ರಷ್ಯಾ ದಾಳಿಗೆ ಉಕ್ರೇನ್ ಖ್ಯಾತ ನಟ ಪಾಶಾ ಲಿ ಬಲಿ; ಸುಮಿ ನಗರದ ಮೇಲೆ 500 ಕೆಜಿ ಬಾಂಬ್ ಸ್ಫೋಟ; 18 ಜನ ದುರ್ಮರಣ

ಕೀವ್: ಉಕ್ರೇನ್ ಮೇಲೆ ರಷ್ಯಾ ನಡೆಸಿರುವ ಬಾಂಬ್ ದಾಳಿಗೆ ಉಕ್ರೇನ್ ನ ಖ್ಯಾತ ನಟ ಪಾಶಾ ಲಿ ಸಾವನ್ನಪ್ಪಿದ್ದಾರೆ. ಈ ಕುರಿತು ಓಡೆಸಾ ಅಂತರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ದೃಢಪಡಿಸಿದೆ.ಉಕ್ರೇನ್ ನ ಇರ್ಪಿನ್ ನಲ್ಲಿ ರಷ್ಯಾ ನಡೆಸಿದ ದಾಳಿಯಲ್ಲಿ 33 ವರ್ಷದ ನಟ ಪಾಶಾ ಲಿ ಬಲಿಯಾಗಿದ್ದಾರೆ.ಉಕ್ರೇನ್ ಮೇಲೆ ಯುದ್ಧ ಸಾರಿದ ಬೆನ್ನಲ್ಲೇ ಪಾಶಾ ಲಿ ದೇಶ ರಕ್ಷಣೆಗಾಗಿ ಪ್ರಾದೇಶಿಕ ಸೇನೆಗೆ ಸೇರ್ಪಡೆಯಾಗಿದ್ದರು. ಆದರೆ ರಷ್ಯಾ ವಿರುದ್ಧ ಹೋರಾಟದಲ್ಲಿ ಲಿ ಸಾವನ್ನಪ್ಪಿದ್ದಾರೆ.ಇನ್ನೊಂದೆಡೆ ರಷ್ಯಾ ಸುಮಿ ನಗರದಲ್ಲಿ ಕಳೆದ ರಾತ್ರಿಯಿಂದ ನಿರಂತರ ಬಾಂಬ್ ದಾಳಿ ನಡೆಸುತ್ತಿದ್ದು, ಇಬ್ಬರು ಮಕ್ಕಳು ಸೇರಿ 18 ಜನರು ಮೃತಪಟ್ಟಿದ್ದಾರೆ. ಸುಮಿ ನಗರದ ಮೇಲೆ ರಷ್ಯಾ ಬರೋಬ್ಬರಿ 500 ಕೆಜಿ ಬಾಂಬ್ ದಾಳಿ ನಡೆಸಿದೆ.ನಿರಂತರ ಬಾಂಬ್ ದಾಳಿ ಬಳಿಕ ಇದೀಗ ಸುಮಿ ನಗರದಲ್ಲಿ 15 ತಾಸುಗಳ ಕಾಲ ರಷ್ಯಾ ಸೇನೆ ಕದನ ವಿರಾಮ ಘೋಷಣೆ ಮಾಡಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಲಂಕಾ ವಿರುದ್ಧದ ಎರಡನೇ ಟೆಸ್ಟ್‌ಗೆ ತಂಡ ಸೇರಿದ ಆಲ್ ರೌಂಡರ್ ಅಕ್ಷರ್ ಪಟೇಲ್

Tue Mar 8 , 2022
ಬೆಂಗಳೂರು: ಗಾಯದ ಕಾರಣದಿಂದ ತಂಡದಿಂದ ಹೊರಬಿದ್ದಿದ್ದ ಆಲ್ ರೌಂಡರ್ ಅಕ್ಷರ್ ಪಟೇಲ್ ಇದೀಗ ಮತ್ತೆ ತಂಡ ಕೂಡಿಕೊಂಡಿದ್ದಾರೆ. ಶ್ರೀಲಂಕಾ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯಕ್ಕಾಗಿ ಅಕ್ಷರ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.   ಅಖಿಲ ಭಾರತ ಹಿರಿಯ ಆಯ್ಕೆ ಸಮಿತಿಯು ಅಕ್ಷರ್ ಪಟೇಲ್ ಅವರನ್ನು ಮಾರ್ಚ್ 12-16 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಎರಡನೇ ಟೆಸ್ಟ್‌ಗೆ ಭಾರತ ತಂಡಕ್ಕೆ ಸೇರಿಸಿದೆ. ಅವರು ತಮ್ಮ ರಿಹ್ಯಾಬಿಟೇಶನ್ ಪೂರ್ಣಗೊಳಿಸಿದ್ದಾರೆ. ಬಿಸಿಸಿಐ ವೈದ್ಯಕೀಯ ತಂಡದಿಂದ ಅನುಮತಿ ಪಡೆದಿದ್ದಾರೆ” […]

Advertisement

Wordpress Social Share Plugin powered by Ultimatelysocial