ಸಾಯಿ ಪಲ್ಲವಿ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಇರೋವಾಗ್ಲೆ ಹಸೆಮಣೆ ಏರೋಕೆ ಸಜ್ಜಾಗಿದ್ದಾರೆ.

ಸೌತ್ ಚಿತ್ರರಂಗದ ಟಾಪ್ ನಟಿಯರಲ್ಲಿ ಸಾಯಿ ಪಲ್ಲವಿ ಕೂಡ ಒಬ್ಬರು. ಬ್ಯೂಟಿ ಜತೆ ಟ್ಯಾಲೆಂಟ್‌ಯಿರೋ ನಟಿ ಸಾಯಿ ಪಲ್ಲವಿ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಇರೋವಾಗ್ಲೆ ಹಸೆಮಣೆ ಏರೋಕೆ ಸಜ್ಜಾಗಿದ್ದಾರೆ. ದಕ್ಷಿಣ ಭಾರತದ ಚಿತ್ರರಂಗದಲ್ಲಿ ಸಾಕಷ್ಟು ಸಿನಿಮಾಗಳ ಮೂಲಕ ಛಾಪೂ ಮೂಡಿಸಿರೋ ಪ್ರತಿಭಾವಂತ ನಟಿ ಸಾಯಿ ಪಲ್ಲವಿ ಇದೀಗ ಚಿತ್ರರಂಗದಲ್ಲಿ ಅಷ್ಟೋಂದು ಆಕ್ಟೀವ್ ಆಗಿಲ್ಲ.

ಯಾಕೆ ಎಂಬ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ.

`ಶ್ಯಾಮ್ ಸಿಂಗ್ ರಾಯ್’ ಚಿತ್ರದ ನಂತರ ಸಾಕಷ್ಟು ಚಿತ್ರದ ಆಫರ್‌ಗಳು ಈ ನಟಿಯನ್ನ ಅರಸಿ ಬಂದರೂ ಅವೆಲ್ಲಾ ಚಿತ್ರಗಳಿಗೂ ಸಾಯಿ ಪಲ್ಲವಿ ಯಾಕೆ ನೋ ಅಂತಿದ್ರು ಅಂತಾ ಇದೀಗ ತಿಳಿದು ಬಂದಿದೆ. ಸಾಯಿ ಪಲ್ಲವಿ ಮನೆಯಲ್ಲಿ ಮದುವೆ ತಯಾರಿ ನಡೆಯುತ್ತಿದೆಯಂತೆ. ನಟಿ ಸಾಯಿ ಪಲ್ಲವಿ ಬಾಳಲ್ಲಿ ಹೊಸ ಅಧ್ಯಾಯ ಶುರುವಾಗಿದೆ. ಈ ನಟಿ ಮದುವೆಯತ್ತ ಮನಸ್ಸು ಮಾಡಿದ್ದಾರಂತೆ ಹಾಗಂತ ಟಿಟೌನ್ ಗಲ್ಲಿ ಗಲ್ಲಿಯಲ್ಲೂ ಈ ಸುದ್ದಿ ಸೌಂಡ್ ಮಾಡ್ತಿದೆ. ನಟಿಯ ಮನೆಯಲ್ಲಿ ಗಂಡು ಹುಡುಕುತ್ತಿದ್ದಾರೆ ಹಾಗಾಗಿ ಯಾವ ಚಿತ್ರಕ್ಕೂ ನಟಿ ಗ್ರೀನ್ ಸಿಗ್ನಲ್ ಕೊಡುತ್ತಿಲ್ಲ.

