ಚಿಕ್ಕಮ್ಮನನ್ನೇ ಪ್ರೀತಿಸಿ ಮದುವೆಯಾದ ಯುವಕ..!

ಸಂಬಂಧಗಳು ತುಂಬಾ ವಿಚಿತ್ರ. ಇನ್ನು ಪ್ರೀತಿಯ (Love) ವಿಚಾರ ಇನ್ನೂ ವಿಚಿತ್ರ. ಪ್ರೀತಿಗೆ ಕಣ್ಣಿಲ್ಲ ಅಂತೆಲ್ಲ ಹೇಳೋದು ಸುಮ್ಮನೆ ಅಲ್ಲ. ಪ್ರೀತಿಗೆ ಸಂಬಂಧಗಳೂ ಲೆಕ್ಕಕ್ಕಿಲ್ಲ. ಒಟ್ಟಾರೆಯಾಗಿ ಲವ್ ಆಗಿಬಿಡುತ್ತೆ ಅಷ್ಟೆ. ಅಪ್ಪ ಮಗಳನ್ನು ಮೋಹಿಸುವುದು, ಅಣ್ಣ-ತಂಗಿಯನ್ನು ಮೋಹಿಸುವುದು ಹೀಗೆ ಇಂಥಹ ಘಟನೆಗಳು ನಡೆಯುತ್ತಲೇ ಇರುತ್ತವೆ.

ಪ್ರೀತಿಗೆ ಯಾವುದೇ ಕಂಡೀಷನ್ಸ್ ಇಲ್ಲ. ಸುಮ್ಮನೆ ಹಾಗೆಯೇ ಪ್ರೀತಿ ಆಗಿಬಿಡುತ್ತದೆ. ಮತ್ತೆ ಕಾಣಿಸುವ ಸರಿ ತಪ್ಪುಗಳೆಲ್ಲವೂ ನಂತರ ನಗಣ್ಯ. ಇತ್ತೀಚೆಗ ಝಾರ್ಕಂಡ್​ನಲ್ಲಿ ಇಂಥದ್ದೇ ಪ್ರೇಮ ಪ್ರಸಂಗ ನಡೆದಿದೆ. ಇವರ ಪ್ರೇಮವೋ, ಸಂಬಂಧವೋ ಎರಡವೂ ವಿಚಿತ್ರವಾಗಿದೆ. ಅಮ್ಮನ ಸ್ಥಾನದಲ್ಲಿರುವ ಚಿಕ್ಕಮ್ಮನನ್ನೇ ಈತ ಮದುವೆಯಾಗಿದ್ದಾನೆ (Marriage). ಅದೆಂಥಾ ಪ್ರೀತಿಯೋ ಇವರಿಗೆ ತಮ್ಮ ನಡುವಿನ ಸಂಬಂಧ ಕೂಡಾ ಪ್ರೀತಿಗಿಂತ ದೊಡ್ಡದಲ್ಲ ಎಂದು ಸಾಬೀತು ಮಾಡಿದ್ದಾರೆ ಈ ಜೋಡಿ. ಈ ಯುವಕನಿಗೆ ಅಪ್ಪನೇ ಅಣ್ಣನೂ ಆಗಿಬಿಟ್ಟಿದ್ದಾನೆ.

ತಾಯಿಯ ತಂಗಿಯನ್ನು (Mothers Sister) ಈ ವ್ಯಕ್ತಿ ಮದುವೆಯಾಗಿದ್ದಾರೆ. ಇದನ್ನು ಕೇಳಿದರೆ ನೀವು ಆಶ್ಚರ್ಯ ಪಡುತ್ತೀರಿ, ಆದರೆ ಹೈದರಾಬಾದ್‌ನ (Hyderabad) ಖಾಸಗಿ ಕಂಪನಿಯೊಂದರಲ್ಲಿ (Company) ಕೆಲಸ ಮಾಡುವ ವ್ಯಕ್ತಿಯೊಬ್ಬ ತನ್ನ ಚಿಕ್ಕಮ್ಮನೊಂದಿಗೆ ಪ್ರೇಮವಿವಾಹ (Love Marriage) ಮಾಡಿಕೊಂಡು ಎಲ್ಲರನ್ನು ಅಚ್ಚರಿಗೊಳಿಸಿದ್ದಾನೆ.

