ತಾಯಿ ಪ್ರೀತಿಯೇ ಸುಂದರ.

ತಾಯಿ ಮಮತೆಯ ಈ ದೃಶ್ಯ ಈಗ ಎಲ್ಲರ ಹೃದಯ ಗೆದ್ದಿದೆ. ಎಲ್ಲರೂ ಬಲು ಆನಂದದಿಂದಲೇ ಈ ದೃಶ್ಯವನ್ನು ನೋಡುತ್ತಿದ್ದಾರೆ. ಹೀಗಾಗಿ, ಈ ವಿಡಿಯೋ ಈಗ ಸಾಕಷ್ಟು ವೀಕ್ಷಣೆ ಗಳಿಸುವಲ್ಲಿ ಯಶಸ್ವಿಯಾಗಿದೆ. ಈ ವಿಡಿಯೋ ಎಲ್ಲರಲ್ಲೂ ಮಂದಹಾಸ ಮೂಡಿಸಿದೆ.ತಾಯಿ ಪ್ರೀತಿಯೇ ಸುಂದರ. ತಾಯಿ ಮಮತೆಯೇ ಅದ್ಭುತ. ತಾಯಿಯ ಒಂದು ಅಪ್ಪುಗೆಯಲ್ಲಿಯೇ ಎಲ್ಲಾ ನೋವು ಕೂಡಾ ಮರೆತು ಹೋಗುತ್ತದೆ. ತಾಯಿಯ ಮಡಿಲಿಗಿಂತ ಬೇರೆ ಸ್ವರ್ಗವೂ ಇಲ್ಲ. ಬರೀ ಮನುಷ್ಯರೆಂದಲ್ಲ ಎಲ್ಲಾ ಜೀವ ರಾಶಿಯಲ್ಲೂ ತಾಯಿ ಪ್ರೀತಿ ಒಂದೇ. ಅದಕ್ಕೆ ಬೇಕಾದಷ್ಟು ಸಾಕ್ಷಿಗಳೂ ಇವೆ.

ಮನುಷ್ಯರಂತೆಯೇ ಪ್ರಾಣಿಗಳೂ ತಮ್ಮ ಭಾವನೆಗಳನ್ನು ಹಂಚಿಕೊಳ್ಳುತ್ತವೆ. ಪ್ರಾಣಿ, ಪಕ್ಷಿಗಳ ತಾಯಿ ಮಮತೆಗೆ ಸಾಕ್ಷಿಯಾದ ಸಾಕಷ್ಟು ದೃಶ್ಯಗಳನ್ನು ನೀವು ಕೂಡಾ ಹಲವು ಸಲ ನೋಡಿರಬಹುದು. ಆದರೆ, ಇಂತಹ ದೃಶ್ಯಗಳನ್ನು ಎಷ್ಟು ನೋಡಿದರೂ ಖಂಡಿತಾ ಮನಸ್ಸು ತಣಿಯದು. ಇದು ಕೂಡಾ ಅಂತಹದ್ದೇ ಒಂದು ಸುಂದರ ದೃಶ್ಯ. ಈ ದೃಶ್ಯ ಸಹಜವಾಗಿಯೇ ನಮ್ಮನ್ನು ಭಾವುಕರನ್ನಾಗಿಸುತ್ತದೆ, ಮಂದಹಾಸ ಮೂಡಿಸುತ್ತದೆ. ಈ ದೃಶ್ಯವನ್ನು ಕೆಲವರು ಎರಡೆರಡು ಸಲ ನೋಡಿದರೂ ಅಚ್ಚರಿಯೇನೂ ಇಲ್ಲ. ನೋಡುತ್ತಿದ್ದರೆ ಮತ್ತೆ ಮತ್ತೆ ನೋಡಬೇಕೆನಿಸುವಂತೆ ಮಾಡುವ ಸುಂದರ ದೃಶ್ಯವಿದು.ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಇಂತಹದ್ದೊಂದು ಸುಂದರ ವಿಡಿಯೋ ಹಂಚಿಕೊಂಡಿದ್ದಾರೆ. ಇದು ತಾಯಿ ಕಾಂಗರೂ ತನ್ನ ಮರಿಯನ್ನು ಪ್ರೀತಿಯಿಂದ ಅಪ್ಪಿ ಮುದ್ದಿಸುವ ದೃಶ್ಯ. ಕಂದನನ್ನು ಬರಸೆಳೆದು ಈ ತಾಯಿ ಅಪ್ಪಿಕೊಳ್ಳುವ ದೃಶ್ಯವನ್ನು ನೋಡುತ್ತಿದ್ದರೆ ಕಣ್ಣುಗಳು ಖುಷಿಯಿಂದ ಅರಳುತ್ತವೆ. ಆನಂದಭಾಷ್ಪ ಕಣ್ಣಾಲಿಗಳನ್ನು ತುಂಬುತ್ತದೆ. ತಾಯಿ ಮಮತೆಗೆ ಸಾಕ್ಷಿ ಈ ಸುಂದರ ದೃಶ್ಯ… ಈ ಅಪೂರ್ವ ಕ್ಷಣವನ್ನು ಬರೀ ಪದಗಳಲ್ಲಿ ವಿವರಿಸಲು ಸಾಧ್ಯವೇ ಇಲ್ಲ. ಶೆಲ್ಲಿ ಪಿಯರ್ಸನ್ ಎಂಬ ಛಾಯಾಗ್ರಾಹಕರು ಸೆರೆಹಿಡಿದ ಸುಂದರ ದೃಶ್ಯವಿದು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪೇಸ್ಬಕ್ ಸುಂದರಿ ಹಿಂದೆ ಬಿದ್ದ ಗಂಡ

Wed Jan 11 , 2023
ಪೇಸ್ಬಕ್ ಸುಂದರಿ ಹಿಂದೆ ಬಿದ್ದ ಗಂಡ ಮನನೊಂದು ಪತ್ನಿ ಆತ್ಮಹತ್ಯೆಗೆ ಯತ್ನ ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲ್ಲೂಕು ಸೋಮಯಾಜಲಹಳ್ಳಿ ಗ್ರಾಮದಲ್ಲಿ ಘಟನೆ ಆಶಾರಾಣಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ ಗಂಡ ಶಶಿಕುಮಾರ್ ಕಳೆದ‌ ನಾಲ್ಕೈದು ತಿಂಗಳಿಂದ ಪೇಸ್ಬುಕ್ ನಲ್ಲಿ ಪರಿಚಯವಾದ ಹುಡಗಿಯ ಹಿಂದೆ ಬಿದ್ದಿದ್ದ ಹುಡುಗಿಯ ಜೊತೆಗಿದ್ದ ಪೋಟೋ ಹಾಕಿ ಚಿತ್ರಹಿಂಸೆ ನೀಡುತ್ತಿದ್ದ ಹಿನ್ನಲೆ ಮನನೊಂದ ಮಹಿಳೆ ವಿಷಸೇವಿಸಿ ಆತ್ಮಹತ್ಯೆಗೆ ಯತ್ನ ಮಹಿಳೆ ಶ್ರೀನಿವಾಸಪುರ ಸರ್ಕಾರಿ ಆಸ್ಪತ್ರೆಗೆ ದಾಖಲು ಶ್ರೀನಿವಾಸಪುರ ಪೊಲೀಸ್ […]

Advertisement

Wordpress Social Share Plugin powered by Ultimatelysocial