“ಉಗ್ರ’ ಅಸ್ತ್ರ ಬಳಕೆ ತೀವ್ರಗೊಳಿಸಿದ ಪಾಕ್‌

2021ಕ್ಕೆ ಹೋಲಿಸಿದರೆ 2022ರಲ್ಲಿ ಉಗ್ರ ಕೃತ್ಯಗಳಿಗೆ ನಾಗರಿಕರು ಬಲಿಯಾದ ಪ್ರಕರಣಗಳು ಶೇ.13.5ರಷ್ಟು ಕಡಿಮೆಯಾಗಿದ್ದರೂ, ಭಾರತದಲ್ಲಿ ಇಸ್ಲಾಮಿಕ್‌ ಉಗ್ರವಾದವು ಹೆಚ್ಚಳವಾಗುತ್ತಿದ್ದು, ಇದನ್ನು ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಉಗ್ರ ಸಂಘಟನೆಗಳು ಪೋಷಿಸುತ್ತಿವೆ ಎಂದು ದತ್ತಾಂಶಗಳು ಹೇಳಿವೆ.ಒಂದು ಕಡೆ ಆರ್ಥಿಕವಾಗಿ ಭಿಕ್ಷೆ ಎತ್ತುವಂಥ ಸ್ಥಿತಿಗೆ ತಲುಪಿರುವ ಪಾಕಿಸ್ತಾನ, ತನಗೆ ನೆರವಾಗುವಂತೆ ಜಗತ್ತಿನ ಇತರೆ ದೇಶಗಳ ಮುಂದೆ ಕೈಚಾಚಿ ನಿಂತಿದೆ. ಎರಡಂಕಿ ಹಣದುಬ್ಬರ, ದುರ್ಬಲ ಕರೆನ್ಸಿಯಿಂದ ನಲುಗಿರುವ ನಡುವೆಯೂ ಪಾಕಿಸ್ತಾನವು ತನ್ನ ಪಾಪಕೃತ್ಯಗಳನ್ನು ಮಾತ್ರ ನಿಲ್ಲಿಸಿಲ್ಲ. ಭಾರತದಲ್ಲಿ ಆಂತರಿಕ ಕ್ಷೋಭೆ ಹುಟ್ಟುಹಾಕಲು ಸರ್ವ ರೀತಿಯಲ್ಲೂ ಪ್ರಯತ್ನ ಮಾಡುತ್ತಲೇ ಇದೆ ಎಂದೂ ವರದಿಗಳು ತಿಳಿಸಿವೆ.ಪಾಕಿಸ್ತಾನವು ಕಾಶ್ಮೀರದಲ್ಲಿ ಎಲ್ಲ ಪಾಕ್‌ ಮೂಲದ ಉಗ್ರ ಸಂಘಟನೆಗಳನ್ನು ಸಕ್ರಿಯಗೊಳಿಸಿದೆ. ಡ್ರೋನ್‌ಗಳ ಮೂಲಕ ಶಸ್ತ್ರಾಸ್ತ್ರಗಳ ಕಳ್ಳಸಾಗಣೆ ಹೆಚ್ಚಿಸಿದೆ, ಭಾರತದಲ್ಲಿ ಉಗ್ರರಿಗೆ ಹಣಕಾಸು ನೆರವು ಒದಗಿಸಲು ಆಫ‌^ನ್‌ ಹೆರಾಯಿನ್‌ ಅನ್ನು ರವಾನಿಸುತ್ತಿದೆ, ಭಾರತ-ನೇಪಾಳ ಗಡಿಯಲ್ಲಿ 5 ಕಿ.ಮೀ. ವ್ಯಾಪ್ತಿಯೊಳಗೆ ಮಸೀದಿಗಳು ಮತ್ತು ಮದರಸಾಗಳ ನಿರ್ಮಾಣಕ್ಕೂ ಹಣಕಾಸು ನೆರವು ಒದಗಿಸುತ್ತಿದೆ ಎಂದು ಮೂಲಗಳು ತಿಳಿಸಿದೆ.2022ರಲ್ಲಿ ಪಾಕ್‌ ಮೂಲದ ಲಷ್ಕರ್‌, ಜೈಶ್‌, ಹಿಜ್ಬುಲ್‌ ಮುಜಾಹಿದೀನ್‌ ಮತ್ತು ಅಲ್‌ ಬದ್ರ್ ಮುಜಾಹಿದೀನ್‌ ಸಂಘಟನೆಗಳು ಕಣಿವೆಯಲ್ಲಿ ಸಕ್ರಿಯವಾಗಿದ್ದವು. ಈಗ ಪಾಕಿಸ್ತಾನವು ಹೊಸ ಉಗ್ರ ಸಂಘಟನೆಗಳಾದ ದಿ ರೆಸಿಸ್ಟೆನ್ಸ್‌ ಫ್ರಂಟ್‌, ಕಾಶ್ಮೀರ್‌ ಫ್ರೀಡಂ ಫೈಟರ್ಸ್‌, ಪೀಪಲ್ಸ್‌ ಆಯಂಟಿ-ಫ್ಯಾಸಿಸ್ಟ್‌ ಫ್ರಂಟ್‌, ಜೆಕೆ ಘಝಾನಿ ಫೋರ್ಸ್‌, ಯುಎಲ್‌ಎಫ್, ಮುಜಾಹಿದೀನ್‌ ಗಜ್ವತುಲ್‌ ಹಿಂದ್‌, ಕಾಶ್ಮೀರ್‌ ಟೈಗರ್ಸ್‌, ಕಾಶ್ಮೀರ್‌ ಜಾನ್‌ಬಾಜ್‌ ಫೋರ್ಸ್‌ಗಳನ್ನು ಛೂಬಿಟ್ಟು ಸ್ಥಳೀಯರನ್ನು ಬೆದರಿಸಲು ಯತ್ನಿಸುತ್ತಿದೆ ಎಂದೂ ವರದಿಗಳು ಹೇಳಿವೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ತಾಯಿ ಪ್ರೀತಿಯೇ ಸುಂದರ.

