ಪ್ರಿಯಾಂಕ ಗಾಂಧಿ ಅರೆಸ್ಟ್..!?

ಪೊಲೀಸ್‌ ಮತ್ತು ಪ್ರಿಯಾಂಕ ನಡುವೆ ಮಾತಿನಿ ಚಕಮಕಿ

ಕೇಂದ್ರ ಸರ್ಕಾರ ಜಾರಿಗೊಳಿಸಿದ ಮೂರು ಕೃಷಿ ಕಾಯ್ದೆಗಳನ್ನು  ವಿರೋಧಿಸಿ ಸುಮಾರು ಹತ್ತು ತಿಂಗಳಿನಿಂದ ಪ್ರತಿಭಟನೆ ನಡೆಯುತ್ತಲೇ ಇದೆ. ಮೂರು ಕೃಷಿ ಕಾಯ್ದೆಗಳನ್ನು ಕೂಡಲೇ ಹಿಂಪಡೆಯುವಂತೆ ನಿರಂತರ ಹೋರಟ ನಡೆಯುತ್ತಲೆ ಇದೇ… ಕೇಂದ್ರ ಸರ್ಕಾರ ರೈತರನ್ನು ಹೇಗೆ ಸಂದಾನ ಮಾಡುವುದು ಎಂದು ಯೋಚಿಸುತ್ತಿರುವಾಗಲೇ  ಇತ್ತೀಚಿಗೆ ಭಾಷಣವೊಂದರಲ್ಲಿ ಕೇಂದ್ರ ಗೃಹ ಖಾತೆಯ ಸಹಾಯಕ ಸಚಿವ ಅಜಯ್‌ ಮಿಶ್ರಾ ನೀಡಿದ ಹೇಳಿಕೆಗೆ ರೊಚ್ಚಿಗೆದ್ದ ರೈತರು ಪ್ರತಿಭಟನೆ ಮಾಡುವ ವೇಳೆ ಭಾರಿ ಅವಾಂತರವೇ ನಡೆದು ಹೋಗಿದೆ.

ಹೌದು ಇತ್ತೀಚಿನ ದಿನಗಳಲ್ಲಿ ಭಾಷಣವೊಂದರಲ್ಲಿ ಕೇಂದ್ರ  ಗೃಹ ಖಾತೆಯ ಸಹಾಯಕ ಸಚಿವ ಮಿಶ್ರಾ ಅವರು ಕೇಂದ್ರ ಸರ್ಕಾರ ಜಾರಿಗೊಳಿಸಿದ ಮೂರು ಕೃಷಿ ಕಾಯ್ದೆಗಳನ್ನು  ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರ  ಬಗ್ಗೆ ಮಾತನಾಡಿದ .ಮಿಶ್ರಾ ಕೇಂದ್ರ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಕೇವಲ  10-15 ಜನರು ಮಾತ್ರ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ.. ಅವರನ್ನು ಸರಿದಾರಿಗೆ ತರಲು ನಮಗೆ ಕೇವಲ ಎರೆಡು ನಿಮಿಷ ಸಾಕು ಎಂದು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದರು.

ಮಿಶ್ರಾ  ನೀಡಿದ ಹೇಳಿಕೆ ನೀಡಿದ ಬೆನ್ನಲ್ಲೇ  ರೊಚ್ಚಿಗೆದ್ದ  ರೈತರು ಪ್ರತಿಭಟನೆ ನಡೆಸಲು ಸಜ್ಜಾಗಿದ್ದರು ..ಇದೇ ವೇಳೆ ಮಿಶ್ರಾ ಅವರ ಪುತ್ರ ಆಶಿಷ್‌ ಮಿಶ್ರಾ  ಪ್ರತಿಭಟನಾಕಾರರ ಮೇಲೆಯೇ ಕಾರು ಚಲಾಯಿಸಿದ್ದಾರೆ..ಈ ದುರ್ಘಟನೆಯಿಂದ ಸ್ಥಳದಲ್ಲೇ ನಾಲ್ವರು ರೈತರು ಧಾರುಣ ಸಾವಿಗೆ ಇಡಾಗಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.. ರೈತರು ಒಂದು ಕಡೆ ನಾಲ್ವರು ರೈತರು ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿದರೆ.ಮತ್ತೊಂದು ಕಡೆ  ಬಿಜೆಪಿ ಕಾರ್ಯಕರ್ತರ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ ಈ ವೇಳೆ  ನಮ್ಮ ಕಾರ್ಯಕರ್ತರು ಇಬ್ಬರು ದಾರುಣ ಮರಣ ಹೊಂದಿದ್ದಾರೆ . ನಂತರ  ಕಾರಿನಲ್ಲಿದ್ದ ಮೂವರು ಕಾರ್ಯಕರ್ತರಿಗೆ  ಮತ್ತು ಚಾಲಕನಿಗೆ ಥಳಿಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ..ಆದರೆ ಈ ವರೆಗೂ  ಅಲ್ಲಿ ನಡೆದಿದ್ದಾದರೂ ಏನು ಎಂಬುದು ಬೆಳಕಿಗೆ ಬಂದಿಲ್ಲ…

