ಆರ್ ಆರ್ ಆರ್ ಟ್ರೈಲರ್ ನಲ್ಲಿ ಅಬ್ಬರಿಸಿದ ಜ್ಯೂ.ಎನ್ ಟಿಆರ್, ರಾಮ್ ಚರಣ್

ಆರ್ ಆರ್ ಆರ್ ಟ್ರೈಲರ್ ನಲ್ಲಿ ಅಬ್ಬರಿಸಿದ ಜ್ಯೂ.ಎನ್ ಟಿಆರ್, ರಾಮ್ ಚರಣ್: ಇಲ್ಲಿದೆ ವಿಡಿಯೋ

ಸ್ಟಾರ್ ನಿರ್ದೇಶಕ ಎಸ್.ಎಸ್.ರಾಜಮೌಳಿ ನಿರ್ದೇಶನದ ಬಹುತಾರಾಗಣದ ಬಹು ನಿರೀಕ್ಷಿತ ‘ಆರ್ ಆರ್ ಆರ್’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು, ಹವಾ ಎಬ್ಬಿಸಿದೆ.

ಜೂ.ಎನ್ ಟಿಆರ್ ಮತ್ತು ರಾಮ್ ಚರಣ್ ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದು, ಬಾಲಿವುಡ್ ನಟರಾದ ಅಜಯ್ ದೇವಗನ್, ಆಲಿಯಾ ಭಟ್ ಸೇರಿದಂತೆ ಹಲವು ಪ್ರಮುಖ ನಟರು ಆರ್ ಆರ್ ಆರ್ ಚಿತ್ರದಲ್ಲಿ ನಟಿಸಿದ್ದಾರೆ.

ಡಿವಿವಿ ಎಂಟರ್ಟೈನ್ ಮೆಂಟ್ಸ್ ಬ್ಯಾನರ್ ನಡಿಯಲ್ಲಿ ಚಿತ್ರದ ನಿರ್ಮಾಣ ನಡೆದಿದ್ದು, ಕೆ.ವಿ.ವಿಜಯೇಂದ್ರ ಪ್ರಸಾದ್ ಕಥೆ ಬರೆದಿದ್ದಾರೆ. ಸಂಗೀತ ಮಾಂತ್ರುಕ ಎಂ.ಎಂ.ಕೀರವಾಣಿ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ.

ಭಾರತದಲ್ಲಿ ಬ್ರಿಟಿಷರ ಆಳ್ವಿಕೆಯ ಕಾಲಘಟದಲ್ಲಿ ನಡೆದ ಕಥೆಯಾಗಿದ್ದು, ನ್ಯೂ.ಎನ್ ಟಿಆರ್ ಅವರು ಸ್ವಾತಂತ್ರ್ಯ ಹೋರಾಟಗಾರನಾಗಿ ಮತ್ತು ರಾಮ್ ಚರಣ್ ಅವರು ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡ ಅವತರಣಿಕೆಯಲ್ಲಿ ಅವರೇ ಧ್ವನಿ ನೀಡಿದ್ದು, ಕನ್ನಡ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಮಿಸ್ಟರ್ ಪರ್ಫಕ್ಟ್ ನಿಂದ ಕೆಜಿಎಫ್2 ಪ್ರಮೋಷನ್..!

Thu Dec 23 , 2021
ಕೆಎನ್‌ಎನ್‌ಡಿಜಿಟಲ್‌ಡೆಸಕ್‌: ಕೆಜಿಎಫ್2.. ಯಾವಾಗ ಈ ಸಿನಿಮಾದ ದರ್ಶನವಾಗುತ್ತೋ… ಆ ದಿವ್ಯ ಘಳಿಗೆಗೆ ಸಮಯ ಬೇಗ ಒದಗಿ ಬರಬಾರದಾ ಎಂದು ಸಿನಿ ಪ್ರೇಮಿಗಳು ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆ. ಮುಂದಿನ ವರ್ಷ ಏಪ್ರಿಲ್ 14ರಂದು ಕೆಜಿಎಫ್ 2 ರಿಲೀಸ್ ಆಗುತ್ತೆ ಅಂತ ಚಿತ್ರತಂಡ ಅಧಿಕೃತವಾಗಿ ಘೋಷಣೆ ಮಾಡಿದೆ. ಆದ್ರೆ ಅಷ್ಟು ದಿನಗಳನ್ನ ಕಾಯೋದಕ್ಕೂ ಫ್ಯಾನ್ಸ್ ಗೆ ಆಗ್ತಾ ಇಲ್ಲ. ಜಪ ಮಾಡಿಕೊಂಡು ಕೆಜಿಎಫ್ ಕೆಜಿಎಫ್ ಎಂದು ಜಪ ಮಾಡುತ್ತಿದ್ದಾರೆ. ಇದೀಗ ಮತ್ತೊಂದು ಖುಷಿಯ […]

Advertisement

Wordpress Social Share Plugin powered by Ultimatelysocial