ಶಾಲೆಗಳಲ್ಲಿ ಧರ್ಮದ ಪ್ರದರ್ಶನಕ್ಕೆ ಅವಕಾಶವಿಲ್ಲ: ಎಚ್.ವಿಶ್ವನಾಥ್‌

 

ಮೈಸೂರು: ‘ಶಾಲೆ ಪರಮಪೂಜಿತ ಸ್ಥಳವಾಗಿದ್ದು, ಅಲ್ಲಿ ಧರ್ಮದ ಪ್ರದರ್ಶನಕ್ಕೆ ಅವಕಾಶವಿಲ್ಲ. ಹಿಜಾಬ್‌ ಅಥವಾ ಕೇಸರಿ ಶಾಲು ಮನೆ ಹಾಗೂ ಇತರ ಕಡೆ ಪ್ರದರ್ಶಿಸಬಹುದೇ ಹೊರತು, ಶಾಲೆಗಳಲ್ಲಿ ಅಲ್ಲ’ ಎಂದು ವಿಧಾನಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ಹೇಳಿದರು.

ಮೈಸೂರಿನಲ್ಲಿ ಬುಧವಾರ ಮಾಧ್ಯಮದವರ ಜತೆ ಮಾತನಾಡಿ, ‘ಮಕ್ಕಳ ಮನಸ್ಸಿನಲ್ಲಿ ವಿಷ ಬೀಜ ಬಿತ್ತುವ ಕೆಲಸ ರಾಜಕೀಯ ಪಕ್ಷಗಳಿಂದ ನಡೆಯುತ್ತಿದೆ. ಹಿಂದೂ ಕೋಮುವಾದ, ಮುಸ್ಲಿಂ ಮತೀಯವಾದ ಎರಡು ವಿಜೃಂಭಿಸುತ್ತಿವೆ. ಕೇಸರಿ ಶಾಲು, ಹಿಜಾಬ್‌ಗಿಂತ ಶಿಕ್ಷಣ ದೊಡ್ಡದು. ಧರ್ಮದ ಲಾಂಛನ ಮನೆಗಳಿಗೆ ಸೀಮಿತವಾಗಿರಲಿ. ಅವನ್ನು ಶಾಲೆಯೊಳಗೆ ತರಬೇಡಿ’ ಎಂದು ಸಲಹೆ ನೀಡಿದರು.

‘ಬಸವರಾಜ ಬೊಮ್ಮಾಯಿ ಅವರೇ, ಯಾರೋ ಮೂರು ಜನ ಕಲ್ಲೆಸೆದ ಕಾರಣಕ್ಕೆ ಶಾಲೆ- ಕಾಲೇಜುಗಳನ್ನು ಮೂರು ದಿನ ಮುಚ್ಚಿಸುತ್ತೀರಾ? ಕಲ್ಲು ಹೊಡೆದವರನ್ನು ಒದ್ದು ಒಳಗೆ ಹಾಕಲು ನಮ್ಮಲ್ಲಿ ಕಾನೂನು ಇಲ್ಲವೇ? ಕಾನೂನಿನಡಿ ಶಿಕ್ಷಿಸುವ ಬದಲು ಶಾಲೆಗೆ ಬಾಗಿಲು ಹಾಕುತ್ತೀರಾ?’ ಎಂದು ತರಾಟೆಗೆ ತೆಗೆದುಕೊಂಡರು.

‘ಕೆಲವು ಶಾಲೆಗಳ ಆಡಳಿತ ವರ್ಗದವರು ಒಂದೊಂದು ಪಕ್ಷಕ್ಕೆ ಸೇರಿಕೊಂಡಿದ್ದಾರೆ. ಯಾವುದಾದರೂ ಒಂದು ಪಕ್ಷವನ್ನು ಬೆಂಬಲಿಸಿ ಈ ವಿವಾದಕ್ಕೆ ತುಪ್ಪ ಸುರಿಯುವ ಕೆಲಸ ಮಾಡಿದರೆ, ಅಂತಹ ಶಿಕ್ಷಣ ಸಂಸ್ಥೆಗಳ ಪರವಾನಗಿ ರದ್ದುಗೊಳಿಸಬೇಕು’ ಎಂದು ಆಗ್ರಹಿಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

COVID-19 ಹರಡುವಿಕೆಯನ್ನು ನಿಗ್ರಹಿಸುವ ಮಾರ್ಗಗಳನ್ನು ತೋರಿಸಲು ಕಂಪ್ಯೂಟರ್ ಮಾದರಿಯನ್ನು ಅಭಿವೃದ್ಧಿಪಡಿಸಿದ್ದ, ಸಂಶೋಧಕರು;

Wed Feb 9 , 2022
COVID-19 ವಿರುದ್ಧದ ಜಾಗತಿಕ ಹೋರಾಟದಲ್ಲಿ ತಂತ್ರಜ್ಞಾನವು ಭರವಸೆಯ ಪ್ರಮುಖ ಮೂಲವಾಗಿದೆ ಎಂದು ಸಾಬೀತಾಗಿದೆ. ಇದರ ಹಿನ್ನೆಲೆಯಲ್ಲಿ, ವಾಟರ್‌ಲೂ ವಿಶ್ವವಿದ್ಯಾನಿಲಯದ ಸಂಶೋಧಕರು ಮೊದಲ ಕಂಪ್ಯೂಟೇಶನಲ್ ಮಾದರಿಯನ್ನು ರಚಿಸಿದ್ದಾರೆ, ಇದು ರೂಪಾಂತರಗಳ ಹರಡುವಿಕೆಯನ್ನು ನಿಧಾನಗೊಳಿಸಲು COVID-19 ರ ಪ್ರಸರಣದ ಮೇಲೆ ಪರಿಣಾಮ ಬೀರುವ ಅನೇಕ ಅಸ್ಥಿರಗಳನ್ನು ಅನುಕರಿಸುತ್ತದೆ. ಅವರ ಅಧ್ಯಯನವನ್ನು ‘ವೈಜ್ಞಾನಿಕ ವರದಿಗಳು’ ಪ್ರಕಟಿಸಲಾಗಿದೆ. ಕೇಸ್ ಸಂಖ್ಯೆಗಳು ಮತ್ತು ಆಸ್ಪತ್ರೆಗೆ ದಾಖಲುಗಳನ್ನು ಮುನ್ಸೂಚಿಸಲು ಈ ಮಾದರಿಯು ಈಗಾಗಲೇ ಬಳಕೆಯಲ್ಲಿರುವ ಕಚ್ಚಾ ಡೇಟಾವನ್ನು ತೆಗೆದುಕೊಂಡಿತು […]

Advertisement

Wordpress Social Share Plugin powered by Ultimatelysocial