ಗಣರಾಜ್ಯ ದಿನ 2022:ದೇಶವನ್ನುದ್ದೇಶಿಸಿ ರಾಷ್ಟ್ರಪತಿ ‘ರಾಮನಾಥ ಕೋವಿಂದ್’ ಗಣರಾಜ್ಯೋತ್ಸವ ಭಾಷಣ;

ನವದೆಹಲಿ : ದೇಶವನ್ನುದ್ದೇಶಿಸಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಗಣರಾಜ್ಯೋತ್ಸವ ಭಾಷಣ ಮಾಡಿದರು. ಗಣರಾಜ್ಯೋತ್ಸವ ಮುನ್ನಾದಿನವಾದ ಮಂಗಳವಾರ ಸಂಜೆ 7 ಗಂಟೆಗೆ ಭಾಷಣ ಆರಂಭಿಸಿ ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದರು. ಅಧಿಕಾರ ಮತ್ತು ಕರ್ತವ್ಯ ಒಂದು ನಾಣ್ಯದ ಎರಡು ಮುಖಗಳಿದ್ದಂತೆ.

ನಮ್ಮ ಹಕ್ಕುಗಳ ಜೊತೆಗೆ ಕರ್ತವ್ಯವನ್ನೂ ನಾವೆಲ್ಲರೂ ಅರಿತುಕೊಳ್ಳಬೇಕು. ಸಂವಿಧಾನವು ಪ್ರತಿಪಾದಿಸುವ ಜೀವನಮೌಲ್ಯಗಳನ್ನು ಪಾಲಿಸಬೇಕು. ದೇಶದಲ್ಲಿ ಸ್ವಚ್ಛತೆ ಕಾಪಾಡುವುದು ಕೂಡ ಎಲ್ಲ ನಾಗರಿಕರ ಕರ್ತವ್ಯ ಎಂದು ರಾಷ್ಟ್ರಪತಿ ಹೇಳಿದರು.

ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರನ್ನು ನೆನೆಯಬೇಕಾದ ದಿನ. ಕೋಟ್ಯಂತರ ಜನರ ತ್ಯಾಗ ಮತ್ತು ಬಲಿದಾನಗಳಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿತು ಎಂದು ಹೇಳಿದರು.

ಇನ್ನೂ. ದೇಶದಲ್ಲಿ ಪರಿಣಮಿಸಿದ ಕೊರೊನಾ ಬಗ್ಗೆ ಮಾತನಾಡಿದ ಅವರು ಕೊವಿಡ್ ಮಾರ್ಗಸೂಚಿಯನ್ನು ನಾವೇಲ್ಲರೂ ಪಾಲಿಸಬೇಕು. ಇದು ರಾಷ್ಟ್ರಧರ್ಮ ಆಗಿದೆ. ಇಂತಹ ಪರಿಸ್ಥಿತಿಯಲ್ಲಿ ನಾವೆಲ್ಲರೂ ಒಟ್ಟಾಗಿ ಸಹಕಾರದ ಬಾಳ್ವೆ ನಡೆಸಬೇಕು ಇಂತಹ . ಕಠಿಣ ಪರಿಸ್ಥಿತಿಯಲ್ಲಿ ಸುದೀರ್ಘ ಅವಧಿಗೆ ನಾವು ಸಿದ್ಧತೆ ಮಾಡಿಕೊಳ್ಳಬೇಕು. ನಮ್ಮ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಮಾಡಿದ ಸೇವೆಯ ಬಗ್ಗೆ ನಮಗೆ ಕೃತಜ್ಞತೆ . ಹೆಮ್ಮೆ ಇದೆ ಎಂದರು.

ಸಾಂಕ್ರಾಮಿಕ ರೋಗವು ಇನ್ನೂ ವ್ಯಾಪಕವಾಗಿ ಹರಡಿರುವುದರಿಂದ, ನಾವು ಜಾಗರೂಕರಾಗಿರಬೇಕು. ನಾವು ಇಲ್ಲಿಯವರೆಗೆ ಕೈಗೊಂಡಿರುವ ಮುನ್ನೆಚ್ಚರಿಕೆಗಳನ್ನು ಮುಂದುವರಿಸಬೇಕಾಗಿದೆ. ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ ಎಂದರು.

ಜನವರಿ 26 ರಂದು ಸಂಜೆ ವಿಶೇಷ ಕಾರ್ಯಕ್ರಮ ನಡೆಯಲಿದೆ, ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿಪತ್ತು ಅಪಾಯ ನಿರ್ವಹಣಾ ಕ್ಷೇತ್ರಗಳಿಗೆ ನೀಡಿದ ಕೊಡುಗೆಗಾಗಿ 2018 ರಲ್ಲಿ ಸ್ಥಾಪಿಸಲಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಅಪ್ಡಾ ಪ್ರಬಂಧನ್ ಪುರಸ್ಕಾರದ ವಿಜೇತರನ್ನು ಗೌರವಿಸಲಿದ್ದಾರೆ ಎಂದರು.

