ರಕ್ಷಿತ್ ಶೆಟ್ಟಿ ಅಭಿನಯದ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದ ಪೋಸ್ಟರ್ ರಿಲೀಸ್!

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ತಮ್ಮ ಪ್ರತಿ ಚಿತ್ರಗಳಲ್ಲೂ ಹೊಸದೊಂದು ಪ್ರಯೋಗವನ್ನು ಮಾಡುತ್ತಲೇ ಇರುತ್ತಾರೆ. ತಮ್ಮ ಸಿನಿಮಾಗಳಲ್ಲಿ ವಿಭಿನ್ನ ರೀತಿಯ ಪಾತ್ರಗಳನ್ನು ಮಾಡುವ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಇನ್ನು ಅವರ ಮುಂದಿನ ಬಹುನಿರೀಕ್ಷಿತ ಸಿನಿಮಾ ‘777 ಚಾರ್ಲಿ’ ಕೆಲವೇ ದಿನಗಳಲ್ಲಿ ರಿಲೀಸ್ ಆಗಲಿದೆ.

ಸದ್ಯ ‘777 ಚಾರ್ಲಿ’ ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿರುವ ನಟ ರಕ್ಷಿತ್ ಶೆಟ್ಟಿ, ತಮ್ಮ ಮುಂದಿನ ಸಿನಿಮಾಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಆ ಸಿನಿಮಾ ಮೇಲೂ ಜನರ ಕುತೂಹಲವನ್ನು ಹೆಚ್ಚಿಸಿದ್ದಾರೆ. ‘777 ಚಾರ್ಲಿ’ಯಲ್ಲಿ ರಕ್ಷಿತ್ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಕೂಡ ಜನರಿಗೆ ಭಾವನಾತ್ಮಕವಾಗಿ ಕನೆಕ್ಟ್ ಕೂಡ ಆಗಿದೆ.

ಈಗ ‘777 ಚಾರ್ಲಿ’ ಸಿನಿಮಾ ರಿಲೀಸ್ ಆದ ಬಳಿಕ ರಕ್ಷಿತ್ ಶೆಟ್ಟಿಯ ಮತ್ತೊಂದು ಚಿತ್ರ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರ ಈಗಿನಿಂದಲೇ ಸಖತ್ ಸುದ್ದಿ ಮಾಡುತ್ತಿದೆ. ಸದ್ಯ ಈಗ ಸಿನಿಮಾದ ಪೋಸ್ಟರ್‌ವೊಂದನ್ನು ಬಿಡುಗಡೆ ಮಾಡಿದ್ದು, ರಕ್ಷಿತ್ ಶೆಟ್ಟಿ ಇದರಲ್ಲಿ ವಿಭಿನ್ನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡ ರಕ್ಷಿತ್ ಶೆಟ್ಟಿನಿರ್ದೇಶಕ ಹೇಮಂತ್ ಎಂ. ರಾವ್ ಆಕ್ಷನ್ ಕಟ್ ಹೇಳುತ್ತಿರುವ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇಂದು ( ಮೇ 23) ಸಿನಿಮಾದ ಪೋಸ್ಟರ್‌ ಕೂಡ ರಿಲೀಸ್ ಆಗಿದ್ದು, ಪೋಸ್ಟರ್‌ನಲ್ಲಿ ರಕ್ಷಿತ್ ಶೆಟ್ಟಿ ರಗಡ್‌ ಆಗಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಮೇಲೆ ಮತ್ತಷ್ಟು ಕೌತುಕ ಹೆಚ್ಚಾಗಿದ್ದು, ರಕ್ಷಿತ್ ಶೆಟ್ಟಿ ವಿಭಿನ್ನ ಅವತಾರಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಅಲ್ಲದೆ ಈ ಸಿನಿಮಾ ಪೋಸ್ಟರ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮದುವೆ ಎಂಬುದು ಜೀವನದಲ್ಲಿ ಒಮ್ಮೆ ಮಾತ್ರ ಆಗುವಂತದು.

Tue May 24 , 2022
 ಮದುವೆ ದಿನದಂದು ಸುಂದರವಾಗಿ ಕಾಣಬೇಕೆಂಬ ಆಸೆ ಎಲ್ಲಾ ಹುಡುಗಿಯರಿಗೂ ಇದ್ದೇ ಇರುತ್ತದೆ. ಅಂತವರು ಮುಖದ ಅಂದ ಕೆಡಿಸುವಂತಹ ಈ ತಪ್ಪುಗಳನ್ನು ಮಾಡಬೇಡಿ. ಮದುವೆ ದಿನ ಹತ್ತಿರ ಬರುತ್ತಿರುವಾಗ ವಧು ತಿನ್ನುವ ಆಹಾರದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಇಲ್ಲವಾದರೆ ಇದು ಮುಖದ ಚರ್ಮದ ಮೇಲೆ ಪ್ರಭಾವ ಬೀರುತ್ತದೆ. ದೇಹದ ಪಿಎಚ್ ಪ್ರಮಾಣ ಕಡಿಮೆ ಮಾಡುವಂತಹ ಆಹಾರಗಳನ್ನು ಸೇವಿಸಬಾರದು. ಉದಾಹರಣೆಗೆ ಕಾರ್ಬೊನೇಟೆಡ್ ಪಾನೀಯಗಳು, ಆಲ್ಕೋಹಾಲ್, ಸಕ್ಕರೆ, ಮತ್ತು ಮೊಟ್ಟೆಯ ಹಳದಿ ಭಾಗಗಳನ್ನು […]

Advertisement

Wordpress Social Share Plugin powered by Ultimatelysocial