ಸಕತ್ ಟ್ರೆಂಡ್‌ ಆಗುತ್ತಿದೆ ಬ್ಲ್ಯಾಕ್‌ ವಾಟರ್? ಏನಿದರ ಪ್ರಯೋಜನ?

ಸಕತ್  ಟ್ರೆಂಡ್‌ ಆಗುತ್ತಿದೆ ಬ್ಲ್ಯಾಕ್‌ ವಾಟರ್? ಏನಿದರ ಪ್ರಯೋಜನ?

ನೀರಿನ ಬಾಟಲಿಯಲ್ಲಿ ದೊರೆಯುವ ನೀರು ಲೀಟರ್‌ಗೆ 20 ರುಪಾಯಿಯಿಂದ ಹಿಡಿದು ಸಾವಿರ ರುಪಾಯಿ ಬೆಲೆ ಬಾಳುವ ನೀರು ಕೂಡ ಮಾರ್ಕೆಟ್ಟಿನಲ್ಲಿದೆ. ದುಡ್ಡಿರುವವರು, ಸೆಲೆಬ್ರಿಟಿಗಳು ಒಂದು ಲೀಟರ್‌ ನೀರಿಗೆ ಸಾವಿರಾರು ರುಪಾಯಿ ಕೊಟ್ಟು ಕುಡಿಯುತ್ತಾರೆ. ಈ ನೀರಿನಲ್ಲಿ ಖನಿಜಾಂಶಗಳಿರುತ್ತದೆ, ಅಲ್ಲದೆ ಅತಿ ಶುದ್ಧವಾಗಿರುತ್ತದೆ, ಶುದ್ಧವಾದ ನೀರಿನ ಬಣ್ಣ ಯಾವು ಎಂದು ಕೇಳಿದರೆ ಹೇಳಲು ಕಷ್ಟವಾಗುವುದು?

ಏಕೆಂದರೆ ನೀರಿಗೆ ಬಣ್ಣವಿರಲ್ಲ. ಶುದ್ಧವಾದ ನೀರು ನೋಡಿದಾಗ ಗೊತ್ತಾಗುತ್ತೆ, ರುಚಿಯಲ್ಲಿ ಗೊತ್ತಾಗುತ್ತೆ.

ಇತ್ತೀಚಿನ ದಿನಗಳಲ್ಲಿ ಹೊಸ ಬಗೆಯ ನೀರೊಂದು ಸಕತ್‌ ಟ್ರೆಂಡ್‌ ಆಗಿದೆ. ಸೆಲೆಬ್ರಿಟಿಗಳು ಎಲ್ಲೇ ಹೋಗುವುದಾದರೂ ಈ ನೀರಿನ ಬಾಟಲಿ ಅವರ ಕೈಯಲ್ಲಿರುತ್ತೆ, ಯಾವುದು ಆ ನೀರು ಎಂದು ನೋಡುವುದಾದರೆ ಅದುವೇ ಕಪ್ಪು ನೀರು, ಅದನ್ನು ಬ್ಲ್ಯಾಕ್‌ ಅಕ್ಲೈನ್‌ ವಾಟರ್ ಎಮದು ಕರೆಯುತ್ತಾರೆ, ಏನಿದು ಕಪ್ಪು ನೀರು, ಇದರ ವಿಶೇಷತೆಗಳೇನು ಎಂದು ನೋಡೋಣ ಬನ್ನಿ:

ಏನಿದು ಕಪ್ಪು ನೀರು?ಇದು ಅಕ್ಲೈನ್‌ ನೀರಾಗಿದ್ದು ಇದರಲ್ಲಿರುವ ಫುಲ್ವಿಕ್‌ ಆಮ್ಲದಿಂದಾಗಿ ಕಪ್ಪು ಬಣ್ಣದಲ್ಲಿರುತ್ತದೆ. ಇದರ pH ಪ್ರಮಾಣದಿಂದಾಗಿ ಇದನ್ನು ಕುಡಿಯಲು ಯೋಗ್ಯವಾಗಿದೆ ಎಂದು ಪರಿಗಣಿಸಲಾಗಿದೆ. pH ಪ್ರಮಾಣದ ಆಧಾರದ ಮೇಲೆ ಇದರಲ್ಲಿರುವ ಆಮ್ಲದ ಅಂಶವನ್ನು ಅಳಿಯಲಾಗುವುದು. pHಯನ್ನು 0-14ರವರೆಗೆ ಅಳತೆ ಮಾಡಲಾಗುವುದು. 1 pH ಹೊಂದಿರುವ ನೀರು ಕುಡಿಯಲು ಅಷ್ಟೊಂದು ಗುಣಮಟ್ಟವಾದ ಖನಿಜಾಂಶ, ಅದೇ pH 13 ಹೊಂದಿರುವ ನೀರಿನಲ್ಲಿ ಆಮ್ಲ ಕಡಿಮೆ ಇರುವುದರಿಂದ ಅಕ್ಲೈನ್‌ ನೀರು ಅಂದರೆ ಖನಿಜಾಂಶಗಳನ್ನು ಹೊಂದಿರುವ ನೀರೆಂದು ಪರಿಗಣಿಸಲಾಗಿದೆ.

ಕಪ್ಪು ನೀರು ಟ್ರೆಂಡ್‌ ಆಗಿರುವುದು ಏಕೆ?

