ಸಣ್ಣ ಅವಧಿಯಲ್ಲಿ ದೇಹಾರೋಗ್ಯ ಉತ್ತಮಗೊಳ್ಳಲು ನೀವೇನಾದ್ರೂ ಸ್ಟಿರಾಯ್ಡ್ ಬಳಸ್ತೀರಾ…?

ಣ್ಣ ಅವಧಿಯಲ್ಲಿ ದೇಹಾರೋಗ್ಯ ಉತ್ತಮಗೊಳ್ಳಲು, ದೇಹಕ್ಕೆ ಬೇಕಿರುವ ಆಕಾರ ಪಡೆಯಲು ಮತ್ತಿತರ ಕಾರಣಗಳಿಗೆ ಸ್ಟಿರಾಯ್ಡ್ ಬಳಸುತ್ತೇವೆ. ಇದರಿಂದ ದೇಹದ ಮೇಲಾಗುವ ತೊಂದರೆಗಳ ಬಗ್ಗೆ ನಿಮಗೆ ಗೊತ್ತೇ.?

ಚರ್ಮದಲ್ಲಿ ಉರಿಯೂತ ಕಾಣಿಸಿಕೊಳ್ಳಲು ಸ್ಟಿರಾಯ್ಡ್ ಗಳೂ ಕಾರಣ.

ವೈದ್ಯರ ಸಲಹೆ ಇಲ್ಲದೆ ಸ್ಟಿರಾಯ್ಡ್ ಸೇವಿಸುವುದರಿಂದ ಮತ್ತಷ್ಟು ಹೊಸ ಚರ್ಮದ ಕಾಯಿಲೆಗಳು ಕಾಣಿಸಿಕೊಂಡಾವು. ನಿರಂತರವಾಗಿ ಸ್ಟಿರಾಯ್ಡ್ ಸೇವಿಸುವುದರಿಂದ ಸಮಸ್ಯೆಗಳು ಉಲ್ಪಣಗೊಳ್ಳುತ್ತವೆ. ಇದರಿಂದ ಚರ್ಮದ ಪದರಗಳಲ್ಲಿರುವ ಕೂದಲು, ಕಿರುಚೀಲಗಳು ಉಬ್ಬಿಕೊಳ್ಳಬಹುದು.

ನಿರ್ದಿಷ್ಟ ದೇಹಭಾಗದ ಚರ್ಮ ತೆಳುವಾಗಬಹುದು. ಸ್ಟಿರಾಯ್ಡ್ ಹೆಚ್ಚಿನ ಬಳಕೆಯಿಂದ ಮೊಡವೆಗಳು ಅಧಿಕವಾಗಬಹುದು. ಚರ್ಮದ ಮೇಲ್ಭಾಗದಲ್ಲಿ ಕಪ್ಪು ತೇಪೆಗಳು ಕಾಣಿಸಿಕೊಂಡಾವು.

ರೋಗಕ್ಕೆ ತಕ್ಷಣ ಪರಿಣಾಮ ದೊರೆತರೂ ಇದರಿಂದ ತ್ವಚೆಯ ಮೇಲಾಗುವ ಪರಿಣಾಮಗಳು ಅಪಾರ. ಇದರ ಅತಿಯಾದ ಬಳಕೆ ಹೃದಯಕ್ಕೂ, ಪ್ರಾಣಕ್ಕೂ ಅಪಾಯವಾಗುವ ಸಾಧ್ಯತೆಗಳು ಅಧಿಕ. ಹಾಗಾಗಿ ಸಾಧ್ಯವಾದಷ್ಟು ಸ್ಟಿರಾಯ್ಡ್ ಗಳನ್ನು ದೂರವಿಡಿ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಾಬರ್ಟ್ ಬಾಡೆನ್ ಪೊವೆಲ್ ವಿಶ್ವಪ್ರಸಿದ್ಧವಾದ ಸ್ಕೌಟ್ ಚಳುವಳಿಯ ಪ್ರವರ್ತಕ.

Sun Feb 26 , 2023
ರಾಬರ್ಟ್ ಬಾಡೆನ್ ಪೊವೆಲ್  ವಿಶ್ವಪ್ರಸಿದ್ಧವಾದ ಸ್ಕೌಟ್ ಚಳುವಳಿಯ ಪ್ರವರ್ತಕರಾದ ಬಾಡೆನ್ ಪೊವೆಲ್ 1857ರ ಫೆಬ್ರುವರಿ 22ರಂದು ಲಂಡನ್ನಿನಲ್ಲಿ ಜನಿಸಿದರು. ರಾಬರ್ಟ್ ಬಾಡೆನ್ ಪೊವೆಲ್ ಬ್ರಿಟಿಷ್ ಸೈನ್ಯಾಧಿಕಾರಿಯಾಗಿ ಭಾರತ ಮತ್ತು ಆಫ್ರಿಕಾಗಳಲ್ಲಿ ಸೇವೆ ಸಲ್ಲಿಸಿದ್ದರು.ತಮ್ಮ ಮಿಲಿಟರಿ ದಿನಗಳ ಕುರಿತಾಗಿ ಹಲವಾರು ಪುಸ್ತಕಗಳನ್ನು ಬರೆದಿದ್ದ ರಾಬರ್ಟ್ ಬಾಡೆನ್ ಪೊವೆಲ್ ಯುವ ಪೀಳಿಗೆಯ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಬೆಳವಣಿಗೆಗಳ ಕುರಿತು ಅಪಾರ ಚಿಂತನೆ ನಡೆಸಿ ಆ ಚಿಂತನೆಗಳನ್ನು ಪ್ರಾಯೋಗಿಕವಾಗಿ ಬ್ರೌನ್ ಸೀ ಎಂಬಲ್ಲಿ […]

Advertisement

Wordpress Social Share Plugin powered by Ultimatelysocial