‘ಗ್ರಾಮ ಪಂಚಾಯತ್’ ಚುನಾವಣೆಗೆ ರಾಜ್ಯ ಚುನಾವಣಾ ಆಯೋಗದಿಂದ ವೇಳಾಪಟ್ಟಿ ಪ್ರಕಟ.

ಬೆಂಗಳೂರು: ಗ್ರಾಮ ಪಂಚಾಯತ್ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ಪ್ರಕಟಿಸಿದ್ದು, ಫೆ.25 ರಂದು ಚುನಾವಣೆ ನಡೆಸಲು ನಿರ್ಧರಿಸಿದೆ.

ಅವಧಿ ಮುಗಿದ ರಾಜ್ಯದ ಎಂಟು ಗ್ರಾಮ ಪಂಚಾಯತ್ ಗಳ 127 ಸ್ಥಾನಗಳು ಹಾಗೂ ವಿವಿಧ ಕಾರಣಗಳಿಂದ ತೆರವಾಗಿರುವ 103 ಗ್ರಾಮ ಪಂಚಾಯತ್ಗಳ 135 ಸ್ಥಾನಗಳಿಗೆ ಫೆ.25ರಂದು ಉಪಚುನಾವಣೆ ನಡೆಸಲು ರಾಜ್ಯ ಚುನಾವಣ ಆಯೋಗ ನಿರ್ಧರಿಸಿದೆ.

ಬೆಂಗಳೂರು ಗ್ರಾಮಾಂತರ, ದಕ್ಷಿಣ ಕನ್ನಡ, ಹಾಸನ, ವಿಜಯಪುರ, ವಿಜಯನಗರ ಮತ್ತು ಯಾದಗಿರಿ ಜಿಲ್ಲೆಗಳ 8 ಗ್ರಾ.ಪಂ.ಗಳ 127 ಸದಸ್ಯ ಸ್ಥಾನಗಳು ಮತ್ತು ವಿವಿಧ ಕಾರಣಗಳಿಂದ ತೆರವಾಗಿರುವ 30 ಜಿಲ್ಲೆಗಳ 103 ಗ್ರಾಮ ಪಂಚಾಯತ್ ಗಳ 135 ಸದಸ್ಯ ಸ್ಥಾನಗಳಿಗೆ ಉಪಚುನಾವಣೆ ನಡೆಸಲಿದೆ.

ನಾಮಪತ್ರ ಸಲ್ಲಿಸಲು ಫೆ.14 ಕೊನೆ ದಿನಾಂಕವಾಗಿದೆ. ಫೆ.15ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ನಾಮಪತ್ರ ವಾಪಸ್ ಪಡೆದುಕೊಳ್ಳಲು ಫೆ.17 ಕೊನೆ ದಿನಾಂಕವಾಗಿದೆ. ಫೆ. 25ರಂದು ಬೆಳಗ್ಗೆ 7ರಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆಯಲಿದೆ. ಫೆ.28 ರಂದು ಫಲಿತಾಂಶ ಹೊರಬೀಳಲಿದೆ ಎಂದು ಚುನಾವಣಾ ಆಯೋಗ ಪ್ರಕಟಣೆ ತಿಳಿಸಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಆಟೋ, ಕ್ಯಾಬ್ ಚಾಲಕರು, ವಿಧ್ಯಾರ್ಥಿಗಳು ಹಾಗೂ ಹೋಟೆಲ್ ಮಾಲಿಗಳಿಂದ ಬಿಡುಗಡೆಯಾಯಿತು "ರೂಪಾಯಿ" ಚಿತ್ರದ ಮಸ್ತ್ ಟ್ರೇಲರ್ .

Thu Feb 2 , 2023
ಆಟೋ, ಕ್ಯಾಬ್ ಚಾಲಕರು, ವಿಧ್ಯಾರ್ಥಿಗಳು ಹಾಗೂ ಹೋಟೆಲ್ ಮಾಲಿಗಳಿಂದ ಬಿಡುಗಡೆಯಾಯಿತು “ರೂಪಾಯಿ” ಚಿತ್ರದ ಮಸ್ತ್ ಟ್ರೇಲರ್ ವಿಜಯ್ ಜಗದಾಲ್ ನಾಯಕನಾಗಿ ನಟಿಸಿ, ನಿರ್ದೇಶಿಸಿರುವ ಹಾಗೂ ವಿವಿಧ್ ಸಿನಿಮಾಸ್ ಲಾಂಛನದಲ್ಲಿ ಮಂಜುನಾಥ್ ಎಂ, ಹರೀಶ್ ಬಿ.ಕೆ ಹಾಗೂ ವಿನೋದ್ ಎನ್ ನಿರ್ಮಿಸಿರುವ “ರೂಪಾಯಿ” ಚಿತ್ರದ ಟ್ರೇಲರ್ ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಯಾಗಿದೆ. ಟ್ರೇಲರ್ ಗೆ ಎಲ್ಲಾ ಕಡೆ ಮೆಚ್ಚುಗೆ ಹರಿದು ಬರುತ್ತಿದೆ. ಆಟೋ, ಕ್ಯಾಬ್ ಚಾಲಕರು, ವಿಧ್ಯಾರ್ಥಿಗಳು ಹಾಗೂ […]

Advertisement

Wordpress Social Share Plugin powered by Ultimatelysocial