್ರಶ್ ಕೊಟ್ಟ ಹೇಳಿಕೆಯೊಂದು ದಕ್ಷಿಣ ಭಾರತದ ಸಿನಿಮಾ ಮಂದಿಯ ಕೋಪಕ್ಕೆ ಕಾರಣವಾಗಿದೆ.ರಶ್ಮಿಕಾ ಮಂದಣ್ಣ ತನ್ನ ಬಾಲಿವುಡ್ ಸಿನಿಮಾ ‘ಮಿಷನ್ ಮಜ್ನು’ ಹಾಡು ಬಿಡುಗಡೆ ಕಾರ್ಯಕ್ರಮದ ವೇಳೆ ಕೊಟ್ಟ ಹೇಳಿಕೆ ಹಲವರ ನಿದ್ದೆ ಕೆಡಿಸಿದೆ.ಈ ಕಾರ್ಯಕ್ರಮದಲ್ಲಿ “ಬಾಲಿವುಡ್ ಸಿನಿಮಾ ಹಾಡು ಹೆಚ್ಚು ರೊಮ್ಯಾಂಟಿಕ್ ಆಗಿರುತ್ತವೆ. ಅದೇ ದಕ್ಷಿಣ ಭಾರತದ ಸಿನಿಮಾಗಳಲ್ಲಿ ಮಾಸ್ ಹಾಗೂ ಐಟಂ ಸಾಂಗ್‌ಗಳೇ ಹೆಚ್ಚಿರುತ್ತೆ.” ಎಂದು ಕೇಳಿದ್ದರು.

ರಶ್ಮಿಕಾ ಮಂದಣ್ಣ ನೀಡಿದ ಹೇಳಿಕೆ ಬಗ್ಗೆ ಚಿತ್ರ ಸಾಹಿತಿ ಡಾ. ವಿ ನಾಗೇಂದ್ರ ಪ್ರಸಾದ್ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಫಸ್ಟ್ ನ್ಯೂಸ್ ಜೊತೆ ಮಾತಾಡಿದ ನಾಗೇಂದ್ರ ಪ್ರಸಾದ್, ರಶ್ಮಿಕಾ ಮಂದಣ್ಣ ಅವರ ಮಾತುಗಳನ್ನು ಗಂಭೀರವಾಗಿ ಪರಿಗಣಿಸಬೇಡಿ. ಅವರ ಮಾತುಗಳಿಗೆ ಮಾನ್ಯತೆ ಕೊಟ್ಟರೆ ಸುಮ್ಮನೆ ದೊಡ್ಡವರಾಗುತ್ತಾರೆ. ಎಂದು ಹೇಳಿದ್ದಾರೆ.’ರಶ್ಮಿಕಾ ಅವರದ್ದು ಚಿಕ್ಕ ಪ್ರಪಂಚ’ರಶ್ಮಿಕಾ ಹೇಳಿಕೆಗೆ ಪ್ರತಿಕ್ರಿಯಿಸಿದ ಡಾ. ವಿ.ನಾಗೇಂದ್ರ ಪ್ರಸಾದ್ ರಶ್ಮಿಕಾ ಪ್ರಪಂಚ ಚಿಕ್ಕದು ಗಂಭೀರವಾಗಿ ಪರಿಗಣಿಸಬೇಡಿ ಎಂದು ಹೇಳಿದ್ದಾರೆ. ” ರಶ್ಮಿಕಾ ಮಂದಣ್ಣ ಅವರ ಮಾತುಗಳನ್ನು ಸೀರಿಯಸ್ ಆಗಿ ತೆಗೆದುಕೊಳ್ಳಬೇಡಿ. ಆ ಹುಡುಗಿಗೆ ಪಾಪ ಚಿತ್ರಗೀತೆಯ ಬಗ್ಗೆ ಏನು ಗೊತ್ತು? ಅವರು ಕಾಲೇಜಿನಿಂದ ಸಿನಿಮಾಗೆ ಬಂದಿದ್ದು. ಅವರದ್ದೊಂದು ಚಿಕ್ಕ ಪ್ರಪಂಚ. ಅಷ್ಟರೊಳಗೆ ಮಾತ್ರ ಯೋಚನೆ ಮಾಡಿರುತ್ತಾರೆ. ಅವರ ಹೇಳಿಕೆಗಳಿಗೆ ಮಾನ್ಯತೆ ಕೊಟ್ಟರೆ, ಅವರನ್ನು ಸುಮ್ಮನೆ ದೊಡ್ಡವರು ಮಾಡಿದ ಹಾಗೆ ಆಗುತ್ತೆ” ಎಂದು ಡಾ. ನಾಗೇಂದ್ರ ಪ್ರಸಾದ್ ಹೇಳಿದ್ದಾರೆ.’ಇದನ್ನೆಲ್ಲಾ ದೃಷ್ಟಿ ಬಟ್ಟು ಅಂದ್ಕೊಳ್ಳಬೇಕು’

