ಸರೋಜಿನಿ ಮಹಿಷಿ ಎಂಬ ಹೆಸರು ಚಿರಪರಿಚಿತ.

ಕನ್ನಡಿಗರಿಗೆ ಸರೋಜಿನಿ ಮಹಿಷಿ ಎಂಬ ಹೆಸರು ಚಿರಪರಿಚಿತ. ಕನ್ನಡಿಗರಿಗೆ ಉದ್ಯೋಗದ ಹಕ್ಕಿನ ಕುರಿತಾದ ‘ಸರೋಜಿನಿ ಮಹಿಷಿ ವರದಿ’ ಬಗ್ಗೆ ಹಲವು ದಶಕಗಳಿಂದ ಕನ್ನಡಿಗರ ಹೋರಾಟ ನಡೆಯುತ್ತಲೇ ಇದೆ. ಡಾ. ಸರೋಜಿನಿ ಮಹಿಷಿ ಅವರು ಪ್ರಸಿದ್ಧ ಕಾನೂನು ತಜ್ಞೆ, ರಾಜಕಾರಿಣಿ, ಸಾಹಿತಿ, ಚಿತ್ರಕಲಾವಿದೆ, ಬಹುಭಾಷಾ ಜ್ಞಾನಿ.ಸರೋಜಿನಿ ಮಹಿಷಿ 1927ರ ಮಾರ್ಚ್ 3 ರಂದು ಧಾರವಾಡದಲ್ಲಿ ಜನಿಸಿದರು. ತಂದೆ ವಕೀಲರು ಹಾಗೂ ಸಂಸ್ಕೃತ ಪಂಡಿತರಾಗಿದ್ದ ಬಿಂದೂರಾವ್ ಅಚ್ಯುತಾಚಾರ್ಯ ಮಹಿಷಿ. ತಾಯಿ ಕಮಲಾಬಾಯಿ.ಸರೋಜಿನಿ ಅವರು ಧಾರವಾಡದ ಸರಕಾರಿ ಶಾಲೆಯಲ್ಲಿ ಐದನೆಯ ತರಗತಿಯವರೆಗೆ ಓದಿ ಮುಂದೆ ಕರ್ನಾಟಕ ಹೈಸ್ಕೂಲಿನಲ್ಲಿ ಎಸ್ಎಸ್ಎಲ್‌ಸಿ ವರೆಗೆ ಓದಿದರು. ತಂದೆಯವರು ವಕೀಲಿ ವೃತ್ತಿಯನ್ನು ಸಾಂಗ್ಲಿಯಲ್ಲಿ ಪ್ರಾರಂಭಿಸಿದ್ದರಿಂದ ಸರೋಜಿನಿ ಮಹಿಷಿಯವರು ಸಾಂಗ್ಲಿಯ ವಿಲ್ಲಿಂಗ್‌ಡನ್ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದರು. ನಂತರ ಸ್ನಾತಕೋತ್ತರ ಪದವಿ ಓದಿಗೆ ಸೇರಿದಾಗ ಅಲ್ಲಿನ ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದವರು ಡಾ. ರಂ.ಶ್ರೀ. ಮುಗಳಿ ಅವರು. ಮುಗಳಿಯವರ ಪ್ರೇರಣೆಯಿಂದ ಸರೋಜಿನಿ ಅವರಲ್ಲಿ ಅಧ್ಯಯನಾಸಕ್ತಿ ಬೆಳೆಯುತ್ತಾ ಹೋಯಿತು. ಸರೋಜಿನಿ ಅವರು ಮುಂಬಯಿ ವಿಶ್ವವಿದ್ಯಾಲಯದಿಂದ 1949 ರಲ್ಲಿ ಎಂ.ಎ. ಪದವಿ ಪಡೆದರು. ಸರೋಜಿನಿಯವರು ತಾವು ಓದಿದ ಕಾಲೇಜಿನಲ್ಲಿಯೇ ಎರಡು ವರ್ಷಗಳ ಕಾಲ ಅಧ್ಯಾಪಕಿಯಾಗಿ ಸೇವೆ ಸಲ್ಲಿಸಿದರು. ನಂತರ ಒಂದು ವರ್ಷ ಧಾರವಾಡದ ಗರ್ಲ್ಸ್ ಹೈಸ್ಕೂಲಿನಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿದರು.ಸಮಯವನ್ನು ಹಾಳುಮಾಡದೆ ಸದಾ ಒಂದಲ್ಲೊಂದು ಕಾರ್ಯದಲ್ಲಿ ಸದಾ ತೊಡಗಿರುತಿದ್ದ ಮಹಿಷಿಯವರು DIPLOMA IN TAILORING AND EMBROIDERY ಒಂದು ವರ್ಷದ ತರಬೇತಿ ಪಡೆದು ಈಝೀ ಕಟಿಂಗ್, ಕಮರ್ಷಿಯಲ್ ಸಿಸ್ಟಮ್ ಆಫ್ ಕಟಿಂಗ್, ಮತ್ತು ಕಸೂತಿ ಕಲೆ ಎಂಬ ವಿಷಯಗಳ ಮೇಲೆ ಪುಸ್ತಕಗಳನ್ನು ರಚಿಸಿದರು. ಇದೇ ಸಂದರ್ಭದಲ್ಲಿ ಮುಂಬಯಿಯಲ್ಲಿ ಡಿಪ್ಲೊಮ ಇನ್ ಹೋಮಿಯೋಪತಿ ಪರೀಕ್ಷೆಯಲ್ಲಿ ಉತ್ತೀರ್ಣರಾದರು.ಯಾವುದಾದರೊಂದು ಪ್ರಕಾರದಲ್ಲಿ ತೊಡಗಿಕೊಂಡು ತಮ್ಮ ಜ್ಞಾನದಾಹವನ್ನು ಇಂಗಿಸಿಕೊಳ್ಳುವುರಲ್ಲೇ ನಿರತರಾಗಿದ್ದ ಮಹಿಷಿಯವರಿಗೆ ಕಾನೂನು ಕಲಿಯಬೇಕೆನಿಸಿ ಬೆಳಗಾವಿಯ ಆರ್‌.ಎಲ್.ಎಸ್. ಕಾಲೇಜಿನಲ್ಲಿ ಎಲ್‌.ಎಲ್‌.ಟಿ ಅಧ್ಯಯನ ಮಾಡಿ 1955ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಪ್ರಥಮ ರ್ಯಾಂಕ್ ಪಡೆದು ತೇರ್ಗಡೆಯಾದರು. ನಂತರ ಧಾರವಾಡದ ಜನತಾ ಲಾ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕೆಲಕಾಲ ಕಾರ್ಯನಿರ್ವಹಿಸಿದರು. ಧಾರವಾಡದಲ್ಲಿ ಕನವಿಕರ್‌ ಎಂಬ ವಕೀಲರ ಬಳಿ ವಕೀಲಿ ವೃತ್ತಿ ಪ್ರಾರಂಭಿಸಿ ಬಾರ್‌ ಕೌನ್ಸಿಲ್ ಪರೀಕ್ಷೆಗೆ ಕುಳಿತು ಪ್ರಥಮಸ್ಥಾನ ಗಳಿಸಿದ ಮಹಿಳೆ ಎಂಬ ಹೆಗ್ಗಳಿಕೆಗೂ ಪಾತ್ರರಾದರು.ಸರೋಜಿನಿ ಮಹಿಷಿ ಅವರು ಸಾಹಿತ್ಯಾಭ್ಯಾಸಿಯಾಗಿ ಬರವಣಿಗೆಯಲ್ಲಿ ನಿರತರಾಗಿ ಹಲವಾರು ಕವನಗಳನ್ನು, ಮಕ್ಕಳ ಕವಿತೆಗಳನ್ನು ರಚಿಸಿ ಅವು ಪತ್ರಿಕೆಗಳಲ್ಲೂ ಪ್ರಕಟಗೊಂಡವು. ಅವರು ಕನ್ನಡ, ಸಂಸ್ಕೃತ, ಹಿಂದಿ, ಇಂಗ್ಲೀಷ್, ಮರಾಠಿ, ತೆಲುಗು, ತಮಿಳು, ಕೊಂಕಣಿ ಭಾಷೆಗಳಲ್ಲೂ ಪ್ರಭುತ್ವ ಪಡೆದು ಬಹುಭಾಷಾ ಕೋವಿದೆ ಎನಿಸಿದ್ದರು. ಕಲಿಕೆಯ ದಾಹದಿಂದ ಯಾವುದಾದರೊಂದು ಪದವಿಗಳಿಸುವುದರಲ್ಲೇ ತಲ್ಲೀನರಾಗಿರುತ್ತಿದ್ದ ಮಹಿಷಿಯವರು ಸ.ಸ. ಮಾಳದಾಡರ ಮಾರ್ಗದರ್ಶನದಲ್ಲಿ ‘ಕನ್ನಡ ಕವಯಿತ್ರಿಯರು’ (ವೇದಕಾಲದಿಂದ ಆಧುನಿಕ ಕಾಲದವರೆಗೆ) ಎಂಬ ಪ್ರೌಢ ಪ್ರಬಂಧವನ್ನು ರಚಿಸಿ ಕರ್ನಾಟಕ ವಿಶ್ವವಿದ್ಯಾಲಯಕ್ಕೆ 1961ರಲ್ಲಿ ಸಲ್ಲಿಸಿದರು. ಅವರಿಗೆ ಡಿ.ಲಿಟ್ ಪದವಿ ಸಂದಿತು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಾಡಾಳು ವಿರೂಪಾಕ್ಷ ವಿರುದ್ಧವೂ ಕ್ರಮ ಕೈಗೊಳ್ಳಿ: ಸಿದ್ದು ಒತ್ತಾಯ

