ರಿಮೇಕ್ ಮಾಡಿದ್ರೆ ಹೀನಾಯವಾಗಿ ಸೋಲುತ್ತೀರ; 2022ರಲ್ಲಿ ಮಕಾಡೆ ಮಲಗಿದ ರಿಮೇಕ್ ಚಿತ್ರಗಳಿವು!

ರಿಮೇಕ್ ಮಾಡಿ ಗೆದ್ದವರು ಹಾಗೂ ದೊಡ್ಡ ಮಟ್ಟದ ಹೆಸರು ಮಾಡಿದ ಹಲವಾರು ನಟ ಹಾಗೂ ನಿರ್ದೇಶಕರ ಉದಾಹರಣೆಗಳು ಕನ್ನಡ ಚಿತ್ರರಂಗದಲ್ಲಿ ಹೆಚ್ಚಾಗಿಯೇ ಇದೆ. ಬೇರೆ ಭಾಷೆಗಳಲ್ಲಿ ಹಿಟ್ ಆದ ಚಿತ್ರಗಳ ಹಕ್ಕನ್ನು ಪಡೆದು ಅದನ್ನು ಯಥಾವತ್ತಾಗಿ ಚಿತ್ರೀಕರಿಸುವ ರೂಢಿ ಕನ್ನಡ ಚಿತ್ರರಂಗದಲ್ಲಿ ಡಬಿಂಗ್ ಇಲ್ಲದೇ ಇರುವ ಕಾರಣದಿಂದಾಗಿ ತುಸು ಹೆಚ್ಚಾಗಿಯೇ ಇತ್ತು.

ಇನ್ನು ಈ ರಿಮೇಕ್ ಚಿತ್ರಗಳನ್ನು ನೋಡಲು ಸಿನಿ ರಸಿಕರು ದೊಡ್ಡ ಮಟ್ಟದಲ್ಲಿ ಚಿತ್ರಮಂದಿರಗಳಿಗೆ ನುಗ್ಗುತ್ತಿದ್ದರು.

ಹೀಗೆ ರಿಮೇಕ್ ಚಿತ್ರಗಳು ಒಳ್ಳೆಯ ಗಳಿಕೆಯನ್ನು ಮಾಡುತ್ತಿದ್ದ ಕಾರಣ ರಿಮೇಕ್ ಮಾಡುವ ಕಡೆ ಸ್ಟಾರ್ ನಟರೂ ಸಹ ಮನಸ್ಸು ಮಾಡುತ್ತಿದ್ದರು. ಆದರೆ ಕನ್ನಡಕ್ಕೂ ಡಬಿಂಗ್ ಕಾಲಿಟ್ಟ ನಂತರ ಈ ರಿಮೇಕ್ ಹಾವಳಿ ಸೈಲೆಂಟ್ ಆಗಿಬಿಟ್ಟಿದೆ. ಹೌದು, ಪ್ಯಾನ್ ಇಂಡಿಯಾ ಹವಾ ಹೆಚ್ಚಾದ ನಂತರ ಕನ್ನಡಕ್ಕೂ ವಿವಿಧ ಭಾಷೆಯ ಹಿಟ್ ಚಿತ್ರಗಳು ಡಬ್ ಆಗಿ ಬಿಡುಗಡೆಯಾಗುತ್ತಿರುವ ಕಾರಣ ರಿಮೇಕ್ ಚಿತ್ರ ನೋಡುವುದನ್ನು ಕನ್ನಡ ಸಿನಿ ರಸಿಕರು ನಿಲ್ಲಿಸಿಬಿಟ್ಟಿದ್ದಾರೆ.

ಹಾಗಿದ್ದರೂ ಸಹ ಕೆಲ ಚಿತ್ರಗಳನ್ನು ಈ ವರ್ಷ ಕನ್ನಡಕ್ಕೆ ರಿಮೇಕ್ ಮಾಡಿ ಬಿಡುಗಡೆ ಮಾಡಲಾಯಿತು. ಆದರೆ ಮೊದಲಿನ ಹಾಗೆ ಈ ವರ್ಷ ಕನ್ನಡದ ಚಿತ್ರ ಪ್ರೇಕ್ಷಕರು ಮಣೆ ಹಾಕಲಿಲ್ಲ. ಪುನೀತ್ ರಾಜ್‌ಕುಮಾರ್ ಇದ್ದ ಕಾರಣ ತಮಿಳಿನ ‘ಓ ಮೈ ಕಡವುಲೆ’ ರಿಮೇಕ್ ಚಿತ್ರ ‘ಲಕ್ಕಿಮ್ಯಾನ್’ ಸದ್ದು ಮಾಡಿದ್ದು ಬಿಟ್ಟರೆ ಉಳಿದ ರಿಮೇಕ್ ಚಿತ್ರಗಳು ಹೀನಾಯವಾಗಿ ಸೋತು ಮುಖಭಂಗ ಅನುಭವಿಸಿವೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ತಮಿಳು ಸ್ಟಾರ್​ ಡೈರೆಕ್ಟರ್​ ಕೈ ಹಿಡಿದ ಕನ್ನಡದ ಖ್ಯಾತ ನಟಿ.. ಮದುವೆ ಆಗೇಬಿಟ್ರು.

Thu Dec 29 , 2022
ಸ್ಯಾಂಡಲ್​ವುಡ್​​​ ನಟಿ ಧನ್ಯಾ ಬಾಲಕೃಷ್ಣ ಸದ್ದಿಲ್ಲದೇ ತಮಿಳು ನಿರ್ದೇಶಕರೊಬ್ಬರನ್ನ ವಿವಾಹವಾಗಿದ್ದಾರೆ. `ನೋಡಿ ಸ್ವಾಮಿ ನಾವಿರೋದೆ ಹೀಗೆ’, `ಸಾರ್ವಜನಿಕರಿಗೆ ಸುವರ್ಣಾವಕಾಶ’ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದ ನಟಿ ಧನ್ಯಾ ಬಾಲಕೃಷ್ಣ ಅವರು ಬಾಲಾಜಿ ಮೋಹನ್​ ಎಂಬವರ ಜೊತೆಗೆ ಹಸೆಮಣೆ ಏರಿದ್ದಾರೆ. ಇದೀಗ ಇವರ ವಿವಾಹ ಸುದ್ದಿ ವೈರಲ್​ ಆಗಿದೆ. ಧನ್ಯಾ ಬಾಲಕೃಷ್ಣ ಅವರನ್ನು ವಿವಾಹವಾದ ಬಾಲಾಜಿ ಮೋಹನ್ ತಮಿಳಿನಲ್ಲಿ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ಇವರು ‘ಮಾರಿ’, ‘ಮಾರಿ 2’ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ.ಅಂದಹಾಗೆಯೇ, ಧನ್ಯಾ […]

Advertisement

Wordpress Social Share Plugin powered by Ultimatelysocial