ರಷ್ಯಾ-ಉಕ್ರೇನ್ ಯುದ್ಧ: ರಷ್ಯಾದ ಪಡೆಗಳಿಂದ ಉಕ್ರೇನ್ ಬಂದರು ಮಾರಿಯುಪೋಲ್ ಮೇಲೆ ನಿರ್ಬಂಧ

ಕೀವ್: ಉಕ್ರೇನ್‌ನ ಆಯಕಟ್ಟಿನ ಬಂದರು ನಗರವಾದ ಮಾರಿಯುಪೋಲ್ ರಷ್ಯಾದ ಪಡೆಗಳ “ನಿರ್ದಯ” ದಾಳಿಯ ದಿನಗಳ ನಂತರ “ದಿಗ್ಬಂಧನ” ಎದುರಿಸುತ್ತಿದೆ ಎಂದು ಅಲ್ಲಿನ ಮೇಯರ್ ತಿಳಿಸಿದ್ದು, ಮಾನವೀಯ ಕಾರಿಡಾರ್ ಸ್ಥಾಪನೆಗೆ ಕರೆ ನೀಡಿದ್ದಾರೆ4,50,000 ಜನರಿರುವ ನಗರವು ಅಜೋವ್ ಸಮುದ್ರ ತೀರದಲ್ಲಿದ್ದು ಶೆಲ್‌ಗಳ ದಾಳಿಗೆ ಒಳಗಾಗಿದೆ, ನೀರು, ವಿದ್ಯುತ್ ಇಲ್ಲದೆ ಸಂಪರ್ಕ ಕಡಿತಗೊಂಡಿದೆ.ಸದ್ಯ ಯುದ್ಧದಿಂದ ನಾಗರಿಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾದ ಎಲ್ಲಾ ದಾರಿಗಳನ್ನು ಹುಡುಕುತ್ತಿದ್ದೇವೆ. ಮಾರಿಯುಪೋಲ್ ಮೇಲೆ ವಿಧಿಸಿರುವ ದಿಗ್ಭಂದನವನ್ನು ತೆರವುಗೊಳಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಮೇಯರ್ ಅವರ ಟೆಲಿಗ್ರಾಮ ಅಕೌಂಟ್ ನಲ್ಲಿ ಪೋಸ್ಟ್ ಮಾಡಿರುವ ಸಂದೇಶದಲ್ಲಿ ವಾಡಿಮ್ ಬಾಯ್ಚೆಂಕೊ ತಿಳಿಸಿದ್ದಾರೆ.ಕದನ ವಿರಾಮವನ್ನು ಸ್ಥಾಪಿಸುವುದು ನಮ್ಮ ಆದ್ಯತೆಯಾಗಿದೆ, ಇದರಿಂದಾಗಿ ನಾವು ಪ್ರಮುಖ ಮೂಲಸೌಕರ್ಯಗಳನ್ನು ಪುನಃಸ್ಥಾಪಿಸಬಹುದು. ನಗರಕ್ಕೆ ಆಹಾರ ಮತ್ತು ಔಷಧವನ್ನು ತರಲು ಮಾನವೀಯ ಕಾರಿಡಾರ್ ಅನ್ನು ಸ್ಥಾಪಿಸಬಹುದು ಎಂದು ಹೇಳಿದರು.ಇದಕ್ಕೂ ಮೊದಲು, ಯುರೋಪಿನ ಅತಿದೊಡ್ಡ ಪರಮಾಣು ವಿದ್ಯುತ್ ಸ್ಥಾವರದ ಮೇಲೆ ದಾಳಿ ಮಾಡಿದ ನಂತರ ಉಕ್ರೇನ್ ಮತ್ತು ಅದರ ಮಿತ್ರರಾಷ್ಟ್ರಗಳು ರಷ್ಯಾ ಪಡೆ ಮೇಲೆ ಆಕ್ರಮಣ ಮುಂದುವರಿಸಿವೆ. ಉಕ್ರೇನ್ ಪ್ರಕಾರ, ಕಳೆದ ಫೆಬ್ರುವರಿ 24 ರಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಉಕ್ರೇನ್ ಮೇಲೆ ಮಿಲಿಟರಿ ಆಕ್ರಮಣ ಆರಂಭಿಸಿದ ನಂತರ ಸಾವಿರಾರು ನಾಗರಿಕರು ಮೃತಪಟ್ಟಿದ್ದಾರೆ.ಉಕ್ರೇನ್‌ನ ಮೇಲೆ ಪೂರ್ಣ ಪ್ರಮಾಣದ ಆಕ್ರಮಣ ಪ್ರಾರಂಭವಾದ ನಂತರ ಒಂದು ವಾರದಲ್ಲಿ ರಷ್ಯಾ 500 ಕ್ಕೂ ಹೆಚ್ಚು ಕ್ಷಿಪಣಿಗಳನ್ನು ಹಾರಿಸಿದೆ. ರಷ್ಯಾ ಪ್ರತಿದಿನ ಸುಮಾರು ಎರಡು ಡಜನ್ ನಷ್ಟು ಕ್ಷಿಪಣಿಗಳನ್ನು ಉಡಾಯಿಸುತ್ತಿದೆ ಎಂದು ಪೆಂಟಗನ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಫೇಸ್ ಬುಕ್, ಟ್ವಿಟರ್ ಬ್ಯಾನ್ ಮಾಡಿದ ಪುಟಿನ್

Sat Mar 5 , 2022
  ರಷ್ಯಾದಲ್ಲಿ ಫೇಸ್ಬುಕ್ ಮತ್ತು ಟ್ವಿಟರ್ ಗಳನ್ನು ಪುಟಿನ್ ಬ್ಲಾಕ್ ಮಾಡಿದ್ದಾರೆ. ಸುಳ್ಳುಸುದ್ದಿ ಹಬ್ಬಿಸಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ವಾರ್ನಿಂಗ್ ಮಾಡಿದ್ದಾರೆ. ರಷ್ಯಾದಲ್ಲಿ ಫೇಸ್ಬುಕ್ ಬ್ಲಾಕ್ ಮಾಡಿದ ಹಿನ್ನೆಲೆಯಲ್ಲಿ ಜನರಿಗೆ ಮಾಹಿತಿ ಸಿಗದಂತೆ ಆಗುತ್ತದೆ.ಲಕ್ಷಾಂತರ ಜನರಿಗೆ ವಿಶ್ವಾಸಾರ್ಹವಾದ ಮಾಹಿತಿ ಸಿಗುವುದಿಲ್ಲ ಎಂದು ಫೇಸ್ಬುಕ್ ಸಂಸ್ಥೆಯಿಂದ ಹೇಳಿಕೆ ಬಿಡುಗಡೆ ಮಾಡಲಾಗಿದೆ. ರಷ್ಯಾಗೆ ಆಪಲ್ ಮತ್ತು ಮೈಕ್ರೋಸಾಫ್ಟ್ ಕಂಪನಿಗಳು ಕೂಡ ಗುನ್ನಾ ನೀಡಿವೆ. ಯಾವುದೇ ಹೊಸ […]

Advertisement

Wordpress Social Share Plugin powered by Ultimatelysocial