ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸುವಂತೆ ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ಮನವಿ.

 

 

 

ಹಿಂದೂಯಿಸಂನಲ್ಲಿ ಗೋವುಗಳು ದೇವರು ಹಾಗೂ ಕಾಮಧೇನು ಎಂಬ ನಂಬಿಕೆ ಹಾಗೂ ವಿಶ್ವಾಸ ಇದೆ. ಅದನ್ನು ಕಾಪಾಡುವ ಹಾಗೂ ಗೌರವಿಸುವ ಅಗತ್ಯವಿದೆ. ಹಾಗಾಗಿ ಅವುಗಳ ಹತ್ಯೆಯನ್ನು (Cow Slaughter) ತಡೆಯಲು ಕೇಂದ್ರ ಸರ್ಕಾರವು ಗೋಹತ್ಯೆ ನಿಷೇಧಕ್ಕೆ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಮತ್ತು ಅವುಗಳನ್ನು ‘ಸಂರಕ್ಷಿತ ರಾಷ್ಟ್ರೀಯ ಪ್ರಾಣಿ’ ಎಂದು ಘೋಷಣೆ ಮಾಡಲಿದೆ ಅಲಹಾಬಾದ್ ಹೈಕೋರ್ಟ್ ಭರವಸೆ ವ್ಯಕ್ತಪಡಿಸಿದೆ.
ಪ್ರಕರಣವೊಂದರ ವಿಚಾರಣೆ ವೇಳೆ ಈ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿರುವ ಅಲಹಾಬಾದ್ ಹೈಕೋರ್ಟ್‌ ನ್ಯಾಯಮೂರ್ತಿ ಶಮೀಮ್ ಅಹ್ಮದ್ ಅವರ ನ್ಯಾಯಪೀಠವು, ಜಾತ್ಯತೀತ ದೇಶವಾಗಿರುವ ಭಾರತದಲ್ಲಿ ಎಲ್ಲ ಧರ್ಮಗಳಿಗೂ ಗೌರವ ನೀಡುತ್ತೇವೆ. ವೇದ ಕಾಲದಿಂದಲೂ ಗೋವುಗಳ ಆರಾಧನೆಯನ್ನು ಕಾಣಬಹುದು. ಗೋವುಗಳನ್ನು ಕೊಲ್ಲುವವರು ಅಥವಾ ಗೋವುಗಳನ್ನು ಕೊಲ್ಲಲು ಬೇರೆಯವರಿಗೆ ಅವಕಾಶ ನೀಡುವವರು, ಅವರ ದೇಹದ ಮೇಲೆ ಕೂದಲು ಇರುವಷ್ಟು ಕಾಲದ ವರೆಗೆ ನರಕದಲ್ಲಿ ಕೊಳೆಯಲು ಅರ್ಹರು ಎಂದು ಪೀಠ ಕಿಡಿಕಾರಿದೆ.ಗೋಹತ್ಯೆ ಮತ್ತು ಗೋಸಾಗಾಣಿಕೆ ಮಾಡಿದ ಆರೋಪ ಎದುರಿಸುತ್ತಿರುವ ಉತ್ತರ ಪ್ರದೇಶದ ಮೊಹಮ್ಮದ್ ಅಬ್ದುಲ್ ಖಾಲಿಕ್ ತನ್ನ ವಿರುದ್ಧ ಅಪರಾಧ ಪ್ರಕರಣಗಳನ್ನು ರದ್ದುಗೊಳಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ವಜಾಗೊಳಿಸಿರುವ ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಶಮೀಮ್ ಅಹ್ಮದ್ ಅವರ ನ್ಯಾಯಪೀಠವು, ಗೋವು ತಾಯಿ ಸಮಾನ, ಭಗವಾನ್ ಶ್ರೀ ಕೃಷ್ಣನು ಕೂಡ ಗೋವಿನ ಪಾದಗಳಿಂದ ಜ್ಞಾನ ಪಡೆದಿದ್ದಾನೆ. ಹಿಂದೂಗಳು ಶತಮಾನದಿಂದ ಗೋವನ್ನು ಪೂಜಿಸುತ್ತಿದ್ದಾರೆ. ಹಿಂದೂಯೇತರ, ಮೊಘಲರ ಕಾಲದಲ್ಲಿಯೂ ಹಿಂದೂ ಭಾವನೆಗಳನ್ನು ಗೌರವಿಸಿ, ಗೋ ಹತ್ಯೆಯನ್ನು ಬಲವಾಗಿ ವಿರೋಧಿಸಲಾಗಿತ್ತು ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.ಹಿಂದೂಗಳ ನಂಬಿಕೆಯ ಬಗ್ಗೆಯೂ ಉಲ್ಲೇಖ ಮಾಡಿದ ನ್ಯಾಯಾಲಯ, ಶುದ್ಧೀಕರಿಸುವಿಕೆ ಮತ್ತು ಪಂಚಗವ್ಯದ (ಹಾಲು, ಮೊಸರು, ಬೆಣ್ಣೆ, ಗೋಮೂತ್ರ ಮತ್ತು ಸಗಣಿ) ಬಳಕೆಯಲ್ಲಿ ಗೋವು ಮಹತ್ವದ ಪಾತ್ರ ವಹಿಸುತ್ತವೆ. ಈ ಕಾರಣದಿಂದ ಅವುಗಳಿಗೆ ಪೂಜನೀಯ ಸ್ಥಾನವಿದೆ. ಬ್ರಹ್ಮನು ಪುರೋಹಿತರು ಮತ್ತು ಗೋವುಗಳನ್ನು ಏಕಕಾಲದಲ್ಲಿ ಸೃಷ್ಟಿಸಿದ. ಪುರೋಹಿತರು ಧಾರ್ಮಿಕ ಶ್ಲೋಕಗಳನ್ನು ಉಚ್ಚರಿಸಿದರೆ, ಗೋವುಗಳು ಆ ಆಚರಣೆಗೆ ಅಗತ್ಯವಾದ ತುಪ್ಪ ನೀಡಲಿ ಎನ್ನುವುದು ಅದರ ಆಶಯ ಎಂದು ಕೋರ್ಟ್ ಹೇಳಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಾಜ್ಯದ ಶಾಲಾ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್.

