ವಾರ್ಷಿಕವಾಗಿ 1 ಮಿಲಿಯನ್ ಇವಿ ಸ್ಕೂಟರ್ ಉತ್ಪಾದನಾ ಯೋಜನೆ ಸಿದ್ದಪಡಿಸಿದ ಎಥರ್ ಎನರ್ಜಿ

ಪ್ರೀಮಿಯಂ ಇವಿ ಸ್ಕೂಟರ್ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಎಥರ್ ಎನರ್ಜಿ ಕಂಪನಿಯು ಮಾರುಕಟ್ಟೆಯಲ್ಲಿನ ಬೇಡಿಕೆ ಪೂರೈಕೆಗಾಗಿ ಹೊಸ ಯೋಜನೆಗಳನ್ನು ರೂಪಿಸುತ್ತಿದ್ದು, ಕಂಪನಿಯು ಭವಿಷ್ಯ ಯೋಜನೆಗಳಿಗಾಗಿ ಭಾರೀ ಪ್ರಮಾಣದ ಹೂಡಿಕೆಗೆ ಸಿದ್ದವಾಗುತ್ತಿದೆ.ಹೊಸ ಯೋಜನೆಗೆ ಪೂರಕವಾಗಿ ಕಂಪನಿಯು ಉತ್ಪಾದನಾ ಸಾಮರ್ಥ್ಯವನ್ನು ಸಹ ಹೆಚ್ಚಿಸಲು ನಿರ್ಧರಿಸಿದ್ದು, ಇದಕ್ಕಾಗಿ ಕಂಪನಿಯು ಎರಡನೇ ಉತ್ಪಾದನಾ ಘಟಕ ತೆರೆಯಲು ಸಿದ್ದವಾಗಿದೆ.ಎಥರ್ ಕಂಪನಿಯು ಸದ್ಯ ತಮಿಳುನಾಡಿನ ಹೊಸೂರಿನಲ್ಲಿ ವಾರ್ಷಿಕವಾಗಿ 1.20 ಲಕ್ಷ ಸ್ಕೂಟರ್‌ಗಳ ಉತ್ಪಾದನೆ ಮಾಡಬಹುದಾದ ಸಾಮರ್ಥ್ಯದ ಇವಿ ಘಟಕವನ್ನು ಹೊಂದಿದ್ದು, ಇದೀಗ ಕಂಪನಿಯು ಎರಡನೇ ಘಟಕವನ್ನು ಸಹ ಹೊಸೂರಿನಲ್ಲಿಯೇ ತೆರೆಯಲು ನಿರ್ಧರಿಸಿದೆ.ಎರಡನೇ ಘಟಕ ನಿರ್ಮಾಣ ಕಾರ್ಯ ಈಗಾಗಲೇ ಆರಂಭಗೊಂಡಿದ್ದು, ಈ ವರ್ಷದ ಕೊನೆಯಲ್ಲಿ ಕಾರ್ಯಾರಂಭ ನಡೆಸಲಿರುವ ಹೊಸ ಘಟಕವು ವಾರ್ಷಿಕವಾಗಿ 2.80 ಲಕ್ಷ ಯುನಿಟ್ ಉತ್ಪಾದನಾ ಸಾಮರ್ಥ್ಯ ಹೊಂದಿರಲಿದೆ ಎನ್ನಲಾಗಿದೆ.ಎಥರ್ ಕಂಪನಿಯು ಎರಡು ಘಟಕಗಳ ಮೂಲಕ ವಾರ್ಷಿಕವಾಗಿ 4 ಲಕ್ಷ ಯುನಿಟ್ ಇವಿ ಸ್ಕೂಟರ್ ಉತ್ಪಾದನಾ ಸಾಮಾರ್ಥ್ಯ ಹೊಂದಿರಲಿದ್ದು, 2025ರ ವೇಳೆಗೆ ಮತ್ತಷ್ಟು ಹೂಡಿಕೆಯೊಂದಿಗೆ ವಾರ್ಷಿಕವಾಗಿ ಒಟ್ಟು 10 ಲಕ್ಷ ಯುನಿಟ್ ಉತ್ಪಾದನೆ ಮಾಡಬಹುದಾದ ಸಾಧ್ಯತೆಗಳ ಕುರಿತು ಯೋಜನೆ ರೂಪಿಸುತ್ತಿದೆ.ವಾರ್ಷಿಕವಾಗಿ 10 ಲಕ್ಷ ಯುನಿಟ್ ಉತ್ಪಾದನೆಗಾಗಿ ಹೂಡಿಕೆ ಕೂಡಾ ಪ್ರಮುಖವಾಗಿದ್ದು, ಈಗಾಗಲೇ ಪ್ರಮುಖ ಕಂಪನಿಗಳಿಂದ ಭಾರೀ ಪ್ರಮಾಣದ ಹೂಡಿಕೆ ಪಡೆದುಕೊಂಡಿರುವ ಎಥರ್ ಕಂಪನಿಯು ಭವಿಷ್ಯದಲ್ಲಿ ಇನ್ನಷ್ಟು ಹೆಚ್ಚಳ ಮಾಡಲು ನಿರ್ಧರಿಸಿದೆ.2025ರ ವೇಳೆಗೆ ಇವಿ ವಾಹನ ಬೇಡಿಕೆ ಶೇ.20ಕ್ಕೆ ಏರಿಕೆಯಾಗುವ ಎಲ್ಲಾ ಸಾಧ್ಯತೆ ಕುರಿತು ಮಾರುಕಟ್ಟೆ ಅಧ್ಯಯನ ನಡೆಸಿರುವ ಎಥರ್ ಕಂಪನಿಯು ಇವಿ ವಾಹನ ಹೆಚ್ಚಳಕ್ಕೆ ತಕ್ಕಂತೆ ಚಾರ್ಜಿಂಗ್ ನಿಲ್ದಾಣಗಳ ಸಂಖ್ಯೆಯನ್ನು ಸಹ ಹೆಚ್ಚಿಸುತ್ತಿದೆ.ಎಥರ್ ಕಂಪನಿಯು ಸದ್ಯ ಮಾರುಕಟ್ಟೆಯಲ್ಲಿ 450 ಪ್ಲಸ್ ಮತ್ತು 450ಎಕ್ಸ್ ಇವಿ ಸ್ಕೂಟರ್ ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, ಶೀಘ್ರದಲ್ಲೇ ಮತ್ತಷ್ಟು ಹೊಸ ಉತ್ಪನ್ನಗಳ ಬಿಡುಗಡೆಗೆ ಸಿದ್ದವಾಗುತ್ತಿದೆ.ದುಬಾರಿ ಬೆಲೆ ನಡುವೆಯೂ ಗ್ರಾಹಕರಿಂದ ಉತ್ತಮ ಪ್ರಕ್ರಿಯೆ ಪಡೆದುಕೊಳ್ಳುತ್ತಿರುವ ಎಥರ್ ಎನರ್ಜಿ ಕಂಪನಿಯು ಮುಂಬರುವ ಕೆಲ ತಿಂಗಳಿನಲ್ಲಿ ಮತ್ತಷ್ಟು ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದ್ದು, ಕಂಪನಿಯು ಇದುವರೆಗೂ ರೂ. 650 ಕೋಟಿ ಮೌಲ್ಯದ ಇವಿ ಸ್ಕೂಟರ್ ಉದ್ಯಮ ವ್ಯವಹಾರ ಕೈಗೊಂಡಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಾರುಕಟ್ಟೆಯಲ್ಲಿ ಮೋಟೋರೋಲಾ ಬಿಡುಗಡೆ;