Fri Mar 3 , 2023
ಬೆಳಗಾವಿ: ಕೆಎಸ್‍ಡಿಎಲ್ ಲಂಚ ಹಗರಣದಲ್ಲಿ ಬಿಜೆಪಿ ಶಾಸಕ ಮಾಡಾಳು ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.ಬೆಳಗಾವಿಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಳೆದ ನಾಲ್ಕು ವರ್ಷಗಳಿಂದ, ಕೇಂದ್ರದಲ್ಲಿ 9 ವರ್ಷದಿಂದ ಬಿಜೆಪಿ ಅಧಿಕಾರದಲ್ಲಿದೆ. ರಾಜ್ಯದಲ್ಲಿ ಶಾಸಕರನ್ನು ಖರೀದಿ ಮಾಡಿ ಅನೈತಿಕ ಸರ್ಕಾರ ರಚನೆ ಮಾಡಿದ ಬಿಜೆಪಿ ಲೂಟಿ ಹೊಡೆಯುವುದರಲ್ಲೇ ಕಾಲ ಕಳೆದಿದೆ. ಭ್ರಷ್ಟಚಾರಕ್ಕೆ ಬಿಜೆಪಿ ಮತ್ತು ಮುಖ್ಯಮಂತ್ರಿ ಸಾಕ್ಷ್ಯ ಕೇಳುತ್ತಿದ್ದಾರೆ. ಮಾಡಾಳು ವಿರುಪಾಕ್ಷಪ್ಪನ ಪುತ್ರ ಪ್ರಶಾಂತ್ […]

Advertisement

Wordpress Social Share Plugin powered by Ultimatelysocial