ತಮಿಳು ಸ್ಟಾರ್​ ಡೈರೆಕ್ಟರ್​ ಕೈ ಹಿಡಿದ ಕನ್ನಡದ ಖ್ಯಾತ ನಟಿ.. ಮದುವೆ ಆಗೇಬಿಟ್ರು.

ಸ್ಯಾಂಡಲ್​ವುಡ್​​​ ನಟಿ ಧನ್ಯಾ ಬಾಲಕೃಷ್ಣ ಸದ್ದಿಲ್ಲದೇ ತಮಿಳು ನಿರ್ದೇಶಕರೊಬ್ಬರನ್ನ ವಿವಾಹವಾಗಿದ್ದಾರೆ. `ನೋಡಿ ಸ್ವಾಮಿ ನಾವಿರೋದೆ ಹೀಗೆ’, `ಸಾರ್ವಜನಿಕರಿಗೆ ಸುವರ್ಣಾವಕಾಶ’ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದ ನಟಿ ಧನ್ಯಾ ಬಾಲಕೃಷ್ಣ ಅವರು ಬಾಲಾಜಿ ಮೋಹನ್​ ಎಂಬವರ ಜೊತೆಗೆ ಹಸೆಮಣೆ ಏರಿದ್ದಾರೆ.

ಇದೀಗ ಇವರ ವಿವಾಹ ಸುದ್ದಿ ವೈರಲ್​ ಆಗಿದೆ.

ಧನ್ಯಾ ಬಾಲಕೃಷ್ಣ ಅವರನ್ನು ವಿವಾಹವಾದ ಬಾಲಾಜಿ ಮೋಹನ್ ತಮಿಳಿನಲ್ಲಿ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ಇವರು ‘ಮಾರಿ’, ‘ಮಾರಿ 2’ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ.ಅಂದಹಾಗೆಯೇ, ಧನ್ಯಾ ಮೂಲತಃ ಬೆಂಗಳೂರಿನವರಾಗಿದ್ದು, ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಕನ್ನಡದಲ್ಲೂ ಪ್ರೇಕ್ಷಕರನ್ನು ಮನರಂಜಿಸುವ ಕೆಲಸ ಮಾಡಿದ್ದಾರೆ. ಆದರೀಗ ಅವರು ಸದ್ದಿಲ್ಲದೆ ವಿವಾಹವಾಗಿರುವ ಸಂಗತಿ ಹೊರಬಿದ್ದಿದೆ.ಅಚ್ಚರಿಯ ಸಂಗತಿ ಎಂದರೆ ಬಾಲಾಜಿ ಅವರಿಗಿದು 2ನೇ ಮದುವೆ. ಇದಕ್ಕೂ ಮೊದಲು ಅಂದರೆ 2022ರಲ್ಲಿ ಅರುಣಾ ಎಂಬವರ ಕೈ ಹಿಡಿದಿದ್ದರು. ಆದರೆ ವಿವಾಹವಾದ 1 ವರ್ಷಕ್ಕೆ ಬೇರೆ ಬೇರೆಯಾದರು. ಇದೀಗ ಕನ್ನಡದ ನಟಿ ಧನ್ಯಾ ಅವರ ಕೈ ಹಿಡಿದಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ಮದುವೆ ನಂತರ ಏನಾಯ್ತು? 'ಯೇ ಮಾಯ ಚೇಸಾವೆ' ಸೀಕ್ವೆಲ್‌ನಲ್ಲಿ ಸಮಂತಾ ಜಾಗಕ್ಕೆ ಕನ್ನಡ ನಟಿ?

Thu Dec 29 , 2022
ದಶಕದ ಹಿಂದೆ ಗೌತಮ್ ವಾಸುದೇವ್ ಮೆನನ್ ನಿರ್ದೇಶನದ ‘ಯೇ ಮಾಯ ಚೇಸಾವೆ’ ಸಿನಿಮಾ ಸೂಪರ್ ಹಿಟ್ ಆಗಿತ್ತು. ಇದೇ ಸಿನಿಮಾ ಮೂಲಕ ನಟಿ ಸಮಂತಾ ಚಿತ್ರರಂಗಕ್ಕೆ ಪರಿಚಿತರಾಗಿದ್ದರು. ಇದೀಗ ಈ ಸಿನಿಮಾ ಸೀಕ್ವೆಲ್ ಬಗ್ಗೆ ಚರ್ಚೆ ಶುರುವಾಗಿದೆ. ಏಕಕಾಲಕ್ಕೆ ಈ ಸಿನಿಮಾ ತಮಿಳಿನಲ್ಲಿ ‘ವಿನೈತಾಂಡಿ ವರುವಾಯ’ ಹೆಸರಿನಲ್ಲಿ ತಮಿನಿನಲ್ಲೂ ತೆರೆಕಂಡು ಸಕ್ಸಸ್ ಕಂಡಿತ್ತು. ಕಾಲಿವುಡ್‌ನಲ್ಲಿ ಸಿಂಬು, ತ್ರಿಷಾ ಲೀಡ್‌ ರೋಲ್‌ಗಳಲ್ಲಿ ಮಿಂಚಿದ್ದರು. ಇದೀಗ ಈ ಸಿನಿಮಾ ಸೀಕ್ವೆಲ್ ಬಗ್ಗೆ ಗುಸುಗುಸು […]

Advertisement

Wordpress Social Share Plugin powered by Ultimatelysocial