ರಾಜ್ಯದ ಶಾಲಾ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್.

 

ರಾಜ್ಯದ ಶಾಲಾ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ಸಿಹಿಸುದ್ದಿ ನೀಡಿದ್ದು,ಮುಂದಿನ ಶೈಕ್ಷಣಿಕ ವರ್ಷದಲ್ಲಿ ಶಾಲೆ ಆರಂಭದ ದಿನವೇ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಪಠ್ಯಪುಸ್ತಕ ತಲುಪಿಸಲು ಸಿದ್ಧತೆ ನಡೆಸಿದೆ.ಹೌದು, ಕಳೆದ ವರ್ಷ ಸಮವಸ್ತ್ರ ಹಾಗೂ ಪಠ್ಯಪುಸ್ತಕವನ್ನು ಸಕಾಲಕ್ಕೆ ಪೂರೈಸದೇ ಟೀಕೆ ಎದುರಿಸಿದ್ದ ಶಿಕ್ಷಣ ಇಲಾಖೆ, ಮುಂದಿನ ಶೈಕ್ಷಣಿಕ ವರ್ಷದಲ್ಲಿ ಶಾಲೆ ಆರಂಭದ ದಿನವೇ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಪಠ್ಯಪುಸ್ತಕ ವಿತರಿಸಲು ಮುಂದಾಗಿದೆ. 1 ರಿಂದ 10 ನೇ ತರಗತಿ ವಿದ್ಯರ್ಥಿಗಳಿಗೆ ಪೂರೈಸಬೇಕಿರುವ ಪಠ್ಯಪುಸ್ತಕದಲ್ಲಿ ಶೇ. 60 ಕ್ಕೂ ಹೆಚ್ಚು ಪುಸ್ತಕಗಳು ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ವ್ಯಾಪ್ತಿಯ ಗೋದಾಮುಗಳಲ್ಲಿ ದಾಸ್ತಾನು ಮಾಡಲಾಗಿದೆ.ಮುಂದಿನ ಶೈಕ್ಷಣಿಕ ವರ್ಷದ ಆರಂಭದಲ್ಲಿ ಮಕ್ಕಳಿಗೆ ಮೊದಲ ಜೊತೆ ಸಮವಸ್ತ್ರ ನೀಡಲು ಟೆಂಡರ್ ಕರೆದು ಕಾರ್ಯಾದೇಶ ನೀಡಲಾಗಿದೆ. ಹೀಗಾಗಿ ರಾಜ್ಯದ ಶಾಲಾ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವರ್ಷದ ಆರಂಭದ ದಿನವೇ ಸಮವಸ್ತ್ರ ಸಿಗಲಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

'ದಿ ನೆಕ್ಸ್ಟ್ ಬಿಗ್ ಥಿಂಗ್ ಇನ್ ಇಂಡಿಯನ್ ಸಿನಿಮಾ' ಪಕ್ಕಾ ಪೈಸಾ ವಸೂಲ್.

Sun Mar 5 , 2023
  ಬಹುನಿರೀಕ್ಷಿತ ‘ಕಬ್ಜ’ ಚಿತ್ರದ ಟ್ರೈಲರ್ 5 ಭಾಷೆಗಳಲ್ಲಿ ರಿಲೀಸ್ ಆಗಿ ಸಖತ್ ಸೌಂಡ್ ಮಾಡ್ತಿದೆ. ನಿನ್ನೆ(ಮಾರ್ಚ್ 4) ಸಂಜೆ 5ಗಂಟೆಗೆ ರಿವೀಲ್ ಆಗ್ಬೇಕಿದ್ದ ಟ್ರೈಲರ್ ಕೊಂಚ ತಡವಾಗಿ ರಿಲೀಸ್ ಆಗಿತ್ತು. ಸಂಜೆಯೇ ಹಿಂದಿ ವರ್ಷನ್ ಟ್ರೈಲರ್ ರಿಲೀಸ್ ಆಗಿ ಧೂಳೆಬ್ಬಿಸಿತ್ತು.ಕನ್ನಡ ವರ್ಷನ್ ಝಲಕ್‌ಗಾಗಿ ಸಿನಿರಸಿಕರು ಕಾದು ಕಾದು ಸುಸ್ತಾದರು. ಕೊನೆಗೆ ರಾತ್ರಿ 1 ಗಂಟೆ ವೇಳೆಗೆ ಕನ್ನಡದಲ್ಲಿ ‘ಕಬ್ಜ’ ಕಾರುಬಾರು ಶುರುವಾಯಿತು.ಮೊದಲ ನೋಟದಲ್ಲೇ ‘ಕಬ್ಜ’ ಟ್ರೈಲರ್ ಸಿನಿರಸಿಕರ ಮನಗೆದ್ದಿದೆ. […]

Advertisement

Wordpress Social Share Plugin powered by Ultimatelysocial