ಮಾರುಕಟ್ಟೆಯಲ್ಲಿ ಮೋಟೋರೋಲಾ ಬಿಡುಗಡೆ;

ಫೋನಿನ ವಿಶೇಷತೆ ಬಗ್ಗೆ ಕಂಪನಿ ಯಾವುದೇ ಅಧಿಕೃತ ಮಾಹಿತಿ ಹೊರಹಾಕಿಲ್ಲ. ಆದರೆ, ಮೂಲಗಳಿಂದ ಕೆಲ ವಿಚಾರಗಳು ತಿಳಿದುಬಂದಿದೆ. ಅದರ ಪ್ರಕಾರ ಮೋಟೋ ಎಡ್ಜ್ 30 ಪ್ರೊ ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟಪ್, ಅತ್ಯುತ್ತಮ ಬ್ಯಾಟರಿ ಸೇರಿದಂತೆ ಆಕರ್ಷಕ ಫೀಚರ್​ಗಳಿಂದ ಕೂಡಿದೆ.

ಕಳೆದ ವರ್ಷ 2021 ರಲ್ಲಿ ಮಾರುಕಟ್ಟೆಗೆ ಅತಿ ಹೆಚ್ಚು ಸ್ಮಾರ್ಟ್​ಫೋನ್​ಗಳನ್ನು  ಪರಿಚಯಿಸಿದ್ದ ಪ್ರಸಿದ್ಧ ಮೋಟೋರೊಲಾ ಕಂಪನಿ ಈ ವರ್ಷ ಕೂಡ ಭಿನ್ನ ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುವತ್ತ ಚಿನ್ನ ನೆಟ್ಟಿದೆ. ಈಗಾಗಲೇ 200 ಮೆಗಾಫಿಕ್ಸೆಲ್ ಕ್ಯಾಮೆರಾ ಸ್ಮಾರ್ಟ್​ಫೋನ್ ಅನ್ನು ತಯಾರು ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಇದರ ನಡುವೆ ಇದೀಗ ಮತ್ತೊಂದು ಹೊಸ ಫೋನನ್ನು ಮಾರುಕಟ್ಟೆಗೆ ಪರಿಚಯಿಸಲಿ ತಯಾರಾಗಿದೆ. ಬಿಡುಗಡೆಗೂ ಮುನ್ನವೇ ಈ ಸ್ಮಾರ್ಟ್​ಫೋನ್ ಮಾರುಕಟ್ಟೆಯಲ್ಲಿ ನಾನಾ ವಿಚಾರಕ್ಕೆ ಸಖತ್ ಸೌಂಡ್ ಮಾಡುತ್ತಿದೆ. ಈ ಫೋನ್ ಮೋಟೋ ಎಡ್ಜ್‌ ಎಕ್ಸ್​30 ಸ್ಮಾರ್ಟ್‌ಫೋನಿನ ರಿಬ್ರಾಂಡೆಡ್ ವರ್ಷನ್ ಎಂದು ಹೇಳಲಾಗಿದೆ. ಆದರೆ, ಡಿಸೈನ್ ಮತ್ತು ಕೆಲವು ವಿಚಾರಗಳಲ್ಲಿ ವ್ಯತ್ಯಾಸವಿದೆಯಂತೆ. ಮೋಟೋ ಎಡ್ಜ್ 30 ಪ್ರೊ ಸ್ಮಾರ್ಟ್​ಫೋನ್ ಇದೇ ತಿಂಗಳು ಭಾರತೀಯ ಮಾರುಕಟ್ಟೆಗೆ ಅಪ್ಪಳಿಸಲಿದೆ.

