ಗ್ರಾಹಕರಿಕೆ ಶಾಕ್: ದೇಶದ ವಿವಿಧೆಡೆ ಚಿನ್ನದ ಬೆಲೆ ಏರಿಕೆ

ಗ್ರಾಹಕರಿಕೆ ಶಾಕ್: ದೇಶದ ವಿವಿಧೆಡೆ ಚಿನ್ನದ ಬೆಲೆ ಏರಿಕೆ

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಚಿನ್ನದ ಬೆಲೆಯು 10 ಗ್ರಾಂಗೆ 140 ರೂ.ಗಳ ಏರಿಕೆ ಕಂಡು 47,268 ರೂ.ಗಳಿಗೆ ತಲುಪಿದೆ. ಈ ಬಗ್ಗೆ ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ಮಾಹಿತಿ ನೀಡಿದೆ. ಹಿಂದಿನ ವಹಿವಾಟಿನಲ್ಲಿ ಪ್ರತಿ 10 ಗ್ರಾಂಗೆ 47,128 ರೂ.

ಇತ್ತು. ಇನ್ನು ಬೆಳ್ಳಿಯೂ ಸಹ ಹಿಂದಿನ ವಹಿವಾಟಿನಲ್ಲಿ ಪ್ರತಿ ಕೆಜಿಗೆ 60,809 ರೂ. ಇದ್ದದ್ದು ಈಗ 290 ರೂ.ಏರಿಕೆಯಾಗಿ 61,099 ರೂ.ಗೆ ಜಿಗಿದಿದೆ.

ಇನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಪ್ರತಿ ಔನ್ಸ್‌ಗೆ USD 1,807 ಮತ್ತು ಬೆಳ್ಳಿ ಪ್ರತಿ ಔನ್ಸ್‌ಗೆ USD 22.87 ರಂತೆ ವಹಿವಾಟು ನಡೆಸುತ್ತಿದೆ. ದುರ್ಬಲ ಡಾಲರ್ ಮತ್ತು ಕ್ರಿಸ್‌ಮಸ್ ರಜೆಗೆ ಮುಂಚಿತವಾಗಿ ಯುಎಸ್​ ಬಾಂಡ್ ಇಳುವರಿಯಲ್ಲಿ ಉಂಟಾದ ಕುಸಿತದಿಂದಾಗಿ ಚಿನ್ನದ ಬೆಲೆಗಳು ಹೆಚ್ಚಾಗಿವೆ ಎಂದು ಹೆಚ್​ಡಿಎಫ್​ಸಿ ಸೆಕ್ಯುರಿಟೀಸ್ ನ ಹಿರಿಯ ವಿಶ್ಲೇಷಕ ತಪನ್ ಪಟೇಲ್ ಈ ಬಗ್ಗೆ ಹೇಳಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಮ್ಮ ಭವಿಷ್ಯ ಸುಳ್ಳಾಗುವುದಿಲ್ಲ: ಇಬ್ರಾಹಿಂ

Fri Dec 24 , 2021
ಬೆಳಗಾವಿ: ಯಡಿಯೂರಪ್ಪ ಸಿಎಂ ಆಗಿದ್ದಾಗ ಡಿಸೆಂಬರ್‌ಗೆ ಇಳಿಯುತ್ತಾರೆ ಎಂದಿದ್ದೆ, ಈಗ ಬೊಮ್ಮಾಯಿ ಅವರು ಜನವರಿಗೆ ಇಳಿಯುತ್ತಾರೆ ಎಂದು ಹೇಳಿದ್ದೇನೆ. ನಮ್ಮ ಭವಿಷ್ಯ ಸುಳ್ಳಾಗುವುದಿಲ್ಲ ಎಂದು ಕಾಂಗ್ರೆಸ್‌ ಸದಸ್ಯ ಸಿ.ಎಂ. ಇಬ್ರಾಹಿಂ ಅವರು ಹೇಳಿದ್ದಾರೆ. ಸುವರ್ಣ ವಿಧಾನಸೌಧದಲ್ಲಿ ಮಾತನಾಡಿದ ಅವರು, ಈಗಾಗಲೇ ಮೇಲ್ನೋಟಕ್ಕೆ ಎರಡು ಮೂರು ಹೆಸರು ಕೇಳಿ ಬರುತ್ತಿವೆ. ಬೊಮ್ಮಾಯಿ ಅವರ ಕಾಲು ಚೆನ್ನಾಗಿತ್ತು. ಕೆಲಸ ಮಾಡಿ ಕುಂಟುವಂತಾಗಿದೆ. ಮುಂಬಯಿಗೆ 12 ಜನರನ್ನು ಕರೆದುಕೊಂಡು ಹೋಗಿ ವೀಡಿಯೋ ಮಾಡಿಕೊಂಡು ಕೋರ್ಟ್‌ನಲ್ಲಿ […]

Advertisement

Wordpress Social Share Plugin powered by Ultimatelysocial