Sun Mar 5 , 2023
  ರಾಜ್ಯದ ಶಾಲಾ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ಸಿಹಿಸುದ್ದಿ ನೀಡಿದ್ದು,ಮುಂದಿನ ಶೈಕ್ಷಣಿಕ ವರ್ಷದಲ್ಲಿ ಶಾಲೆ ಆರಂಭದ ದಿನವೇ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಪಠ್ಯಪುಸ್ತಕ ತಲುಪಿಸಲು ಸಿದ್ಧತೆ ನಡೆಸಿದೆ.ಹೌದು, ಕಳೆದ ವರ್ಷ ಸಮವಸ್ತ್ರ ಹಾಗೂ ಪಠ್ಯಪುಸ್ತಕವನ್ನು ಸಕಾಲಕ್ಕೆ ಪೂರೈಸದೇ ಟೀಕೆ ಎದುರಿಸಿದ್ದ ಶಿಕ್ಷಣ ಇಲಾಖೆ, ಮುಂದಿನ ಶೈಕ್ಷಣಿಕ ವರ್ಷದಲ್ಲಿ ಶಾಲೆ ಆರಂಭದ ದಿನವೇ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಪಠ್ಯಪುಸ್ತಕ ವಿತರಿಸಲು ಮುಂದಾಗಿದೆ. 1 ರಿಂದ 10 ನೇ ತರಗತಿ ವಿದ್ಯರ್ಥಿಗಳಿಗೆ ಪೂರೈಸಬೇಕಿರುವ ಪಠ್ಯಪುಸ್ತಕದಲ್ಲಿ ಶೇ. […]

Advertisement

Wordpress Social Share Plugin powered by Ultimatelysocial