ರೇಷ್ಮೆ ಇಲಾಖೆಯ ಅಧಿಕಾರಿ ಎಸ್.ಎನ್.ಶ್ರೀನಿವಾಸ ಸಹಕಾರದಿಂದ ರೇಷ್ಮೆ ಅಭಿವೃದ್ದಿ 

ರೇಷ್ಮೆ ಇಲಾಖೆಯಲ್ಲಿ ಬಡ್ತಿ ಹೊಂದಿ ಶಿಡ್ಲಘಟ್ಟ ರೇಷ್ಮೆಗೂಡಿನ ಮಾರುಕಟ್ಟೆಯ ಉಪನಿರ್ದೇಶಕರಾಗಿ ವರ್ಗವಾಗಿರುವ ಎನ್.ಎನ್.ಶ್ರೀನಿವಾಸ್ರವರಿಗೆ ಬಂಗಾರಪೇಟೆ ಪಟ್ಟಣದ ಎಸ್ಎನ್ಆರ್ ಕಲ್ಯಾಣ ಮಂಟಪದಲ್ಲಿ ಬಂಗಾರಪೇಟೆ ಮತು ್ತಕೆಜಿಎಫ್ ರೇಷ್ಮೆ ಬೆಳೆಗಾರರ ಅಭಿವೃದ್ಧಿ ಸಂಘದ ವತಿಯಿಂದ ಬೀಳ್ಕೊಡುಗೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.ಶಾಸಕ ಎಸ್.ಎನ್.ನಾರಾಯಣಸ್ವಾಮಿ ಮಾತನಾಡಿ ಶಿಡ್ಲಘಟ್ಟ ರೇಷ್ಮೆಗೂಡಿನ ಮಾರುಕಟ್ಟೆಯ ಉಪನಿರ್ದೇಶಕರಾಗಿ ವರ್ಗವಾಗಿರುವ ಎನ್.ಎನ್.ಶ್ರೀನಿವಾಸ್ ಕಳೆದ ೧೮ ವರ್ಷಗಳಿಂದ ತಾಲೂಕಿನ ರೇಷ್ಮೆ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ್ದಾರೆ. ಸರ್ಕಾರದ ಎಲ್ಲಾ ಯೋಜನೆಗಳನ್ನು ರೈತರ ಮನೆ ಬಾಗಿಲಿಗೆ ಕೊಂಡೊಯ್ಯುವ ಪ್ರಾಮಾಣಿಕ ದಕ್ಷ ಅಧಿಕಾರಿಯಾಗಿ ಸೇವೆ ಸಲ್ಲಿಸಿ ರೇಷ್ಮೆ ಬೆಳೆಯುವುದರಲ್ಲಿ ಉತ್ತಮ ಸಾಧನೆಯನ್ನು ಸಾಧಿಸಿ ಬಂಗಾರಪೇಟೆಯ ಹೆಸರನ್ನು ದೇಶ-ವಿದೇಶಗಳಿಗೆ ಕೊಂಡೊಯ್ದಿದ್ದಾರೆ.