“ಕನ್ನಡ ಚಿತ್ರರಂಗಕ್ಕೆ 85 ವರ್ಷಗಳ ಇತಿಹಾಸವಿದೆ. ದಕ್ಷಿಣ ಭಾರತಕ್ಕೆ 100 ವರ್ಷಕ್ಕೂ ಹೆಚ್ಚಿನ ಇತಿಹಾಸವಿದೆ. ಅದೆಲ್ಲ ಅವರಿಗೆ ಏನು ಗೊತ್ತು. ಅತೀ ಹೆಚ್ಚು ಸಿನಿಮಾಗಳನ್ನು ನಿರ್ಮಾಣ ಮಾಡುವುದು ದಕ್ಷಿಣ ಭಾರತದಲ್ಲಿಯೇ. ಕನ್ನಡ, ತೆಲುಗು. ತಮಿಳು ನಾವುಗಳೇ ಹೆಚ್ಚು ತಯಾರಕರು. ಇನ್ನು ಹಿಂದಿ ಚಿತ್ರಗಳ ಪರಂಪರೆಯಲ್ಲಿ ಹಿಂದಿ ಮಾರುಕಟ್ಟೆಯಾಗಿರೋದ್ರಿಂದ ಬಹಳ ಹಿಂದೆನೇ ಇಡೀ ದೇಶಕ್ಕೆ ವಿಸ್ತಾರ ಮಾಡಿಕೊಂಡಿರೋದ್ರಿಂದ ಹಾಗೆಲ್ಲ ಅನ್ನಿಸಬಹುದು. ಇಡೀ ಭಾರತದವರು ಈಗ ಕನ್ನಡದ ಕಡೆ ತಿರುಗಿ ನೋಡುತ್ತಿದ್ದಾರಲ್ಲ. ಈ ಸಂದರ್ಭದಲ್ಲಿ ಇದನ್ನೆಲ್ಲಾ ದೃಷ್ಟಿ ಬಟ್ಟು ಅಂದ್ಕೊಂಡು ಸುಮ್ನೆ ನೋಡ್ಕೊಂಡು ಮುಂದಕ್ಕೆ ಹೋಗಬೇಕಿದೆ.”

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

 

Please follow and like us:

Leave a Reply

Your email address will not be published. Required fields are marked *

Next Post

ರಿಮೇಕ್ ಮಾಡಿದ್ರೆ ಹೀನಾಯವಾಗಿ ಸೋಲುತ್ತೀರ; 2022ರಲ್ಲಿ ಮಕಾಡೆ ಮಲಗಿದ ರಿಮೇಕ್ ಚಿತ್ರಗಳಿವು!

Thu Dec 29 , 2022
ರಿಮೇಕ್ ಮಾಡಿ ಗೆದ್ದವರು ಹಾಗೂ ದೊಡ್ಡ ಮಟ್ಟದ ಹೆಸರು ಮಾಡಿದ ಹಲವಾರು ನಟ ಹಾಗೂ ನಿರ್ದೇಶಕರ ಉದಾಹರಣೆಗಳು ಕನ್ನಡ ಚಿತ್ರರಂಗದಲ್ಲಿ ಹೆಚ್ಚಾಗಿಯೇ ಇದೆ. ಬೇರೆ ಭಾಷೆಗಳಲ್ಲಿ ಹಿಟ್ ಆದ ಚಿತ್ರಗಳ ಹಕ್ಕನ್ನು ಪಡೆದು ಅದನ್ನು ಯಥಾವತ್ತಾಗಿ ಚಿತ್ರೀಕರಿಸುವ ರೂಢಿ ಕನ್ನಡ ಚಿತ್ರರಂಗದಲ್ಲಿ ಡಬಿಂಗ್ ಇಲ್ಲದೇ ಇರುವ ಕಾರಣದಿಂದಾಗಿ ತುಸು ಹೆಚ್ಚಾಗಿಯೇ ಇತ್ತು. ಇನ್ನು ಈ ರಿಮೇಕ್ ಚಿತ್ರಗಳನ್ನು ನೋಡಲು ಸಿನಿ ರಸಿಕರು ದೊಡ್ಡ ಮಟ್ಟದಲ್ಲಿ ಚಿತ್ರಮಂದಿರಗಳಿಗೆ ನುಗ್ಗುತ್ತಿದ್ದರು. ಹೀಗೆ ರಿಮೇಕ್ […]

Advertisement

Wordpress Social Share Plugin powered by Ultimatelysocial