ಸೆಲೆಬ್ರಿಟಿಗಳಾದ ಮಲೈಕಾ ಅರೋರಾ, ವಿರಾಟ್‌ ಕೊಹ್ಲಿ ಹೀಗೆ ಅನೇಕರು ಈ ಕಪ್ಪು ನೀರಿನ ಬಾಟಲಿ ಹಿಡಿದಿರುವ ಫೋಟೋಗಳನ್ನು ನೋಡಬಹುದು. ಕಪ್ಪು ನೀರಿನಲ್ಲಿ pH ಪ್ರಮಾಣ ಅಧಿಕವಿರುವುದರಿಂದ ಇದು ಕ್ಯಾನ್ಸರ್‌ನಂಥ ಮಾರಕ ರೋಗಗಳನ್ನು ತಡೆಗಟ್ಟುವುದು ಎಂಬ ನಂಬಿಕೆ ಇದೆ. ಆದರೆ ಇದರ ಬಗ್ಗೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ.

ಕಪ್ಪು ನೀರಿನಿಂದ ಅಡ್ಡಪರಿಣಾಮಗಳಿವೆಯೇ?

ಇದು ಕುಡಿಯಲು ಯೋಗ್ಯವಾದ ನೀರೇ ಆದರೂ ಇದು ಕೆಲವೊಂದು ಅಡ್ಡಪರಿಣಾಮಗಳನ್ನು ಬೀರಬಹುದು, ಇದು ಹೊಟ್ಟೆಯಲ್ಲಿ ನೈಸರ್ಗಿಕವಾಗಿರುವ ಅಸಿಡಿಕ್‌ ಪ್ರಮಾಣವನ್ನು ಕಡಿಮೆ ಮಾಡಬಹುದು. ಇದನ್ನು ಹೆಚ್ಚು ಕುಡಿದರೆ ಗ್ಯಾಸ್ಟ್ರಿಕ್, ತ್ವಚೆ ಸಮಸ್ಯೆ, ವಾಂತಿ, ಬೇಂಧಿ, ಮಸಲ್ ಕ್ಯಾಚ್‌ ಮುಂತಾದ ಸಮಸ್ಯೆಗಳು ಕಂಡು ಬರಬಹುದು ಎಂದು ನ್ಯೂಟ್ರಿಷಿಯನಿಸ್ಟ್‌ ಹಾಗೂ ಸರ್ಟಿಫೈಡ್ ಡಯಾಬಿಟಿಸ್ ಎಜುಕೇಟರ್ ಆಗಿರುವ ಪಾರೂಲ್ ಮಲ್ಹೋತ್ರ ಬಲ್ಹ್.

ಕಪ್ಪು ನೀರಿನ ಬಗ್ಗೆ ತಜ್ಞರ ಸಲಹೆಯೇನು?

ಸಹಜ ನೀರಿನ ಬಲಿಗೆ ಇದನ್ನೇ ಕುಡಿಯುವುದು ಒಳ್ಳೆಯ ಆಯ್ಕೆ ಅಲ್ಲ, ನೀವು ಅಕ್ಲೈನ್‌ ನೀರು ಕುಡಿಯಬೇಕೆಂದು ಬಯಸುವುದಾದರೆ ಅದು ನೈಸರ್ಗಿಕವಾಗಿ ಕಲ್ಲುಗಳ ಮೂಲಕ ಹರಿದು ಬಂಧಂಥ ನೀರು ಆಗಿರಬೇಕು, ಹೀಗೆ ಹರಿದು ಬರುವಾಗ ಅದು ಖನಿಜಾಂಶಗಳನ್ನು ಹೊತ್ತು ಬರುವುದು. ಕಪ್ಪು ನೀರಿನಲ್ಲಿ ಕೃತಕವಾಗಿ ಖನಿಜಾಂಶಗಳನ್ನು ಸೇರಿಸಲಾಗಿದೆ. ಆದ್ದರಿಂದ ಇದು ಕೃತಕವಾದ ನೀರಾಗಿದೆ.

ಆದ್ದರಿಂದ ಈ ನೀರಿನ ಬದಲಿಗೆ ನೀವು ನೈಸರ್ಗಿಕವಾಗಿ ಸಿಗುವ ಶುದ್ಧ ನೀರನ್ನೇ ಬಳಸಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

2008 ರ ನಂತರ ಜನಿಸಿದವರಿಗೆ ಈ ದೇಶದಲ್ಲಿ ಸಿಗೋಲ್ಲ ಸಿಗರೇಟ್.!

Wed Dec 22 , 2021
2008ನೇ ಇಸವಿ ನಂತರ ಜನಿಸಿದವರು ಇನ್ಮುಂದೆ ನ್ಯೂಜಿಲೆಂಡ್‌ನಲ್ಲಿ ಸಿಗರೇಟ್ ಖರೀದಿಸಲು ಸಾಧ್ಯವಾಗುವುದಿಲ್ಲ. ಯುವಕರು ಧೂಮಪಾನ ಸೇವನೆ ಮಾಡುವುದು ಉತ್ತಮವಲ್ಲ. ಹೀಗಾಗಿ ಯುವಕರಿಗೆ ಹೊಗೆಯುಗುಳುವ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವುದು ಅಥವಾ ಪೂರೈಸುವುದು ಅಪರಾಧವಾಗುತ್ತದೆ ಎಂದು ನ್ಯೂಜಿಲ್ಯಾಂಡ್ ನ ಆರೋಗ್ಯ ಸಹಾಯಕ ಸಚಿವ ಆಯೆಶಾ ವೆರಾಲ್ ತಿಳಿಸಿದ್ದಾರೆ. ಪ್ರಸ್ತುತ ನ್ಯೂಜಿಲೆಂಡ್‌ ಸರ್ಕಾರದ ಅಂಕಿಅಂಶಗಳ ಪ್ರಕಾರ, 15 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಶೇ. 11.6 ರಷ್ಟು ಜನರು ಧೂಮಪಾನ ಮಾಡುತ್ತಾರೆ, ಇದು ವಯಸ್ಕರಲ್ಲಿ ಶೇ. […]

Advertisement

Wordpress Social Share Plugin powered by Ultimatelysocial