ಹಿಜಾಬ್ ವಿವಾದದ ಬಗ್ಗೆ ಹೈಕೋರ್ಟ್ ಆದೇಶ ಹಿನ್ನಲೆ: ಪರೀಕ್ಷೆ ಬಹಿಷ್ಕರಿಸಿ ಮನೆಗೆ ತೆರಳಿದ ವಿದ್ಯಾರ್ಥಿನಿಯರು

ಯಾದಗಿರಿ: ಹೈಕೋರ್ಟ್ ಇಂದು ಹಿಜಾಬ್ ಧರಿಸೋದು ( Hijab Row ) ಇಸ್ಲಾಂ ಸಮುದಾಯಕ್ಕೆ ಅತ್ಯಗತ್ಯವಲ್ಲ ಎಂಬುದಾಗಿ ಐತಿಹಾಸಿಕ ತೀರ್ಪು ನೀಡಿತ್ತು. ಈ ಹಿನ್ನಲೆಯಲ್ಲಿ ಪರೀಕ್ಷೆಯನ್ನು ಬಹಿಷ್ಕರಿಸಿದಂತ ವಿದ್ಯಾರ್ಥಿನಿಯರು, ಮನೆಗೆ ವಾಪಾಸ್ ಆಗಿರೋ ಘಟನೆ, ಕೆಂಬಾವಿ ಪಟ್ಟಣದಲ್ಲಿ ನಡೆದಿದೆ.ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಬಾವಿ ಪಟ್ಟಣದಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು, ಇಂದು ಹಿಜಾಬ್ ಧರಿಸಿ ಪರೀಕ್ಷೆಗೆ ಹಾಜರಾಗೋದಕ್ಕೆ ಆಗಮಿಸಿದ್ದರು. ಆದ್ರೇ ಹೈಕೋರ್ಟ್ ಇಂದು ಹಿಜಾಬ್ ಧರಿಸೋದು ಅತ್ಯಗತ್ಯವಲ್ಲ ಎಂದು ತೀರ್ಪು ನೀಡಿದ ಕಾರಣ, ಪರೀಕ್ಷೆ ಬಹಿಷ್ಕರಿಸಿ, ಮನೆಗೆ ವಾಪಾಸ್ ಹೋಗಿರೋದಾಗಿ ತಿಳಿದು ಬಂದಿದೆ.ಇಂದು ಫೆಬ್ರವರಿ 25ರಿಂದ 11 ದಿನಗಳ ವಾದ-ಪ್ರತಿವಾದ ಆಲಿಸಿದ್ದಂತ ಹೈಕೋರ್ಟ್ ತ್ರಿಸದಸ್ಯ ಪೂರ್ಣ ಪೀಠವು, ತನ್ನ ತೀರ್ಪನ್ನು ಪ್ರಕಟಿಸಿದೆ. ಸತತ 11 ದಿನ ವಾದ-ಪ್ರತಿವಾದ ಆಲಿಸಿದ್ದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಆವಸ್ಥಿ, ನ್ಯಾಯಮೂರ್ತಿಗಳಾದ ಕೃಷ್ಣ ಎಸ್ ದೀಕ್ಷಿತ್, ಖಾಜಿ ಜೈಬುನ್ನಿಸಾ ಮೊಹಿದ್ದೀನ್ ಅವರಿದ್ದ ಪೀಠ, ಫೆಬ್ರವರಿ 25ರಂದು ವಿಚಾರಣೆ ಪೂರ್ಣಗೊಳಿಸಿ, ತೀರ್ಪು ಕಾಯ್ದಿರಿಸಿದ್ದಂತ ತೀರ್ಪನ್ನು, ಇಂದು ಪ್ರಕಟಿಸಿದ್ದು, ಹಿಜಾಬ್ ಇಸ್ಲಾಂ ಅತ್ಯಗತ್ಯಭಾಗವಲ್ಲ ಎಂಬುದಾಗಿ ಹೇಳುವ ಮೂಲಕ, ಹಿಜಾಬ್ ಕೋರಿದ್ದ ರಿಟ್ ಅರ್ಜಿಯನ್ನು ವಜಾಗೊಳಿಸಿದೆ. ಅಲ್ಲದೇ ಉಡುಪಿ ಕಾಲೇಜಿಗೆ ನಿರ್ಬಂಧ ಹೇರುವ ಅಗತ್ಯವಿಲ್ಲ ಎಂದು ತಿಳಿಸಿದೆ.ಇನ್ನೂ ರಾಜ್ಯ ಸರ್ಕಾರದ ಸಮವಸ್ತ್ರ ಕಡ್ಡಾಯ ಆದೇಶ ಕಾನೂನು ಬದ್ಧವಾಗಿದೆ ಎಂದು ಹೇಳಿರುವಂತ ಕೋರ್ಟ್, ಮುಸ್ಲೀಂ ಮಹಿಳೆಯರು ಹಿಜಾಬ್ ಧರಿಸುವುದು ಕಡ್ಡಾಯವಲ್ಲವೆಂದು ಹೈಕೋರ್ಟ್ ಪೂರ್ಣ ಪೀಠದಿಂದ ಐತಿಹಾಸಿಕ ತೀರ್ಪು ನೀಡಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಾವು ಅದನ್ನು ಆನಂದಿಸಿದ್ದೇವೆ, ಜನಸಮೂಹವು ಅದನ್ನು ಹೆಚ್ಚು ವಿಶೇಷಗೊಳಿಸುತ್ತದೆ!

Tue Mar 15 , 2022
ಬೆಂಗಳೂರಿನಲ್ಲಿ ನಡೆದ ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಶ್ರೀಲಂಕಾವನ್ನು 238 ರನ್‌ಗಳಿಂದ ಸೋಲಿಸಿ ಸೋಮವಾರ 2-0 ಸರಣಿ ವೈಟ್‌ವಾಶ್ ಪೂರ್ಣಗೊಳಿಸಿದ ನಂತರ ಭಾರತವು ತವರಿನಲ್ಲಿ ತಮ್ಮ ಗೆಲುವಿನ ಸರಣಿಯನ್ನು 15 ಟೆಸ್ಟ್ ಸರಣಿಗಳಿಗೆ ವಿಸ್ತರಿಸಿದ ನಂತರ ನಾಯಕ ರೋಹಿತ್ ಶರ್ಮಾ ಹರ್ಷ ವ್ಯಕ್ತಪಡಿಸಿದರು. ಪಿಂಕ್ ಬಾಲ್ ಟೆಸ್ಟ್‌ಗಳನ್ನು ಸವಾಲು ಎಂದು ಕರೆದ ರೋಹಿತ್ ಶರ್ಮಾ, ಶ್ರೇಯಸ್ ಅಯ್ಯರ್, ರಿಷಬ್ ಪಂತ್, ಆರ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಅವರನ್ನು ಪ್ರಶಂಸಿಸಿದರು, ತಂಡವು […]

Advertisement

Wordpress Social Share Plugin powered by Ultimatelysocial