ಹಾಗಂತ ಸಾಯಿ ಪಲ್ಲವಿ ಲವ್ ಮ್ಯಾರೇಜ್ ಆಗ್ತಿಲ್ಲ, ಗುರು ಹಿರಿಯರು ನಿಶ್ಚಯಿಸಿದ ವರನನ್ನೇ ಮದುವೆಯಾಗುತ್ತಿದ್ದಾರೆ. ಪಕ್ಕಾ ಆರೇಂಜ್ ಮ್ಯಾರೇಜ್ ಆಗಲು ಸಾಯಿ ಪಲ್ಲವಿ ಫಿಕ್ಸ್ ಆಗಿದ್ದಾರೆ. ಕಡೆಯದಾಗಿ `ಲವ್‌ಸ್ಟೋರಿ’ ಮತ್ತು `ಶ್ಯಾಮ್ ಸಿಂಗ್ ರಾಯ್’ ಚಿತ್ರದ ಮೂಲಕ ಕಮಾಲ್ ಮಾಡಿದ್ರು. ನಟಿಯ ಪಾತ್ರ ಮತ್ತು ಚಿತ್ರ ಎರಡನ್ನು ನೋಡಿ ಪ್ರೇಕ್ಷಕರು ಫಿದಾ ಆಗಿದ್ದರು. ಆದರೆ ಈಗ ಸಾಯಿ ಪಲ್ಲವಿ ನಡೆಗೆ ಅಭಿಮಾನಿಗಳು ಬೇಸರ ಮಾಡಿಕೊಂಡಿದ್ದಾರೆ. ಚಿತ್ರರಂಗದಲ್ಲಿ ಬಹುಬೇಡಿಕೆಯಿರೋವಾಗಲೇ ಮದುವೆಗೆ ಸಿದ್ಧವಾಗಿರೋ ನೆಚ್ಚಿನ ನಟಿ ಮತ್ತೆಂದೂ ನಟಿಸಲ್ವಾ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಕಾಡುತ್ತಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ 'ಕೆಜಿಎಫ್ 2' ವಿಶ್ವದ ಉದ್ದಗಲಕ್ಕೂ ಸದ್ದು ಮಾಡುತ್ತಿದೆ.

Thu May 5 , 2022
ಪ್ರತಿ ದಿನವೂ ಒಂದೊಂದೇ ದಾಖಲೆಗಳನ್ನು ಮುರಿಯುತ್ತಲೇ ಇದೆ. ಗ್ಲೋಬಲ್ ಬಾಕ್ಸಾಫೀಸ್‌ನಲ್ಲಿ ‘ಕೆಜಿಎಫ್ 2’ ಸಿನಿಮಾ ಸಾವಿರ ಕೋಟಿಯ ಗಡಿ ದಾಟಿದೆ. ಇದು ಕನ್ನಡ ಮಟ್ಟಿಗೆ ಹೊಸ ಮೈಲಿಗಲ್ಲು. ಇಂತಹದ್ದೊಂದು ಸಾಧನೆಯನ್ನು ಕನ್ನಡ ಯಾವುದೇ ಸಿನಿಮಾ ಇದೂವರೆಗೂ ಮಾಡಿರಲಿಲ್ಲ. ‘ಕೆಜಿಎಫ್ 2’ ಭರ್ಜರಿ ಯಶಸ್ಸಿನ ಅಲೆಯಲ್ಲಿ ತೇಲುತ್ತಿದೆ. ಮೂರು ವಾರದ ಬಳಿಕವೂ ವಿಶ್ವದೆಲ್ಲೆಡೆ ಸಿನಿಮಾದ ನಾಗಾಲೋಟ ಮುಂದುವರೆದಿದೆ. ಇದೇ ಖುಷಿಯಲ್ಲಿ ಗೆಲುವಿಗೆ ಕಾರಣರಾದವರನ್ನು ನಿರ್ಮಾಣ ಸಂಸ್ಥೆ ಮರೆತಿಲ್ಲ. ತನ್ನ ಗೆಲುವಿಗೆ ಕಾರಣಕರ್ತರಾದವರನ್ನು […]

Advertisement

Wordpress Social Share Plugin powered by Ultimatelysocial