ಉತ್ತಮ ಭಾರತ ಮತ್ತು ಉತ್ತಮ ಪ್ರಪಂಚಕ್ಕಾಗಿ, ಗಾಂಧೀಜಿಯವರ ದಾರಿ ಪಾಲಿಸಬೇಕು. ಗಾಂಧೀಜಿಯವರು ಆತ್ಮಾವಲೋಕನ ಮಾಡಿಕೊಳ್ಳಬೇಕು ಮತ್ತು ಉತ್ತಮ ಮನುಷ್ಯರಾಗಬೇಕು ಎಂದು ಬಯಸಿದ್ದರು. ಕಳೆದ ತಿಂಗಳು, ದುರದೃಷ್ಟಕರ ಅಪಘಾತದಲ್ಲಿ, ನಾವು ದೇಶದ ವೀರ ಕಮಾಂಡರ್‌ಗಳಲ್ಲಿ ಒಬ್ಬರಾದ ಜನರಲ್ ಬಿಪಿನ್ ರಾವತ್ ಅವರ ಪತ್ನಿ ಮತ್ತು ಅನೇಕ ವೀರ ಸೈನಿಕರನ್ನು ಕಳೆದುಕೊಂಡಿದ್ದೇವೆ. ದುರಂತದಿಂದಾಗಿ ಇಡೀ ದೇಶವೇ ದುಃಖಪಟ್ಟಿದೆ. . ನಮ್ಮ ಗಡಿಗಳನ್ನು ಭದ್ರಪಡಿಸುವ ಸಶಸ್ತ್ರ ಪಡೆಳಿಗೆ ಮತ್ತು ದೇಶದೊಳಗೆ ಆಂತರಿಕ ಭದ್ರತೆಯನ್ನು ನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿಗಳಿಗೆ ಧನ್ಯವಾದಗಳು. ಒಬ್ಬ ವೀರ ಸೈನಿಕನು ಕರ್ತವ್ಯದಲ್ಲಿ ಮರಣಹೊಂದಿದಾಗ, ಇಡೀ ದೇಶವು ದುಃಖಿತವಾಗುತ್ತದೆ. ನಾವೆಲ್ಲರೂ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125 ನೇ ಜನ್ಮದಿನವನ್ನು ಆಚರಿಸಿದ್ದೇವೆ. ಅವರ ಸ್ವಾತಂತ್ರ್ಯದ ಅನ್ವೇಷಣೆ ಮತ್ತು ಭಾರತವನ್ನು ಹೆಮ್ಮೆಪಡುವ ಅವರ ಮಹತ್ವಾಕಾಂಕ್ಷೆ ನಮಗೆಲ್ಲರಿಗೂ ಸ್ಫೂರ್ತಿ ಎಂದು ಹೇಳಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬೆಣ್ಣೆ ಮತ್ತು ಬೆಳ್ಳುಳ್ಳಿ ಫ್ರೈಡ್ ಪ್ರಾನ್ಸ್;

Tue Jan 25 , 2022
ಈ ಬೆಣ್ಣೆ ಮತ್ತು ಬೆಳ್ಳುಳ್ಳಿ ಹುರಿದ ಸೀಗಡಿಗಳು ನೀವು ಎಂದಾದರೂ ಕಾಣುವ ಸುಲಭವಾದ ಸೀಗಡಿಗಳ (ಸೀಗಡಿ) ಪಾಕವಿಧಾನಗಳಲ್ಲಿ ಒಂದಾಗಿದೆ. ಬೆಣ್ಣೆ ಮತ್ತು ಆಲಿವ್ ಎಣ್ಣೆ ಮಿಶ್ರಣದಲ್ಲಿ ಬೆಳ್ಳುಳ್ಳಿ ಮತ್ತು ಮೆಣಸಿನಕಾಯಿ ಚೂರುಗಳೊಂದಿಗೆ ಹುರಿದ ರಸಭರಿತ ಸೀಗಡಿಗಳನ್ನು ಪ್ಯಾನ್ ಮಾಡಿ. ನಿಂಬೆ ರಸ ಮತ್ತು ಕೊತ್ತಂಬರಿ ಸೊಪ್ಪಿನ ಅಲಂಕರಣವು ಈ ಸುಲಭವಾದ ಪ್ರಾನ್ಸ್ ಪಾಕವಿಧಾನಕ್ಕೆ ವಿಲಕ್ಷಣ ಸ್ಪರ್ಶವನ್ನು ನೀಡುತ್ತದೆ. ಕೆಲವು ಭಕ್ಷ್ಯಗಳ ಸಂಪೂರ್ಣ ಸರಳತೆಯು ನಿಮ್ಮನ್ನು ಬೆರಗುಗೊಳಿಸಬಹುದು! ಇದು ಅಂತಹ ಒಂದು […]

Advertisement

Wordpress Social Share Plugin powered by Ultimatelysocial