ಮದುವೆ ನಂತರ ಏನಾಯ್ತು? ‘ಯೇ ಮಾಯ ಚೇಸಾವೆ’ ಸೀಕ್ವೆಲ್‌ನಲ್ಲಿ ಸಮಂತಾ ಜಾಗಕ್ಕೆ ಕನ್ನಡ ನಟಿ?

ಶಕದ ಹಿಂದೆ ಗೌತಮ್ ವಾಸುದೇವ್ ಮೆನನ್ ನಿರ್ದೇಶನದ ‘ಯೇ ಮಾಯ ಚೇಸಾವೆ’ ಸಿನಿಮಾ ಸೂಪರ್ ಹಿಟ್ ಆಗಿತ್ತು. ಇದೇ ಸಿನಿಮಾ ಮೂಲಕ ನಟಿ ಸಮಂತಾ ಚಿತ್ರರಂಗಕ್ಕೆ ಪರಿಚಿತರಾಗಿದ್ದರು. ಇದೀಗ ಈ ಸಿನಿಮಾ ಸೀಕ್ವೆಲ್ ಬಗ್ಗೆ ಚರ್ಚೆ ಶುರುವಾಗಿದೆ.

ಏಕಕಾಲಕ್ಕೆ ಈ ಸಿನಿಮಾ ತಮಿಳಿನಲ್ಲಿ ‘ವಿನೈತಾಂಡಿ ವರುವಾಯ’ ಹೆಸರಿನಲ್ಲಿ ತಮಿನಿನಲ್ಲೂ ತೆರೆಕಂಡು ಸಕ್ಸಸ್ ಕಂಡಿತ್ತು.

ಕಾಲಿವುಡ್‌ನಲ್ಲಿ ಸಿಂಬು, ತ್ರಿಷಾ ಲೀಡ್‌ ರೋಲ್‌ಗಳಲ್ಲಿ ಮಿಂಚಿದ್ದರು. ಇದೀಗ ಈ ಸಿನಿಮಾ ಸೀಕ್ವೆಲ್ ಬಗ್ಗೆ ಗುಸುಗುಸು ಶುರುವಾಗಿದೆ. ಈ ಚಿತ್ರದ ಲೀಡ್‌ ರೋಲ್‌ಗಳಲ್ಲಿ ನಟಿಸಿದ್ದ ನಾಗಚೈತನ್ಯಾ- ಸಮಂತಾ ನಿಜ ಜೀವನದಲ್ಲೂ ಪ್ರೀತಿಸಿ ಮದುವೆ ಆಗಿದ್ದರು. ಆದರೆ ಕೆಲ ಭಿನ್ನಾಭಿಪ್ರಾಯಗಳಿಂದ ಕಳೆದ ವರ್ಷ ಜೋಡಿ ದೂರಾಗಿತ್ತು. ಹಾಗಾದರೆ ಸೀಕ್ವೆಲ್‌ನಲ್ಲಿ ನಟಿಸೋದು ಯಾರು ಎನ್ನುವ ಪ್ರಶ್ನೆ ಶುರುವಾಗಿದೆ.ಕೆಲ ದಿನಗಳ ಹಿಂದೆಯೇ ನಿರ್ದೇಶನ ಗೌತಮ್ ವಾಸುದೇವ್ ಮೆನನ್ ‘ಯೇ ಮಾಯ ಚೇಸಾವೆ’ ಸುಳಿವು ಕೊಟ್ಟಿದ್ದರು. ಸ್ಕ್ರಿಪ್ಟ್ ಸಿದ್ಧವಾದ ಕೂಡಲೇ ಶೂಟಿಂಗ್ ಆರಂಭವಾಗುತ್ತದೆ ಎಂದಿದ್ದರು. ಇದೀಗ ನಾಯಕ-ನಾಯಕಿಯಾಗಿ ಯಾರು ನಟಿಸುತ್ತಾರೆ ಎನ್ನುವ ಬಗ್ಗೆ ಚರ್ಚೆ ನಡೀತಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ಹೃದಯಾಘಾತದಿಂದ ಬಾಲಿವುಡ್ ನಿರ್ಮಾಪಕ ನಿತಿನ್ ಮನಮೋಹನ್ ನಿಧನ.

Thu Dec 29 , 2022
ಮುಂಬೈ: ಬಾಲಿವುಡ್‌ ಖ್ಯಾತ ನಿರ್ಮಾಪಕ ನಿತಿನ್ ಮನಮೋಹನ್‌ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 62 ವರ್ಷ ವಯಸ್ಸಾಗಿತ್ತು. ಅವರು ಪತ್ನಿ ಡಾಲಿ, ಪುತ್ರ ಸೋಹಂ, ಪುತ್ರಿ ಪ್ರಾಚಿ ಅವರನ್ನು ಅಗಲಿದ್ದಾರೆ. ನಿತಿನ್ ಮನಮೋಹನ್‌ ಕಳೆದ 15 ದಿನಗಳಿಂದ ಇಲ್ಲಿನ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನಿತಿನ್ ಮನಮೋಹನ್‌ ಹೃದಯಾಘಾತವಾಗಿ ಮೃತಪಟ್ಟರು ಎಂದು ಕುಟುಂಬದವರು ಹೇಳಿದ್ದಾರೆ. ಮಧುಮೇಹ, ರಕ್ತದೊತ್ತಡ ಹಾಗೂ ಮೆದುಳು ಸಂಬಂಧ ಕಾಯಿಲೆಯಿಂದ ಅವರು ಬಳಲುತ್ತಿದ್ದರು. 15 ದಿನಗಳಿಂದ ಅವರಿಗೆ […]

Advertisement

Wordpress Social Share Plugin powered by Ultimatelysocial