ಎನ್‌ಗಿಡಿ ಬೌಲಿಂಗ್ ದಾಳಿಗೆ ತತ್ತರಿಸಿದ ಭಾರತ 327 ರನ್ ಗಳಿಗೆ ಆಲೌಟ್ ̤

 

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆಯುತ್ತಿರುವ  ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ ನಲ್ಲಿ 327ರನ್ ಗಳಿಗೆ ಆಲೌಟ್ ಆಗಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಪರ ಕೆಎಲ್ ರಾಹುಲ್ ಮತ್ತು ಮಾಯಾಂಕ್ ಅಗರವಾಲ್ ಉತ್ತಮ ಆರಂಭಿಕ ನೀಡಿದರು. ಮಾಯಾಂಕ್ 60 ರನ್ ಗಳಿಸಿ ಔಟಾದರು. ನಂತರ ಬಂದ ಚೇತೇಶ್ವರ ಪೂಜಾರ ಶೂನ್ಯ ಸುತ್ತಿ ಪೆವಿಲಿಯನ್ ಸೇರಿದರು

ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಉತ್ತಮ ಪ್ರದರ್ಶನ ನೀಡಿದರು. 35 ರನ್ ಗಳಿಸಿ ಕೊಹ್ಲಿ ಔಟಾದರೆ ಅಜಿಂಕ್ಯ ರಹಾನೆ 48 ರನ್ ಬಾರಿಸಿದರು. ಇದಾದ ನಂತರ ಬಂದ ಬ್ಯಾಟರ್ ಗಳು ಎರಡಂಕಿ ದಾಟುವಲ್ಲಿ ವಿಫಲರಾಗಿ ಪೆಲಿವಿಯನ್ ಸೇರಿದರು.

 

ರಿಷಬ್ ಪಂತ್ 8 ಅಶ್ವಿನ್ 4 ಶಾರ್ದೂಲ್ 4 ಮೊಹಮ್ಮದ್ ಶಮಿ 8 ರನ್ ಗಳಿಸಿ ಔಟಾದರು. ಇನ್ನು ಕೊನೆಯಲ್ಲಿ ಬುಮ್ರಾ 14 ಸೇರಿಸಿದರು ಇದರಿಂದ  300ರ ಗಡಿ ದಾಟಲು ಸಾಧ್ಯವಾಯಿತು.

ದಕ್ಷಿಣ ಆಫ್ರಿಕಾ ಪರ ಲುಂಗಿ ಎನ್‌ಗಿಡಿ 6 ವಿಕೆಟ್ ಪಡೆದಿದ್ದರೆ, ಕಾಗಿಸೋ ರಬಾಡ 3 ವಿಕೆಟ್ ಹಾಗೂ ಮಾರ್ಕೊ ಜಾನ್ಸೆನ್ 1 ವಿಕೆಟ್ ಪಡೆದಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

Jharkhand CM:ಕೇಂದ್ರದಲ್ಲಿ 'ರಾವಣ' ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಗುಂಪು ಹತ್ಯೆ ತಡೆ ಕಾನೂನು ತರಬೇಕಾಗಿದೆ;

Tue Dec 28 , 2021
ರಾಂಚಿ: ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರು, ಕೇಂದ್ರದಲ್ಲಿ “ರಾವಣ” ಪಕ್ಷ ಅಧಿಕಾರಕ್ಕೆ ಬಂದ ನಂತರ ನಮ್ಮ ಸರ್ಕಾರವು ಗುಂಪು ಹತ್ಯೆ ತಡೆ ಕಾನೂನನ್ನು ಜಾರಿಗೆ ತರಬೇಕಾಯಿತು ಎಂದು ಸೋಮವಾರ ಹೇಳಿದ್ದಾರೆ. ಬಿಜೆಪಿ ಒಂದು ಕಡೆ ದೇಶದಲ್ಲಿ ರಾಮರಾಜ್ಯ ತರಲು ಪ್ರಯತ್ನಿಸುತ್ತಿರುವುದಾಗಿ ಹೇಳುತ್ತಿದೆ. ಮತ್ತೊಂದು ಕಡೆ ಭ್ರಷ್ಟಚಾರ ಮತ್ತು “ಅಸಂವಿಧಾನಿಕ” ಗುಂಪು ಹತ್ಯೆ ನಡೆಸುತ್ತಿದೆ ಎಂದು ಜಾರ್ಖಂಡ್ ಸಿಎಂ ಆರೋಪಿಸಿದ್ದಾರೆ. ಕೇಂದ್ರ ಸರ್ಕಾರ ದೇಶದಲ್ಲಿ […]

Advertisement

Wordpress Social Share Plugin powered by Ultimatelysocial