ಗ್ರಾಮಸ್ಥರೇ ವಿರೋಧಿಸಿದ್ರು

ಆ ವ್ಯಕ್ತಿ ತನ್ನ ಸ್ವಂತ ತಾಯಿಯ ತಂಗಿಯನ್ನು ವರಿಸಿಕೊಂಡು ಗ್ರಾಮಕ್ಕೆ ಹಿಂತಿರುಗಿದಾಗ, ಈ ಸಂಬಂಧವನ್ನು ಅನುಮೋದಿಸಲು ಗ್ರಾಮಸ್ಥರು ಸಿದ್ಧರಿರಲಿಲ್ಲ. ಹೀಗಿರುವಾಗ ಆ ಪ್ರೇಮಿಗಳು ಪೊಲೀಸ್ ಆಶ್ರಯದ ಮೊರೆ ಹೋಗಬೇಕಾಯಿತು.

ತಾಯಿಗೆ ಸಮಾನ ಚಿಕ್ಕಮ್ಮ

ತಾಯಿಯ ಸಹೋದರಿ ಅಂದರೆ ಚಿಕ್ಕಮ್ಮನಿಗೆ ಸಮಾಜದಲ್ಲಿ ತಾಯಿಯಷ್ಟೇ ಸ್ಥಾನಮಾನ ನೀಡಲಾಗಿದೆ. ಆದರೆ ಯಾರಾದರೂ ತನ್ನ ಚಿಕ್ಕಮ್ಮನನ್ನು ಪ್ರೀತಿಸಿದರೆ ಮತ್ತು ಪರಿಸ್ಥಿತಿ ಮದುವೆಗೆ ಬಂದರೆ, ನೀವು ಏನು ಹೇಳುತ್ತೀರಿ? ಇದು ಆಶ್ಚರ್ಯಕರವಲ್ಲವೇ!

ಅಮ್ಮನ ಸ್ಥಾನದಲ್ಲಿದ್ದವಳು ಅರ್ಧಾಂಗಿಯಾದಳು

ಜಾರ್ಖಂಡ್‌ನ ಚತ್ರಾದಲ್ಲಿ ಯುವಕನೊಬ್ಬ ತನ್ನ ಚಿಕ್ಕಮ್ಮನನ್ನು ಪ್ರೀತಿಸಿದ್ದಾನೆ. ಪ್ರೀತಿ ಆಳವಾಗಿ ಅವರಿಬ್ಬರೂ ಒಬ್ಬರನ್ನೊಬ್ಬರು ಬಿಟ್ಟಿರಲಾರದ ಸ್ಥಿತಿ ತಲುಪಿದ್ದಾರೆ. ಚಿಕ್ಕಮ್ಮನನ್ನೇ ಪಟ್ಟು ಹಿಡಿದು ಮದುವೆಯಾಗಿ ಅಮ್ಮನ ಸ್ಥಾನದಲ್ಲಿದ್ದಾಕೆಯನ್ನು ಅರ್ಧಾಂಗಿಯಾಗಿ ಸ್ವೀಕರಿಸಿಯಾಗಿದೆ. ಈ ವ್ಯಕ್ತಿ ಕಳೆದ ಒಂದು ವರ್ಷದಿಂದ ಚಿಕ್ಕಮ್ಮನೊಂದಿಗೆ ಪ್ರೇಮ ಸಂಬಂಧ ಹೊಂದಿದ್ದು. ಈ ವಿಚಿತ್ರ ಪ್ರೇಮ ಕಥೆ ಈಗ ಎಲ್ಲೆಡೆ ಸುದ್ದಿಯಾಗಿದೆ.