೯ ವರ್ಷಗಳ ನನ್ನ ಅಧಿಕಾರಾವಧಿಯಲ್ಲಿ ಎಷ್ಟೋ ಅಧಿಕಾರಿಗಳನ್ನು ನೋಡಿದ್ದೇನೆ. ಆದರೆ, ಇಂತಹ ದಕ್ಷ ಅಧಿಕಾರಿಯನ್ನು ಎಂದೂ ಕಂಡಿಲ್ಲ ಬಂಗಾರಪೇಟೆ ಮತ್ತು ಕೆಜಿಎಫ್ ತಾಲೂಕುಗಳಲ್ಲಿ ರೇಷ್ಮೆ ಬೆಳೆ ಬೆಳೆದು ರೈತರು ಉತ್ತಮ ಸಾಧನೆ ಮಾಡಲು ಹಗಲಿರುಳು ದುಡಿದಿರುವ ಇವರನ್ನು ಮುಂದಿನ ದಿನಗಳಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಕೋಲಾರಕ್ಕೆ ವರ್ಗಾಯಿಸಿಕೊಂಡು ಬರುತ್ತೇನೆ ಎಂದು ಭರವಸೆ ನೀಡಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ರೇಷ್ಮೆ ಉಪ ನಿದೇಶಕ ಎಸ್.ಎನ್.ಶ್ರೀನಿವಾಸ್ ರೇಷ್ಮೆ ಬೆಳೆಗಾರರ ಸಹಕಾರದಿಂದ ಉತ್ತಮ ಕೆಲಸ ಮಾಡಿ ಇಲಾಖೆಯಲ್ಲಿ ಮತ್ತು ದೇಶ ವಿದೇಶಗಳಲ್ಲಿ ಬಂಗಾರಪೇಟೆಯ ಹೆಸರು ಮಾಡಲು ಅನುಕೂಲವಾಯಿತು. ರೇಷ್ಮೆ ಬೆಳೆಗಾರರು ಮುಂದೆಯೂ ಇದೇ ರೀತಿ ಅಧಿಕಾರಿಗಳಿಗೆ ಸಹಕಾರ ನೀಡಿ ಎಂದು ಮನವಿ ಮಾಡಿದರು, ಯುವಕರು ರೇಷ್ಮೆ ಬೆಳೆಯಲು ಮುಂದಾಗಬೇಕು ಇನ್ನು ಮುಂದೆ ಪ್ರತಿ ವರ್ಷ ತಾಲೂಕು ಮಟ್ಟದ ಉತ್ತಮ ರೇಷ್ಮೆ ಬೆಳೆಗಾರರೊಬ್ಬರಿಗೆ ತಮ್ಮ ಸ್ವಂತ ಹಣದಿಂದ ೧೦ ಸಾವಿರ ರೂಪಾಯಿ ಬಹುಮಾನ ನೀಡುತ್ತೇನೆ ಎಂದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಡಾ.ಬಿ ಆರ್ ಅಂಬೇಡ್ಕರ್ ಭವನ ಕಾಮಗಾರಿ ಪ್ರಾರಂಭಕ್ಕೆ ಒತ್ತಾಯ

Sun Dec 19 , 2021
ಡಾ.ಬಿ ಆರ್ ಅಂಬೇಡ್ಕರ್ ಭವನ ನಿರ್ಮಾಣದ ವಿಚಾರವಾಗಿ ಸಮಿತಿ ನಿರ್ಮಾಣ ಮಾಡಿದ್ದು ಅಂಬೇಡ್ಕರ್ ಭವನ ನಿರ್ಮಾಣ ಹಂತದಲ್ಲಿ ಕಳಪೆ ಆಗಿರುವುದರಿಂದ ಪೂರ್ತಿ ನೆಲಸಮ ಮಾಡಿ ಹೊಸದಾಗಿ ಕಾಮಗಾರಿ ಪ್ರಾರಂಭ ಮಾಡಿ ಎಂದು ನಮ್ಮ ಬೇಡಿಕೆ ಆಗಿದೆ.ಕಾಮಗಾರಿ ವರದಿ ಸಮಾಜಸ್ಸವಾಗಿ ಇಲ್ಲದ ಕಾರಣ ಕಾಮಗಾರಿ ಹಂತದಲ್ಲಿ ನೆನಗುದ್ದಿಗೆ ಬಿದ್ದಿರುವ ಅಂಬೇಡ್ಕರ್ ಭವನವನ್ನು ನೆಲಸಮ ಗೊಳಿಸಿ ಹೊಸದಾಗಿ ಕಾಮಗಾರಿ ಪ್ರಾರಂಭ ಮಾಡಿ ಎಂದು ಒತ್ತಾಯಿಸಿ ಸೋಮವಾರ ಪ್ರತಿಭಟನೆ ಮಾಡುವುದಾಗಿ ತಿಳಿಸಿದರು..ಛಲವಾದಿ ಮಹಾಸಭಾ ತಾಲೋಕು […]

Advertisement

Wordpress Social Share Plugin powered by Ultimatelysocial