AMBANI:ರಿಲಯನ್ಸ್‌ನಲ್ಲಿ ನಾಯಕತ್ವ ಬದಲಾವಣೆ?

ನವದೆಹಲಿ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ಮುಕೇಶ್ ಅಂಬಾನಿ ಅವರು ಕಂಪನಿಯ ನಾಯಕತ್ವದಲ್ಲಿ ಬದಲಾವಣೆಗಳು ಆಗುವ ಬಗ್ಗೆ ಮಾತನಾಡಿದ್ದಾರೆ. ತಮ್ಮನ್ನೂ ಸೇರಿದಂತೆ ಕಂಪನಿಯ ಹಿರಿಯರು ಯುವ ತಲೆಮಾರಿಗೆ ದಾರಿ ಮಾಡಿಕೊಡುವ ಮೂಲಕ ಈ ಬದಲಾವಣೆ ಆಗಬೇಕಿದೆ ಎಂದು ಹೇಳಿದ್ದಾರೆ.

‘ರಿಲಯನ್ಸ್ ಕಂಪನಿಯು ಈಗ ಮಹತ್ವಪೂರ್ಣವಾದ ನಾಯಕತ್ವ ಬದಲಾವಣೆಯನ್ನು ಜಾರಿಗೆ ತರುವ ಪ್ರಕ್ರಿಯೆಯಲ್ಲಿ ಇದೆ’ ಎಂದು ಹೇಳಿದ್ದಾರೆ. ಆಕಾಶ್ ಮತ್ತು ಅನಂತ್ ಅವರು ಅಂಬಾನಿ ಅವರ ಪುತ್ರರು, ಇಶಾ ಅವರು ಅಂಬಾನಿ ಅವರ ಪುತ್ರಿ.

‘ನನ್ನನ್ನೂ ಸೇರಿದಂತೆ ಎಲ್ಲ ಹಿರಿಯರು ಹೆಚ್ಚು ಸ್ಪರ್ಧಾತ್ಮಕ ಆಗಿರುವ, ಬಹಳ ಬದ್ಧತೆಯನ್ನು ಹೊಂದಿರುವ ಮತ್ತು ವಿಶ್ವಾಸ ಮೂಡಿಸುವಂತಹ ಯುವ ನಾಯಕತ್ವಕ್ಕೆ ದಾರಿ ಮಾಡಿಕೊಡಬೇಕು. ನಾವು ಅವರಿಗೆ ಮಾರ್ಗದರ್ಶನ ನೀಡಬೇಕು. ಪ್ರೋತ್ಸಾಹ ನೀಡಬೇಕು ಮತ್ತು ಅವರನ್ನು ಸಶಕ್ತರನ್ನಾಗಿಸಬೇಕು. ಅವರು ನಮಗಿಂತ ಚೆನ್ನಾಗಿ ಕೆಲಸ ಮಾಡಿದಾಗ ಬೆನ್ನುತಟ್ಟಬೇಕು’ ಎಂದಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಇದ್ದಕ್ಕಿದ್ದಂತೆಯೇ ಹೊತ್ತಿ ಉರಿದ ಮನೆ: ಐವರು ಸುಟ್ಟುಕರಕಲು- ನಾಲ್ಕೂ ಮಕ್ಕಳನ್ನು ಕಳೆದುಕೊಂಡ ಅಪ್ಪ-ಅಮ್ಮ

Wed Dec 29 , 2021
ರಾಜಾವರ್‌ (ಬಿಹಾರ): ಏಕಾಏಕಿಯಾಗಿ ಮನೆಗೆ ಬೆಂಕಿ ಬಿದ್ದ ಹಿನ್ನೆಲೆಯಲ್ಲಿ ಒಂದೇ ಕುಟುಂಬ ಐದು ಮಂದಿ ಮೃತಪಟ್ಟಿರುವ ಘಟನೆ ಬಿಹಾರದ ಬಂಕಾ ಜಿಲ್ಲೆಯ ರಾಜಾವರ್​ ಗ್ರಾಮದಲ್ಲಿ ನಡೆದಿದೆ. ಅಡುಗೆ ಸಿಲಿಂಡರ್‌ ಸ್ಫೋಟದಿಂದ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದ್ದರೂ ಇದಕ್ಕೆ ನಿಖರ ಕಾರಣ ತಿಳಿದುಬಂದಿದೆ. ಸ್ಥಳದಲ್ಲಿ ಸಿಲಿಂಡರ್‌ ಸುಟ್ಟುಕರಕಲಾಗಿರುವುದು ಕಂಡುಬಂದಿದೆ. ಆದರೆ ಅದರ ಸ್ಫೋಟದಿಂದಲೇ ಈ ಘಟನೆ ಸಂಭವಿಸಿರುವುದು ಇನ್ನೂ ದೃಢಪಟ್ಟಿಲ್ಲ. ಘಟನೆಯಲ್ಲಿ ಮೃತಪಟ್ಟವರನ್ನು ಅಂಕುಶ್​ ಕುಮಾರ್​ (10), ಶಿವಾನಿ ಕುಮಾರಿ​ (9), […]

Advertisement

Wordpress Social Share Plugin powered by Ultimatelysocial