ಟೆನ್ನಿಸ್ ಜಗತ್ತಿಗೆ ನಿವೃತ್ತಿ ಘೋಷಿಸಿದ ಸಾನಿಯಾ ಮಿರ್ಜಾ

ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್‌ ಗೆ ವಿಚ್ಛೇದನ ನೀಡುವ ಸುದ್ದಿಯ ನಡುವೆ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಟೆನಿಸ್ ವೃತ್ತಿಜೀವನಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಗಾಯದ ವಿಚಾರವಾಗಿ ಸಾನಿಯಾ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.ಮುಂದಿನ ತಿಂಗಳು ದುಬೈ ಟೆನಿಸ್ ಚಾಂಪಿಯನ್‌ಶಿಪ್‌ನಲ್ಲಿ ಆಡುವುದಾಗಿ ಸಾನಿಯಾ ಹೇಳಿದ್ದಾರೆ. ಈ ಚಾಂಪಿಯನ್‌ಶಿಪ್ ಸಾನಿಯಾ ವೃತ್ತಿಜೀವನದ ಕೊನೆಯ ಪಂದ್ಯಾವಳಿಯಾಗಿದೆ. ಈ ದುಬೈ ಟೆನಿಸ್ ಚಾಂಪಿಯನ್‌ಶಿಪ್ ಫೆಬ್ರವರಿ 19 ರಂದು ಆರಂಭವಾಗಲಿದೆ. ಇದು WTA 1000 ಈವೆಂಟ್ ಆಗಿರುತ್ತದೆ. ಈ ಟೂರ್ನಿಯಲ್ಲಿ ಸಾನಿಯಾ ಕೊನೆಯ ಬಾರಿಗೆ ತಮ್ಮ ಅಭಿಮಾನಿಗಳ ಜೊತೆ ಕಾಣಿಸಿಕೊಳ್ಳಲಿದ್ದಾರೆ.36 ವರ್ಷ ವಯಸ್ಸಿನ ಸಾನಿಯಾ ಮಿರ್ಜಾ ಡಬಲ್ಸ್‌ನಲ್ಲಿ ವಿಶ್ವದ ನಂಬರ್-1 ಆಗಿದ್ದಾರೆ. 2022ರ ಅಂತ್ಯದಲ್ಲಿ ನಿವೃತ್ತಿ ಹೊಂದುವುದಾಗಿ ಸಾನಿಯಾ ಕಳೆದ ವರ್ಷವೇ ಘೋಷಿಸಿದ್ದರು. ಇದೀಗ ಸಾನಿಯಾ ಮಿರ್ಜಾ ಈ ವರ್ಷದ ಮೊದಲ ಗ್ರ್ಯಾನ್ ಸ್ಲಾಮ್ ಆಸ್ಟ್ರೇಲಿಯನ್ ಓಪನ್ ಆಡಲಿದ್ದಾರೆ. ಇದಾದ ಬಳಿಕ ಯುಎಇಯಲ್ಲಿ ಚಾಂಪಿಯನ್ ಶಿಪ್ ಆಡಿದ ಬಳಿಕ ಟೆನಿಸ್ ಗೆ ವಿದಾಯ ಹೇಳಲಿದ್ದಾರೆ.ಕಳೆದ ವರ್ಷ ನಿವೃತ್ತಿಯ ಸೂಚನೆಯನ್ನು ಸಾನಿಯಾ wtatennis.com ಗೆ ನೀಡಿದ್ದರು. ‘ಕಳೆದ ವರ್ಷ WTA ಫೈನಲ್‌ನ ನಂತರವೇ ನಾನು ನಿವೃತ್ತಿಯ ಯೋಜನೆಯನ್ನು ಮಾಡಿದ್ದೆ. ಬಲ ಮೊಣಕೈ ಗಾಯದಿಂದಾಗಿ, ಯುಎಸ್ ಓಪನ್ ಮತ್ತು ಉಳಿದ ಪಂದ್ಯಾವಳಿಯಿಂದ ಹೆಸರನ್ನು ಹಿಂತೆಗೆದುಕೊಳ್ಳಬೇಕಾಯಿತು. ನಾನು ನನ್ನ ಸ್ವಂತ ನಿಯಮಗಳ ಮೇಲೆ ಬದುಕುವ ವ್ಯಕ್ತಿ. ಇದೇ ಕಾರಣಕ್ಕೆ ನಾನು ಗಾಯದ ಸಮಸ್ಯೆಯಿಂದ ಹೊರಗುಳಿಯಲು ಬಯಸದೆ ಇನ್ನೂ ತರಬೇತಿ ಪಡೆಯುತ್ತಿದ್ದೇನೆ. ದುಬೈ ಟೆನಿಸ್ ಚಾಂಪಿಯನ್‌ಶಿಪ್‌ನ ನಂತರ ನಾನು ನಿವೃತ್ತಿ ಹೊಂದಲು ಯೋಜಿಸಿರುವ ಕಾರಣವೂ ಇದೇ” ಎಂದು ಹೇಳಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de….

Please follow and like us:

Leave a Reply

Your email address will not be published. Required fields are marked *

Next Post

ಒಂದೇ ವೇದಿಕೆಯಲ್ಲಿ ದರ್ಶನ್, ಸುದೀಪ್, ಎನ್‌ಟಿಆರ್, ರಮ್ಯಾ

Sat Jan 7 , 2023
ನಟ ದರ್ಶನ್ ಹಾಗೂ ಸುದೀಪ್ ಇಬ್ಬರ ನಡುವೆ ಮನಸ್ತಾಪ ಇರುವುದು ತಿಳಿದಿರುವ ವಿಷಯವೇ. ಮೆಜೆಸ್ಟಿಕ್ ಚಿತ್ರದಲ್ಲಿ ದರ್ಶನ್ ಅವರಿಗೆ ಅವಕಾಶ ನೀಡಿ ಎಂದು ನಾನು ಸೂಚಿಸಿದ್ದೆ ಎಂದು ಸುದೀಪ್ ನೀಡಿದ್ದ ಹೇಳಿಕೆಯಿಂದ ದರ್ಶನ್ ಸುದೀಪ್ ಅವರಿಂದ ದೂರಾಗಿ ‘ಇನ್ನು ನಾನು ಹಾಗೂ ಸುದೀಪ್ ಸ್ನೇಹಿತರಲ್ಲ’ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದರು.ಹೀಗೆ ತಮ್ಮಿಬ್ಬರ ನಡುವೆ ಯಾವುದೇ ಸ್ನೇಹ ಸಂಬಂಧ ಇನ್ನು ಮುಂದೆ ಇರುವುದಿಲ್ಲ ಎಂಬುದನ್ನು ಸ್ಪಷ್ಟ ಪಡಿಸಿದ್ದ ದರ್ಶನ್ ಸುದೀಪ್ […]

Advertisement

Wordpress Social Share Plugin powered by Ultimatelysocial