ಸೈಯದ್ ಕಿರ್ಮಾನಿ ಕರ್ನಾಟಕ ತಂಡ ಮತ್ತು ಭಾರತೀಯ ಕ್ರಿಕೆಟ್ ತಂಡದ ಅತ್ಯುತ್ತಮ ವಿಕೆಟ್ ಕೀಪರ್

ಕಿರ್ಮಾನಿ 1949ರ ಡಿಸೆಂಬರ್ 29ರಂದು ಜನಿಸಿದರು. ಪ್ರಾರಂಭಿಕ ಹಲವು ವರ್ಷಗಳಲ್ಲಿ ಅವರ ಸಾಧನೆ ಕಡಿಮೆ ಇದ್ದಿದ್ದರಿಂದ ತಂಡದಿಂದ ಹೊರಗೆ ಉಳಿದರಾದರೂ ಮುಂದೆ ಬಂದ ವರ್ಷಗಳಲ್ಲಿ ವಿಕೆಟ್ ಕೀಪಿಂಗ್ ಮತ್ತು ಕೆಳ ಹಂತದ ಬ್ಯಾಟಿಂಗ್ ಸ್ಥಾನದಲ್ಲಿ ನೀಡಿದ ಅಪೂರ್ವ ಕೊಡುಗೆಗಳು ಅವರಿಗೆ ಅಪಾರ ಕೀರ್ತಿ ತಂದವು.
ಕಿರ್ಮಾನಿ ಅವರ ಸಾಧನೆಗಳಲ್ಲಿ ಪ್ರಮುಖವೆಂದರೆ, ಒಂದು ಇನ್ನಿಂಗ್ಸ್ ನಲ್ಲಿ ಆರು ಜನ ಔಟ್ ಆಗಲು ಕಾರಣವಾಗಿ ವಿಶ್ವ ದಾಖಲೆ ಸಮಗಟ್ಟಿದ್ದು; ಕಪಿಲ್ ದೇವ್ ಅವರ ಪ್ರಸಿದ್ಧ ಜಿಂಬಾವ್ವೆ ವಿರುದ್ದದ ವಿಶ್ವಕಪ್ ಪಂದ್ಯದ ಆಟದಲ್ಲಿ ಅವರೊಂದಿಗೆ 126 ರನ್ನುಗಳ ಅಭೇದ್ಯ ಸಹಯೋಗದಲ್ಲಿ ಪಾಲ್ಗೊಂಡಿದ್ದು; 1983ರ ವಿಶ್ವ ಕಪ್ ಸ್ಪರ್ಧೆಗಳಲ್ಲಿ ಅತ್ಯುತ್ತಮ ವಿಕೆಟ್ ಕೀಪರ್ ಪ್ರಶಸ್ತಿಗೆ ಪಾತ್ರರಾಗಿದ್ದು; ಟೆಸ್ಟ್ ಪಂದ್ಯವೊಂದರಲ್ಲಿ ಒಂಬತ್ತನೇ ವಿಕಟ್ ಜೊತೆ ಆಟದಲ್ಲಿ ಸುನಿಲ್ ಗಾವಸ್ಕರ್ ಅವರ ಜೊತೆ 143ರನ್ನುಗಳ ಸಹಯೋಗದಲ್ಲಿ ಪಾಲ್ಗೊಂಡಿದ್ದು; ರವಿ ಶಾಸ್ತ್ರಿ ಅವರೊಂದಿಗೆ ಏಳನೆ ವಿಕೆಟ್ಟಿಗೆ ವಿಶ್ವದಾಖಲೆಯಾದ 235 ರನ್ನುಗಳ ಸಹಯೋಗದಲ್ಲಿ ಬಾಗಿಯಾದದ್ದು; 1981-82 ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ, ಇಂಗ್ಲೆಂಡ್ ತಂಡ ಮೂರು ಟೆಸ್ಟ್ಗಳಲ್ಲಿ ಗಳಿಸಿದ 1964 ರನ್ನುಗಳಲ್ಲಿ ಒಂದೇ ಒಂದು ಬೈ ಕೂಡ ನೀಡದೆ ಇದ್ದದ್ದು ಇತ್ಯಾದಿ ಹೆಸರಿಸಬಹುದು.
ಕಿರ್ಮಾನಿ ವಿಕೆಟ್ ರಕ್ಷಕರಾಗಿ ಹಿಡಿದ ಹಲವು ಅದ್ಭುತ ಕ್ಯಾಚುಗಳು ಬಹಳಷ್ಟು ಮಹತ್ವದ ಪಂದ್ಯಗಳನ್ನು ಭಾರತದ ಪರವಾಗಿಸಿದ್ದವು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ಸಿ. ಅಶ್ವಥ್ ಸಂಗೀತಗಾರರು

Thu Dec 29 , 2022
ರಿಚರ್ಡ್ ಅಟೆನ್ ಬರೋ ನಿರ್ದೇಶಿಸಿದ ಪ್ರಸಿದ್ಧ ‘ಗಾಂಧೀ’ ಚಿತ್ರದಲ್ಲಿ, ಚಿತ್ರ ಪ್ರಾರಂಭವಾಗುವುದು ಗಾಂಧೀಜಿ ನಮ್ಮ ಕಣ್ಣ ಮುಂದೆ ಮೂಡುತ್ತಿದ್ದಾರೆ ಎಂದು ನಾವು ನೋಡುತ್ತಿರುವಂತೆಯೇ ಅವರ ಅಂತ್ಯದಿಂದ! ಆ ಚಿತ್ರ ನೋಡಿ ಬಂದ ಮೇಲೆ ನಮ್ಮಣ್ಣ ಹೇಳುತ್ತಿದ್ದರು. “ಇದೊಂದು ಅದ್ಭುತ ವಿಶ್ಲೇಷಣೆ. ಗಾಂಧೀ ಎಂಬ ವ್ಯಕ್ತಿಯಿಂದ ಪ್ರಾರಂಭವಾದ ಯುಗ ಆ ಮಹಾನ್ ವ್ಯಕ್ತಿಯೊಂದಿಗೆ ಮುಗಿದುಹೋಯಿತು” ಎಂದು. ನಮ್ಮ ಸಿ. ಅಶ್ವಥ್ ಅವರು, 2009ರಲ್ಲಿ ಅವರ ಹುಟ್ಟಿದ ಹಬ್ಬದ ದಿನವೇ ನಿಧನರಾದಾಗ ಇನ್ನಿಲ್ಲದಂತೆ […]

Advertisement

Wordpress Social Share Plugin powered by Ultimatelysocial