ಚಾಲಕನ ಮೇಲೆ ದಾಳಿಯಾದಾಗ ನಿಯಂತ್ರಣ ತಪ್ಪಿ ಕಾರು ರೈತರ ಮೇಲೆ ಹರಿದಿದೆ ಎಂದ ಮಿಶ್ರಾ

ಚಾಲಕನ ಮೇಲೆ ದಾಳಿಯಾದಾಗ ನಿಯಂತ್ರಣ ತಪ್ಪಿದ ಕಾರು ಸ್ಥಳದಲ್ಲಿದ್ದ ರೈತರ ಮೇಲೆ ಹರಿದಿದೆ ಎಂದು ಕೇಂದ್ರ ಸಚಿವ ಅಜಯ್ ಮಿಶ್ರಾ ಸಮರ್ಥನೆ ಮಾಡಿಕೊಂಡಿದ್ದಾರೆ. ಲಖೀಂಪುರ ಖೇರಿ ಪ್ರಕರಣ ಸಂಬಂಧ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ಅವರು, ಮಗ ಆಶಿಶ್ ಮಿಶ್ರಾ ಪರ ಹೇಳಿಕೆಯನ್ನು ನೀಡಿದ್ದಾರೆ. ಘಟನೆ ನಡೆದ ಸಂದರ್ಭದಲ್ಲಿ ನನ್ನ ಮಗ ಅಲ್ಲಿ ಇರಲಿಲ್ಲ ಎಂದು ಮತ್ತೆ ಪುನರುಚ್ಛರಿಸಿರುವ ಅಜಯ್ ಮಿಶ್ರಾ, ಕಾರು ಕಂಟ್ರೋಲ್ ತಪ್ಪಿದ್ದರಿಂದ ಅವಘಢ ಸಂಭವಿಸಿದೆ ಎಂದು ಹೇಳಿದ್ದಾರೆ.  

ಪ್ರಕರಣ ಸಂಬಂಧ ಹಿಂದೆ ಮಾತನಾಡಿದ್ದ ಅಜಯ್ ಮಿಶ್ರಾ, ಘಟನೆ ನಡೆದ ವೇಳೆ ನನ್ನ ಮಗ ಕಾರಿನಲ್ಲಿ ಇರಲಿಲ್ಲ. ಒಂದು ವೇಳೆ ಆತ ಸ್ಥಳದಲ್ಲಿ ಇದ್ದಿದ್ದು ನಿಜವಾಗಿದ್ದರೆ ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ್ದರು. ಇದೀಗ ಮತ್ತೆ ಹೇಳಿಕೆ ನೀಡುವ ಮೂಲಕ ಮಗನನ್ನು ಅಪ್ಪ ಸಮರ್ಥಿಸಿಕೊಂಡಿದ್ದಾರೆ

ಆಶಿಸ್‌ ಮಿಶ್ರಾ ಪರ ತಂದೆ ಮತ್ತೆ ಬ್ಯಾಟಿಂಗ್‌…!

ದುರ್ಘನೆ ನಡೆದ ಸಂದರ್ಭದಲ್ಲಿ ನನ್ನ ಮಗ ಕಾರಿನಲ್ಲಿ ಇರಲಿಲ್ಲ. ಪ್ರತಿಭಟನೆ ನಡೆಸುತ್ತಿದ್ದ ರೈತರು ಕಾರಿನ ಮೇಲೆ ದಾಳಿ ನಡೆಸಿದ್ದಾರೆ. ವೇಳೆ ಚಾಲಕನಿಗೂ ಗಾಯಗಳಾಗಿತ್ತು. ಗಾಯಗೊಂಡಿದ್ದರಿಂದ ಚಾಲಕ ಕಾರಿನ ನಿಯಂತ್ರಣ ಕಳೆದುಕೊಂಡಿದ್ದಾನೆ. ಪರಿಣಾಮ ಸ್ಥಳದಲ್ಲಿದ್ದ ರೈತರ ಮೇಲೆ ಕಾರು ಹರಿದಿದೆ. ಅವಘಡದಲ್ಲಿ ಜೀವ ಕಳೆದುಕೊಂಡು ರೈತರ ಬಗ್ಗೆ ನನಗೂ ಮರುಕವಿದೆ. ಬಗ್ಗೆ ಸೂಕ್ತ ತನಿಖೆ ನಡೆಸಲು ನಾನು ಒತ್ತಾಯಿಸುತ್ತೇನೆ ಎಂದು ಅಜಯ್ ಮಿಶ್ರಾ ಹೇಳಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ರೈತರ ಮೇಲೆ ಇಷ್ಟೊಂದು ದ್ವೇಷ ಯಾಕೆ..? ಪ್ರಧಾನಿಗೆ ಅರವಿಂದ ಕೇಜ್ರಿವಾಲ್ ಪ್ರಶ್ನೆ.!

Wed Oct 6 , 2021
ರೈತರ ಮೇಲೆ ನಿಮಗೆ ಅಷ್ಟೊಂದು ದ್ವೇಷವೇಕೆ ಎಂದು ಪ್ರಧಾನಿ ನರೇಂದ್ರ ಮೋದಿಯವರನ್ನು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಪ್ರಶ್ನಿಸಿದ್ದಾರೆ. ಉತ್ತರ ಪ್ರದೇಶದ ಲಖಿಂಪುರ–ಖೇರಿ ಘಟನೆ ಉಲ್ಲೇಖಿಸಿ ಅವರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರೋಪಿಗಳನ್ನು ಬಂಧಿಸಬೇಕು. ಕೇಂದ್ರ ಗೃಹ ಇಲಾಖೆಯ ರಾಜ್ಯ ಖಾತೆ ಸಚಿವ ಅಜಯ್ ಮಿಶ್ರಾ ಮಗ ಆರೋಪಿಯಾಗಿರುವುದರಿಂದ ಸಚಿವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ವರ್ಚುವಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಜ್ರಿವಾಲ್, ರೈತರ ಕೊಲೆ ಮಾಡಿದವರನ್ನು […]

Advertisement

Wordpress Social Share Plugin powered by Ultimatelysocial