Wed Jan 11 , 2023
ತಾಯಿ ಮಮತೆಯ ಈ ದೃಶ್ಯ ಈಗ ಎಲ್ಲರ ಹೃದಯ ಗೆದ್ದಿದೆ. ಎಲ್ಲರೂ ಬಲು ಆನಂದದಿಂದಲೇ ಈ ದೃಶ್ಯವನ್ನು ನೋಡುತ್ತಿದ್ದಾರೆ. ಹೀಗಾಗಿ, ಈ ವಿಡಿಯೋ ಈಗ ಸಾಕಷ್ಟು ವೀಕ್ಷಣೆ ಗಳಿಸುವಲ್ಲಿ ಯಶಸ್ವಿಯಾಗಿದೆ. ಈ ವಿಡಿಯೋ ಎಲ್ಲರಲ್ಲೂ ಮಂದಹಾಸ ಮೂಡಿಸಿದೆ.ತಾಯಿ ಪ್ರೀತಿಯೇ ಸುಂದರ. ತಾಯಿ ಮಮತೆಯೇ ಅದ್ಭುತ. ತಾಯಿಯ ಒಂದು ಅಪ್ಪುಗೆಯಲ್ಲಿಯೇ ಎಲ್ಲಾ ನೋವು ಕೂಡಾ ಮರೆತು ಹೋಗುತ್ತದೆ. ತಾಯಿಯ ಮಡಿಲಿಗಿಂತ ಬೇರೆ ಸ್ವರ್ಗವೂ ಇಲ್ಲ. ಬರೀ ಮನುಷ್ಯರೆಂದಲ್ಲ ಎಲ್ಲಾ ಜೀವ ರಾಶಿಯಲ್ಲೂ […]

Advertisement

Wordpress Social Share Plugin powered by Ultimatelysocial