ದೇವಾಲಯದಲ್ಲೇ ಮದುವೆ

ಛತ್ರದ ರಕ್ಸಿ ಗ್ರಾಮದ ನಿವಾಸಿ ಸೋನು ರಾಣಾ ತನ್ನ ಸ್ವಂತ ಚಿಕ್ಕಮ್ಮನನ್ನು ಜೀವನ ಸಂಗಾತಿಯನ್ನಾಗಿ ಮಾಡಿಕೊಂಡಿದ್ದಾನೆ. ಹೈದರಾಬಾದ್‌ನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸೋನು ತನ್ನ ಚಿಕ್ಕಮ್ಮನೊಂದಿಗೆ ಹೆರುವಾ ನದಿಯ ದಡದಲ್ಲಿರುವ ಶಿವ ದೇವಾಲಯದಲ್ಲಿ ಪ್ರೇಮ ವಿವಾಹವಾಗಿದ್ದರು. ಸೋನು ಕುಟುಂಬ ಸದಸ್ಯರು ಮತ್ತು ಗ್ರಾಮಸ್ಥರು ತಾಯಿಯ ಸಹೋದರಿಯನ್ನು ಮದುವೆಯಾಗುವ ಬಗ್ಗೆ ಮಾಹಿತಿ ಪಡೆದ ತಕ್ಷಣ, ಎಲ್ಲರೂ ಮೊದಲು ದಿಗ್ಭ್ರಮೆಗೊಂಡರು.

ಮನೆಬಿಟ್ಟು ಓಡಿ ಹೋದರು

ಈ ಸಂಬಂಧ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದಾಗ ನವ ದಂಪತಿಗಳು ಮನೆ ಬಿಟ್ಟು ಓಡಿ ಹೋಗಬೇಕಾಯಿತು. ಕುಟುಂಬ ಸದಸ್ಯರು ಮತ್ತು ಗ್ರಾಮಸ್ಥರಿಂದ ತಲೆಮರೆಸಿಕೊಂಡಿದ್ದ ಇಬ್ಬರೂ ಇದೀಗ ಸದರ್ ಪೊಲೀಸ್ ಠಾಣೆಯಲ್ಲಿ ಆಶ್ರಯ ಪಡೆದಿದ್ದಾರೆ. ಯುವಕ ಹಾಗೂ ಯುವತಿ ಇಬ್ಬರೂ ವಯಸ್ಕರಾಗಿದ್ದು, ಪೊಲೀಸರು ಕೂಡ ಇಬ್ಬರ ಕುಟುಂಬದವರನ್ನು ಕರೆಸಿ ವಿವರಣೆ ನೀಡಿದ್ದಾರೆ.

ಇಬ್ಬರ ಸಂಬಂಧಿಕರಿಂದಲೂ ವಿರೋಧ

ಚಿಕ್ಕಮ್ಮನೊಂದಿಗಿನ ಪ್ರೇಮ ವಿವಾಹದ ಬಗ್ಗೆ ಪೊಲೀಸರ ಮೊರೆ ಹೋದರೂ ಹುಡುಗ ಮತ್ತು ಹುಡುಗಿಯ ಕುಟುಂಬ ಸದಸ್ಯರು ಒಪ್ಪುತ್ತಿಲ್ಲ. ಅದೇ ಸಮಯದಲ್ಲಿ, ಪ್ರೀತಿಯ ಜೋಡಿಯು ಒಟ್ಟಿಗೆ ಇರಲು ಅಚಲವಾಗಿ ನಿರ್ಧರಿಸಿದ್ದಾರೆ. ಇಬ್ಬರ ಕುಟುಂಬಸ್ಥರು ಪೊಲೀಸರ ಮುಂದೆಯೂ ಈ ಮದುವೆಯನ್ನು ಸಮಾಜವಿರೋಧಿ ಎಂದು ಹೇಳಿದ್ದಾರೆ. ಈ ಸಂಬಂಧವನ್ನು ಒಪ್ಪಿಕೊಳ್ಳಲು ನಿರಾಕರಿಸಿದರು. ಪೊಲೀಸರು ಹೇಗೋ ಕುಟುಂಬಸ್ಥರಿಗೆ ವಿವರಿಸಿದರು. ಇದಾದ ಬಳಿಕ ಎಲ್ಲರ ಸಮ್ಮುಖದಲ್ಲಿ ಬಾಂಡ್ ಪೇಪರ್ಸ್​ ಫಿಲ್ ಮಾಡು ನಂತರ ಜೋಡಿಯನ್ನು ಮನೆಗೆ ಕಳುಹಿಸಲಾಯಿತು.

