ರತನ್ ನಾವಲ್ ಟಾಟ ಕಂಪನಿಯ ಸಂಸ್ಥಾಪಕ

ಪ್ರಸಿದ್ಧ ‘ಟಾಟ’ ಉದ್ಯಮಗಳ ಉಚ್ಛ್ರಾಯ ಸ್ಥಿತಿಗೆ ಕಾರಣರಾದ ಆ ಸಂಸ್ಥೆಯ ಮಾಜಿ ಮುಖ್ಯಸ್ಥರೂ ಹಾಗೂ ಟಾಟಾ ಸಾರ್ವಜನಿಕ ಹಿತಾಸಕ್ತಿ ಉದ್ದೇಶದ ಚಟುವಟಿಕೆಗಳ ಹಾಲಿ ಮುಖ್ಯಸ್ಥರೂ ಆದ ರತನ್ ನಾವಲ್ ಟಾಟ ಅವರ ಜನ್ಮ ದಿನ.
ರತನ್ ನಾವಲ್ ಟಾಟ ಅವರು 1937ರ ಡಿಸೆಂಬರ್ 28ರಂದು ಜನಿಸಿದರು. ಅಜ್ಜಿಯ ಮೇಲ್ವಿಚಾರಣೆಯಲ್ಲಿ ಬದುಕನ್ನು ಕಳೆಯಬೇಕಾದ ಅನಿವಾರ್ಯತೆ ಉಂಟಾಯಿತು. ಕೆಲವು ವರ್ಷ ಹಿಂದೆ ಅವರು ಮಾಡಿದ ಒಂದು ಉಪನ್ಯಾಸ ಓದುತ್ತಿದ್ದೆ. “ನಮ್ಮ ಅಜ್ಜಿ ನಮ್ಮನ್ನು ಒಂದು ದೊಡ್ಡ ಕಾರಿನಲ್ಲಿ ಶಾಲೆಗೆ ಕಳುಹಿಸುತ್ತಿದ್ದಳು. ಅಯ್ಯೋ, ನಮಗೆ ಸಾಮಾನ್ಯರಂತೆ ಇರಲು ಸಾಧ್ಯವಿಲ್ಲವಲ್ಲ ಎಂದೆನಿಸುತ್ತಿತ್ತು” ಎಂಬ ಅವರ ಮಾತುಗಳು ಅವರೊಳಗಿನ ಅಸಾಮಾನ್ಯತೆಯಲ್ಲಿನ ಸಾಮಾನ್ಯತೆಯ ಆಳದ ಬಗ್ಗೆ ಒಳಹೊಕ್ಕುವಂತೆ ಮಾಡುತ್ತದೆ.
ವಿದೇಶದಲ್ಲಿ ಓದು ಮುಗಿಸಿ ಐ.ಬಿ.ಎಮ್ ಸಂಸ್ಥೆಯಲ್ಲಿ ರತನ್ ಟಾಟ ಕೆಲಸಕ್ಕೆ ಆದೇಶ ಪತ್ರ ತೆಗೆದುಕೊಂಡಿದ್ದರು. ಜೆ.ಆರ್.ಡಿ ಟಾಟ ಅವರು ರತನ್ ಅವರನ್ನು ಭಾರತಕ್ಕೆ ಬಾ ಎಂದು ಕರೆದಾಗ ಟಾಟ ಸಂಸ್ಥೆಯಲ್ಲಿನ ಹಲವಾರು ಇಂಜಿನಿಯರುಗಳ ಮಧ್ಯೆ ಒಬ್ಬನಾಗಿ ಯಂತ್ರಗಳ ಮಧ್ಯೆ ಕೆಲಸ ಮಾಡಲು ಪ್ರಾರಂಭ ಮಾಡಿ ಮುಂದೆ 1991ರಿಂದ ಟಾಟಾ ಸಮೂಹಗಳ ಮುಖ್ಯಸ್ಥರೇ ಆದರು.
ಇವರ ಹಿಂದಿನ ಟಾಟ ಸಮೂಹದ ಮುಖ್ಯಸ್ಥ ‘ಭಾರತರತ್ನ ಜೆ.ಆರ್.ಡಿ ಟಾಟ’ ಅಪಾರ ಸಾಧಕ. ಒಂದು ರೀತಿಯಲ್ಲಿ ವರ್ಣರಂಜಿತ ಮೋಹಕ ವ್ಯಕ್ತಿತ್ವ ಅವರದು. ಅವರ ಸ್ಥಾನದಲ್ಲಿ ಈ ಗಂಭೀರ ಹೃದಯಿ ಬಂದಾಗ ಅಯ್ಯೋ ಆ ಸ್ಥಾನದಲ್ಲಿ ಈತ ಸಲ್ಲುತ್ತಾನೆಯೇ ಎಂಬ ಮಾತು ಎಲ್ಲೆಲ್ಲಿಯೂ ಮೂಡಿತ್ತು. ಆದರೆ ರತನ್ ಮಾತನಾಡಲಿಲ್ಲ. ಸುಮ್ಮನೆ ಕೆಲಸ ಮಾಡುತ್ತಾ ಹೋದರು. ಈಗ ಅವರು ಮಾಡಿದ್ದೆಲ್ಲಾ ತಾನೇ ತಾನಾಗಿ ಪುಟಗಟ್ಟಲೆ ಕಥೆ ಹೇಳುತ್ತಿವೆ. ಜೆ.ಆರ್.ಡಿ ಅವರು ನಿವೃತ್ತರಾದ ದಿನಗಳಿಂದ ರತನ್ ಆಳ್ವಿಕೆಯ ಕೊನೆಯ ಅವಧಿಯ ವೇಳೆಗೆ (ಡಿಸೆಂಬರ್ 2012) ಟಾಟಾ ಸಮೂಹ ನಲವತ್ತು ಪಟ್ಟು ಬೆಳೆಯಿತು. ವಿಶ್ವದ ಪ್ರಮುಖ ಅಮೂಲ್ಯತೆಗಳನ್ನು ತನ್ನದಾಗಿಸಿಕೊಂಡಿತು. ಜೊತೆಗೆ ತನ್ನನ್ನು ಎಲ್ಲೆಡೆ ಅಮೂಲ್ಯವಾಗಿಸಿಕೊಂಡು ಬೆಳೆಯಿತು.
ಇಂದು ವ್ಯಾಪಾರಿ ಉದ್ಯಮಗಳಲ್ಲಿ ಬಿಲಿಯನ್, ಟ್ರಿಲಿಯನ್ ಡಾಲರುಗಳ ಹಣ, ಷೇರು ಮೌಲ್ಯಗಳ ಬಗ್ಗೆ ಮಾತುಗಳನ್ನು ಕೇಳುತ್ತೇವೆ. ಅದರ ಪ್ರಮುಖ ವ್ಯಕ್ತಿಗಳು ವೈಯಕ್ತಿಕವಾಗಿ ಎಷ್ಟು ಬಿಲಿಯನ್ನುಗಳ ಸರದಾರರು ಎಂದು ಪ್ರತಿದಿನ ಓದುತ್ತೇವೆ. ಅಂತಹ ಪ್ರಮುಖ ಬಿಲ್ಲಿಯನ್ನಾಧಿಪತಿ ರತನ್ ಟಾಟ ಅವರನ್ನು ನೋಡಿದವರಿಗೆ ಅದು ಆ ರತನ್ ಎಂಬ ಈ ‘ರತ್ನ’ ವ್ಯಕ್ತಿತ್ವದ ಮುಂದೆ ಅತೀ ಸಣ್ಣದು ಎನಿಸುತ್ತದೆ. ಬ್ರಹ್ಮಚಾರಿಯಾದ, ಜೀವನದಲ್ಲಿ ಬಹಳಷ್ಟು ವರ್ಷಗಳ ಕಾಲ ಸಾಮನ್ಯವಾದ ಬ್ಯಾಚಲರ್ ಅಕಾಮಡೇಷನ್ ಎಂದು ಬಣ್ಣಿಸಲಾಗುವ ಜೋಪಡಿಯಲ್ಲಿ ಜೀವನ ಕಳೆದ ಅವರಿಗೆ ಅವರ ಶ್ರೀಮಂತಿಕೆ ಎಂದೂ ಪ್ರಾಧಾನ್ಯವಾಗಿಲ್ಲ. ಅವರಿಗೆ ಬದುಕಿನ ಶ್ರೀಮಂತಿಕೆಯು ಸಾಧನೆ, ಪರಿಶ್ರಮ ಮತ್ತು ಬದುಕಿನ ಮೌಲ್ಯಗಳಿಗೆ ಸೇರಿದ್ದು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ಎಚ್. ಎಲ್. ಕೇಶವಮೂರ್ತಿ ಹಾಸ್ಯ ಕಲಾವಿದ