Tue Feb 1 , 2022
ಫೋನಿನ ವಿಶೇಷತೆ ಬಗ್ಗೆ ಕಂಪನಿ ಯಾವುದೇ ಅಧಿಕೃತ ಮಾಹಿತಿ ಹೊರಹಾಕಿಲ್ಲ. ಆದರೆ, ಮೂಲಗಳಿಂದ ಕೆಲ ವಿಚಾರಗಳು ತಿಳಿದುಬಂದಿದೆ. ಅದರ ಪ್ರಕಾರ ಮೋಟೋ ಎಡ್ಜ್ 30 ಪ್ರೊ ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟಪ್, ಅತ್ಯುತ್ತಮ ಬ್ಯಾಟರಿ ಸೇರಿದಂತೆ ಆಕರ್ಷಕ ಫೀಚರ್​ಗಳಿಂದ ಕೂಡಿದೆ. ಕಳೆದ ವರ್ಷ 2021 ರಲ್ಲಿ ಮಾರುಕಟ್ಟೆಗೆ ಅತಿ ಹೆಚ್ಚು ಸ್ಮಾರ್ಟ್​ಫೋನ್​ಗಳನ್ನು  ಪರಿಚಯಿಸಿದ್ದ ಪ್ರಸಿದ್ಧ ಮೋಟೋರೊಲಾ ಕಂಪನಿ ಈ ವರ್ಷ ಕೂಡ ಭಿನ್ನ ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುವತ್ತ […]

Advertisement

Wordpress Social Share Plugin powered by Ultimatelysocial