ರಾಜಮೌಳಿ ನಿರ್ದೇಶನದ ‘RRR’ ಬಿಡುಗಡೆ ಮತ್ತೆ ಮುಂದೂಡಿಕೆ;

ಮುಂಬೈ : ಎಸ್‌.ಎಸ್‌.ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ ಚಿತ್ರ “ಆರ್‌ಆರ್‌ಆರ್‌’ಗೆ ಒಮಿಕ್ರಾನ್‌ ಕಾಟ ಆರಂಭವಾದಂತಿದೆ. ಜ.7ರಂದು ತೆರೆ ಕಾಣಬೇಕಿದ್ದ ಸಿನಿಮಾ ಈಗ ಮತ್ತೂಮ್ಮೆ ಬಿಡುಗಡೆ ದಿನಾಂಕ ಮುಂದುಹಾಕಲಿದೆ ಎನ್ನಲಾಗುತ್ತಿದೆ.

ಮಹಾರಾಷ್ಟ್ರದಲ್ಲಿ ಸೋಂಕು ನಿಯಂತ್ರಣ ಹಿನ್ನೆಲೆಯಲ್ಲಿ ಸಿನಿಮಾ ಮಂದಿರಗಳಲ್ಲಿ ಆಸನ ಸಾಮರ್ಥ್ಯ ಶೇ.50ಕ್ಕೆ ಇಳಿಸಿರುವುದರಿಂದ ಅಲ್ಲಿನ ಸಿನಿ ವಿತರಕರು ಸಿನಿಮಾ ಬಿಡುಗಡೆ ದಿನಾಂಕ ಮುಂದೂಡಲು ಕೋರಿದ್ದಾರೆ. ಸಿನಿಮಾ ತಂಡ ಮುಂದೂಡಿಕೆ ಇಲ್ಲವೆಂದಿದೆ.

ಆದರೆ ಬಾಲಿವುಡ್‌ ತಾರೆಗಳೂ ಸಿನಿಮಾದಲ್ಲಿ ಇರುವುದರಿಂದಾಗಿ ಮುಂದೂಡಿಕೆ ಸಾಧ್ಯತೆ ಹೆಚ್ಚಿದೆ. ಆಲಿಯಾ ಭಟ್‌, ಜೂನಿಯರ್‌ ಎನ್‌ಟಿಆರ್‌ ಸೇರಿ ದೊಡ್ಡ ತಾರಾಬಳಗವೇ ಈ ಚಿತ್ರದಲ್ಲಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

 

Please follow and like us:

Leave a Reply

Your email address will not be published. Required fields are marked *

Next Post

ಬಾಲಿವುಡ್ ಸಿನಿಮಾದಲ್ಲಿ ನಟಿಸಲು ಷರತ್ತು ಹಾಕಿದ ಸಾಯಿ ಪಲ್ಲವಿ:BOLLYWOOD

Wed Dec 29 , 2021
ದಕ್ಷಿಣ ಭಾರತದಲ್ಲಿ ಮಿಂಚುವ ನಟಿಯರು ಬಾಲಿವುಡ್ ಸಿನಿಮಾಗಳಲ್ಲಿ ಸ್ಥಾನ ಪಡೆದುಕೊಳ್ಳುವುದು ಹೊಸದೇನೂ ಅಲ್ಲ. ಇದಕ್ಕೆ ತಾಜಾ ಉದಾಹರಣೆ ನಟಿ ರಶ್ಮಿಕಾ ಮಂದಣ್ಣ. ಕೆಲವೇ ಸಿನಿಮಾಗಳಲ್ಲಿ ನಟಿಸಿದ ಕೂಡಲೇ ಬಾಲಿವುಡ್‌ಗೆ ಹಾರಿರುವ ನಟಿ ರಶ್ಮಿಕಾ ಮಂದಣ್ಣ ಅಲ್ಲಿ ಎರಡು ದೊಡ್ಡ ಬಜೆಟ್ ಸಿನಿಮಾಗಳಲ್ಲಿ ನಟಿಸಿ ಇನ್ನು ಮುಂದೆ ಬಾಲಿವುಡ್‌ನಲ್ಲಿಯೇ ನೆಲೆಯೂರಲು ಸಕಲ ರೀತಿಯ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ರಶ್ಮಿಕಾ ಮಂದಣ್ಣ ರಂತೆಯೇ ನಟಿ ಸಾಯಿ ಪಲ್ಲವಿ ಸಹ ದಕ್ಷಿಣ ಭಾರತದ ಜನಪ್ರಿಯ ಹಾಗೂ […]

Advertisement

Wordpress Social Share Plugin powered by Ultimatelysocial