ಪ್ರೇಮಿಗಳ ಜೋಡಿ ಗ್ರಾಮಕ್ಕೆ ಬಂದಾಗ, ಕಣ್ಣೀರಿಟ್ಟ ತಾಯಿ

ಪೊಲೀಸ್ ಠಾಣೆಯಿಂದ ಚಿಕ್ಕಮ ಎನಿಸಿಕೊಂಡ ವಧುವಿನ ಜೊತೆ ಮಗ ಮನೆಗೆ ತಲುಪಿದಾಗ ತಾಯಿ ಅಳುತ್ತಾ ಆಕಾಶವೇ ತಲೆ ಮೇಲೆ ಬಿದ್ದವರಂತೆ ರೋದಿಸುತ್ತಿದ್ದರು. ತನ್ನ ಮಗನಿಗೆ ವಿವರಿಸಿ ತಿಳಿ ಹೇಳುವಂತೆ ಬಹಳಷ್ಟು ಜನರಲ್ಲಿ ಬೇಡಿಕೊಳ್ಳುತ್ತಿದ್ದಳು. ತನ್ನ ತಂಗಿಗೂ ಸಹೋದರ ಸಂಬಂಧವನ್ನು ವಿವರಿಸುತ್ತಿದ್ದಳು. ಸಂಬಂಧಗಳ ಗೊಂದಲದ ಸುಳಿಯಲ್ಲಿ ಸಿಲುಕಿರುವ ಗ್ರಾಮಸ್ಥರು ಇದೊಂದು ಸಮಾಜವಿರೋಧಿ ಸಂಬಂಧ ಎನ್ನುತ್ತಿದ್ದರೆ, ಮತ್ತೊಂದೆಡೆ ಪ್ರೇಮಿಗಳು ಪರಸ್ಪರ ಜೀವನ ಕಳೆಯುವ ಮಾತುಗಳನ್ನಾಡುತ್ತಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಹಾಶಿವರಾತ್ರಿ; ಭಕ್ತರಿಂದ ಹಂಪಿ ವಿರೂಪಾಕ್ಷನ ದರ್ಶನ

Tue Mar 1 , 2022
ಹೊಸಪೇಟೆ (ವಿಜಯನಗರ): ಮಹಾಶಿವರಾತ್ರಿ ನಿಮಿತ್ತ ನೂರಾರು ಸಂಖ್ಯೆಯ ಭಕ್ತರು ಸೋಮವಾರ ಹಂಪಿಗೆ ಬಂದು ವಿರೂಪಾಕ್ಷೇಶ್ವರನ ದರ್ಶನ ಪಡೆದರು. ದೇವಸ್ಥಾನಕ್ಕೆ ಹೊಂದಿಕೊಂಡಂತೆ ಹರಿಯುವ ತುಂಗಭದ್ರಾ ನದಿಯಲ್ಲಿ ಮಿಂದೆದ್ದು, ದೇಗುಲದ ವರೆಗೆ ಬರಿಗಾಲಲ್ಲಿ ನಡೆದು, ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ವಿವಿಧ ಕಡೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬಂದದ್ದರಿಂದ ರಥಬೀದಿ, ದೇವಸ್ಥಾನದ ಪರಿಸರದಲ್ಲಿ ಜನಜಾತ್ರೆ ಕಂಡು ಬಂದಿತು. ಶಿವರಾತ್ರಿ ಪ್ರಯುಕ್ತ ಬೆಳಿಗ್ಗೆ ವಿರೂಪಾಕ್ಷೇಶ್ವರನಿಗೆ ವಿಶೇಷ ರೀತಿಯಲ್ಲಿ ಅಲಂಕರಿಸಿ, ಪೂಜೆ ನೆರವೇರಿಸಲಾಯಿತು. […]

Advertisement

Wordpress Social Share Plugin powered by Ultimatelysocial