Wed Dec 28 , 2022
ಎಚ್. ಎಲ್. ಕೇಶವಮೂರ್ತಿ ಹಾಸ್ಯ ಸಾಹಿತಿಗಳಾಗಿ, ತಾಂತ್ರಿಕ ಪ್ರಾಧ್ಯಾಪಕರಾಗಿ ಮತ್ತು ಪತ್ರಕರ್ತರಾಗಿ ಹೆಸರಾಗಿದ್ದವರು. ಕೇಶವಮೂರ್ತಿಯವರು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಹೆರಗನ ಹಳ್ಳಿಯಲ್ಲಿ 1939ರ ಡಿಸೆಂಬರ್ 28ರಂದು ಜನಿಸಿದರು. ತಂದೆ ಎಚ್.ಎಂ. ಲಿಂಗೇಗೌಡ, ತಾಯಿ ಚೆನ್ನಮ್ಮ. ಪ್ರಾಥಮಿಕ ಮತ್ತು ಪ್ರೌಢ ವಿದ್ಯಾಭ್ಯಾಸ ಬೆಳ್ಳೂರು, ನಾಗಮಂಗಲ, ಮೇಲುಕೋಟೆಯಲ್ಲಿ ನಡೆಯಿತು. ಬೆಂಗಳೂರಿನ ಸೆಂಟ್ರಲ್ ಕಾಲೇಜಿನಿಂದ ಬಿ.ಎಸ್ಸಿ ಪದವಿ, ಹಾಸನದ ಮಲ್ನಾಡ್ ಇಂಜಿನಿಯರಿಂಗ್ ಕಾಲೇಜಿನಿಂದ ಬಿ.ಇ. ಪದವಿ ಮತ್ತು ತಿರುಪತಿಯ ವೆಂಕಟೇಶ್ವರ ವಿಶ್ವವಿದ್ಯಾಲಯದಿಂದ ಎಂ.ಇ. […]

Advertisement

Wordpress Social Share Plugin powered by Ultimatelysocial