ಉತ್ತರ ಪ್ರದೇಶದ ಲಂಖೀಂಪು ಖೇರಿಯಲ್ಲಿ ಪ್ರತಿಭಟನಾಕಾರ ರೈತರು ಮತ್ತು ಬಿಜೆಪಿ  ಕಾರ್ಯಕರ್ತರ ನಡುವಿನ ಸಂಘರ್ಷಣೆಯಲ್ಲಿ ಸುಮಾರು ಎಂಟು ಮಂದಿ ರೈತರು ಕಾರ್ಯಕರ್ತರು ಮೃತಪಟ್ಟಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ…ಇನ್ನು ಘಟನಾ ಸ್ಥಳಕ್ಕೆ  ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಭೇಟಿ ನೀಡದ ಸಂದರ್ಭದಲ್ಲಿ  ಅವರನ್ನು ಮಾರ್ಗ ಮಧ್ಯದಲ್ಲೇ ತಡೆದು ಅವರನ್ನು ಬಂಧಿಸಲಾಗಿದೆ ಎಂದು ಕಾಂಗ್ರೆಸ್‌ ಟ್ವೀಟ್‌ ರ್‌ ನಲ್ಲಿ ಹೇಳಿಕೊಂಡಿದೆ…

ಈ  ಕುರಿತು  ಪೊಲೀಸರು ಮತ್ತು ಪ್ರಿಯಾಂಕ ನಡುವೆ  ನಡೆದಿರು ಮಾತಿನ ಚಕಮಕಿಯನ್ನು ಕಾಂಗ್ರೆಸ್‌  ಸೋಶಿಯಲ್‌ ಮೀಡಿಯಾ ಗಳಲ್ಲಿ ಶೇರ್‌ ಮಾಡಿಕೊಂಡಿದೆ…ನೀವು ಸರ್ಕಾರವನ್ನು ರಕ್ಷಿಸುತ್ತಿದ್ದೀರಿ. ನೀವು ನನಗೆ ಕಾನೂನು ವಾರಂಟ್, ಕಾನೂನು ಆಧಾರವನ್ನು ನೀಡಿ, ಇಲ್ಲದಿದ್ದರೆ ನಾನು ಇಲ್ಲಿಂದ ಕದಲುವುದಿಲ್ಲ ಎಂದು ವಿಡಿಯೋದಲ್ಲಿ ಪ್ರಿಯಾಂಕ ಗಾಂಧಿ ವಾಗ್ವಾದ ನಡೆಸಿದ್ದಾರೆ… ನೀವು ನನ್ನನ್ನು ಬಂಧಿಸಿ ಕಾರಿನಲ್ಲಿ ಕೂರಿಸಿದರೆ ನಾನು ನಿಮ್ಮ ಅಪಹರಣದ ಆರೋಪ ಹೊರಿಸುತ್ತೇನೆ ಮತ್ತು ಆರೋಪವು ಪೊಲೀಸರ ಮೇಲೆ ಆಗುವುದಿಲ್ಲ ನಿಮ್ಮ ಮೇಲೆ ಮಾಡುತ್ತೇನೆಎಂದು ಪ್ರಿಯಾಂಕಾ ಪೋಲೀಸ್ ಅಧಿಕಾರಿಯೊಬ್ಬರಿಗೆ ಪ್ರಿಯಾಂಕ ಗಾಂಧಿ ವಾದ್ರಾ ಹೇಳಿದ್ದಾರೆ.

 

Please follow and like us:

Leave a Reply

Your email address will not be published. Required fields are marked *

Next Post

“ಮರಿರಾಜಹುಲಿ”ಗೆ ಇಲ್ಲ ಉಸ್ತುವಾರಿ ಭಾಗ್ಯ

Mon Oct 4 , 2021
ಸಿಂದಗಿ ಮತ್ತು ಹಾನಗಲ್‌ ಉಪಚುನಾವಣೆಯ ಹಿನ್ನೆಲೆಯಲ್ಲಿ ಹಾನಗಲ್‌ ಮತ್ತು ಸಿಂದಗಿ ಕ್ಷೇತ್ರಕ್ಕೆ ಚುನಾವಣಾ ಉಸ್ತುವಾರಿಗಳನ್ನು ನೇಮಕ ಮಾಡಲಾಗಿದೆ. ಚುನಾವನಾ ಉಸ್ತುವಾರಿಗಳ ಆಯ್ಕೆಯಲ್ಲಿ ಬಿ.ವೈ ವಿಜಯೇಂದ್ರನನ್ನು ಕೈಬಿಟ್ಟಿರುವುದು, ಈಗಾಗಲೇ ಹಲವು ಅನುಮಾನಗಳು ಹುಟ್ಟಿಹಾಕಿಕೊಂಡಿವೆ… ರಾಜ್ಯದಲ್ಲಿ  ಬಿಜೆಪಿ ಅಧಿಕಾರಕ್ಕೆ  ಬಂದ ನಂತರ ವಿಜಯೇಂದ್ರ ಚುನಾವಣೆಯ ಉಸ್ತುವಾರಿ ವಹಿಸಿಕೊಂಡು ಗೆಲ್ಲಲು ಸಾಧ್ಯವಿಲ್ಲದ ಕ್ಷೇತ್ರಗಳಲ್ಲೀಯೂ ಪಕ್ಷವನ್ನು ಸಂಘಟಿಸಿ ಅಭ್ಯಾರ್ಥಿಗಳ ಗೆಲುವಿನ ಕಾರಣೀಭೂತರಾಗಿದ್ದಾ ವಿಜಯೇಂದ್ರನ್ನು ಚುನಾವಣಾ ಉಸ್ತುವಾರಿಯಿಂದ ಕೈ ಬಿಟ್ಟಿರುವುದು ಭಾರಿ ಚರ್ಚೆಗೆ ಗ್ರಾಸ ವಾಗಿದೆ.ಅಕ್ಟೋಬರ್‌  30ರಂದು […]

Advertisement

Wordpress Social Share Plugin powered by Ultimatelysocial