‘ಸಿಟಾಡೆಲ್’ನ BTS ಫೋಟೋಗಳನ್ನು ಹಂಚಿಕೊಂಡ ಸಮಂತಾ.

ತೆಲುಗು ಸ್ಟಾರ್​ ಹಿರೋಯಿನ್​ ಸಮಂತಾ ಪ್ರಭು ತೆಲುಗು, ತಮಿಳು ಸೇರಿದಂತೆ ಬಾಲಿವುಡ್​ನಲ್ಲೂ ಅಭಿನಯಿಸಿದ್ದಾರೆ. ಸಮಂತಾ ಅವರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಆದ್ರೆ ಈಗ ಗುಣಮುಖರಾಗಿರುವ ಅವರು ಮತ್ತೆ ಶೂಟಿಂಗ್​ನಲ್ಲಿ ಬ್ಯುಸಿಯಾಗಲಿದ್ದಾರೆ. ಈ ಸಂಬಂಧ ಹಿಂದಿಯ ಸಿಟಾಡೆಲ್ ಸೀರಿಸ್​ನ ಶೂಟಿಂಗ್​​ಗೆ ಬಂದಿದ್ದಾರೆ.

ಈಗಾಗಲೇ ಸಿಟಾಡೆಲ್ ಸೀರಿಸ್​ನ ಫಸ್ಟ್​ಲುಕ್​ ರಿಲೀಸ್ ಮಾಡಿದ್ದು ಮಾಸ್​ ಲುಕ್​ನಲ್ಲಿ ಸಮಂತಾ ಮಸ್ತ್​ ಆಗಿ ಕಾಣಿಸಿದ್ದಾರೆ. ಅನಾರೋಗ್ಯದಿಂದ ಚೇತರಿಕೆ ಕಂಡಿರುವ ಸಮಂತಾ ತಮ್ಮ ಇನ್​ಸ್ಟಾ ಅಕೌಂಟ್​ನಲ್ಲಿ ಸಿಟಾಡೆಲ್ ಸೀರಿಸ್ ತಂಡದ ಜೊತೆಗೆ ಚರ್ಚೆ ಮಾಡಿರುವ ಫೋಟೋಗಳನ್ನ ಶೇರ್​ ಮಾಡಿದ್ದಾರೆ. ನಟ ವರುಣ್​ ಧವನ್, ಸೀತಾ ಆರ್.ಮೆನಾನ್ ಹಾಗೂ ನಿರ್ದೇಶಕರಾದ ರಾಜ್​ ನಿಡಿಮೋರ್​, ಡಿ.ಕೆ.ಕೃಷ್ಣ ಜೊತೆಗೆ ಕೆಲ ಕಾಲ ಈ ಸೀರಿಸ್​​ ಬಗ್ಗೆ ಮತ್ತೆ ಶೂಟಿಂಗ್ ಆರಂಭಿಸಲು ಮಾತುಕತೆ ನಡೆಸಿದೆ ಎಂದು ಹೇಳಲಾಗ್ತಿದೆ.

ಮೊದಲ ಬಾರಿಗೆ ಸಿಟಾಡೆಲ್ ಸೀರಿಸ್​ನಲ್ಲಿ ಅಭಿನಯಿಸಬೇಕೊ ಅಥವಾ ಬೇಡ್ವಾ ಅಂತ ನಿರ್ಧಾರ ಮಾಡಲು ಹಾರ್ಟ್​ಬೀಟ್ ಜೋರಾಗಿತ್ತು. ಫ್ಯಾಮಿಲಿ ಮ್ಯಾನ್​ನಲ್ಲಿ ರಾಜ್​ ನಿಡಿಮೋರ್​, ಡಿ.ಕೆ.ಕೃಷ್ಣ ಡೈರೆಕ್ಷನ್​ ಹೆಸರು ಮಾಡಿದ್ದರಿಂದ ನಾನು ಸಿಟಾಡೆಲ್​ನಲ್ಲಿ ನಟಿಸಲು ಒಪ್ಪಿದೆ. ಇದೊಂದು ಸಿರೀಸ್​ ವಿಶ್ವದ್ಯಾಂತ ಪ್ರಸಾರ ಆಗಲಿದೆ. ಭಾರತೀಯ ಶೈಲಿಯಲ್ಲಿ ಕಥೆಗಳನ್ನ ಇದರಲ್ಲಿ ಹೇಳಲಾಗ್ತಿದೆ. ಇದರ ಸ್ಕ್ರೀಫ್ಟ್​ ನನ್ನ ತುಂಬಾ ರೋಮಾಂಚನಗೊಳಿಸಿದವು. ಈ ಟೀಮ್​ ಜೊತೆ ನಾನು ಸೇರಿಕೊಂಡು ಕೆಲಸ ಮಾಡಲು ಉತ್ಸುಕಳಾಗಿದ್ದೇನೆ ಎಂದು ಸಮಂತಾ ಅಭಿಪ್ರಾಯ ಪಟ್ಟಿದ್ದಾರೆ. ​ ​

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮುಖಕ್ಕೆ ಐಸ್ ಮಸಾಜ್‌ ಮಾಡಿ ಪರಿಣಾಮ ನೋಡಿ.!

Sat Feb 4 , 2023
ಮೇಕಪ್ ಮಾಡುವ ಮುನ್ನ ಐಸ್ ನಿಂದ ಮುಖ ತಿಕ್ಕಿಕೊಳ್ಳುವುದರಿಂದ ಬಹಳ ಹೊತ್ತು ಸೌಂದರ್ಯ ಹಾಳಾಗದೆ ಉಳಿಯುತ್ತದೆ ಎಂಬುದು ಎಲ್ಲರಿಗೂ ತಿಳಿದ ವಿಚಾರವೇ. ಆ ಐಸ್ ಮಸಾಜ್ ಹೇಗೆ ಮಾಡುವುದು ತಿಳಿಯೋಣ. ಐಸ್, ಕೂಲಿಂಗ್ ಏಜೆಂಟ್ ನಂತೆ ಕೆಲಸ ಮಾಡುತ್ತದೆ. ಹಾಗಾಗಿ ನಾಲ್ಕರಿಂದ ಐದು ಐಸ್ ಕ್ಯೂಬನ್ನು ಮೃದುವಾದ ಕಾಟನ್ ಬಟ್ಟೆಯಲ್ಲಿಟ್ಟು ಅಥವಾ ಹ್ಯಾಂಡ್ ಕರ್ಚಿಫ್ ಬಳಸಿ ಮುಖದ ಮೇಲಿಡಿ. ವೃತ್ತಾಕಾರದಲ್ಲಿ ಎರಡು ನಿಮಿಷ ಮಸಾಜ್ ಮಾಡುವುದು ಒಳ್ಳೆಯದು. ಹಣೆ, ಕೆನ್ನೆ, […]

Advertisement

Wordpress Social Share Plugin powered by Ultimatelysocial