ಈ ಫೋನಿನ ವಿಶೇಷತೆ ಬಗ್ಗೆ ಕಂಪನಿ ಯಾವುದೇ ಅಧಿಕೃತ ಮಾಹಿತಿ ಹೊರಹಾಕಿಲ್ಲ. ಆದರೆ, ಮೂಲಗಳಿಂದ ಕೆಲ ವಿಚಾರಗಳು ತಿಳಿದುಬಂದಿದೆ. ಅದರ ಪ್ರಕಾರ ಮೋಟೋ ಎಡ್ಜ್ 30 ಪ್ರೊ ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟಪ್, ಅತ್ಯುತ್ತಮ ಬ್ಯಾಟರಿ ಸೇರಿದಂತೆ ಆಕರ್ಷಕ ಫೀಚರ್​ಗಳಿಂದ ಕೂಡಿದೆ. 2400×1080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.7 ಇಂಚಿನ OLED ಫುಲ್‌ ಹೆಚ್‌ಡಿ+ ಡಿಸ್‌ಪ್ಲೇ ಹೊಂದಿದೆ. ಇನ್ನು ಈ ಡಿಸ್‌ಪ್ಲೇ 144Hz ನ ಹೆಚ್ಚಿನ ರಿಫ್ರೆಶ್ ರೇಟ್‌ ಮತ್ತು 576Hz ಟಚ್ ಸ್ಯಾಂಪ್ಲಿಂಗ್ ರೇಟ್​ನಿಂದ ಕೂಡಿದೆ.

ಕ್ವಾಲ್‌ಕಾಮ್ ಸ್ನಾಪ್‌ಡ್ರಾಗನ್ 8 Gen1 ಪ್ರೊಸೆಸರ್‌ ಅನ್ನು ಹೊಂದಿದೆ. ಇದು 12 OS ನಲ್ಲಿ MyUI 3.0 ಕ್ಲೀನ್ ಸ್ಟಾಕ್ UI ಜೊತೆಗೆ ರನ್ ಆಗುತ್ತದೆ. ಜೊತೆಗೆ 12GB RAM ಮತ್ತು 512GB ಇಂಟರ್‌ ಸ್ಟೋರೇಜ್‌ ಅನ್ನು ಪಡೆದುಕೊಂಡಿದೆ. ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟಪ್‌ನೊಂದಿಗೆ ಬರುತ್ತದೆ. ಇದರಲ್ಲಿ ಪ್ರೈಮರಿ ಕ್ಯಾಮೆರಾ ಡ್ಯುಯಲ್ 50MP OV50A40 ಸೆನ್ಸಾರ್‌, ಎರಡನೇ ಕ್ಯಾಮೆರಾ 5MP ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 2MP ಸೆನ್ಸಾರ್‌ ಅನ್ನು ಒಳಗೊಂಡಿದೆ. ಇದಲ್ಲದೆ 60 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಹೊಂದಿದೆ.

ಮೋಟೋ ಎಡ್ಜ್ 30 ಪ್ರೊ ಸ್ಮಾರ್ಟ್‌ಫೋನ್‌ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 68W ವೇಗದ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ ಮಾರುಕಟ್ಟೆಗೆ ಬರಲಿದೆಯಂತೆ. ಈ ಫೋನ್ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್‌ನೊಂದಿಗೆ ಬರುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 6, ಬ್ಲೂಟೂತ್ v5.2, GPS/ A-GPS, NFC, ಮತ್ತು USB ಟೈಪ್-C ಪೋರ್ಟ್ ಸೇರಿವೆ. ಭಾರತದಲ್ಲಿ ಇದರ ನಿಖರ ಬೆಲೆ ಬಹಿರಂಗಗೊಂಡಿಲ್ಲ. ಆದರೆ, ಲೀಕ್ ಆಗಿರುವ ಮಾಹಿತಿ ಪ್ರಕಾರ ಇದರ ಬೆಲೆ ಸುಮಾರು 38,000 ರೂ. ಇರಬಹುದೆಂದು ಅಂದಾಜಿಸಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅತ್ಯಂತ ವೇಗದ ಸೂಪರ್‌ಕಂಪ್ಯೂಟರ್ :ಮೆಟಾ

Tue Feb 1 , 2022
ಸೋಶಿಯಲ್ ಮೀಡಿಯಾದಲ್ಲಿ (Social media) ಕ್ರಾಂತಿ ಮಾಡಿರುವ ಮೆಟಾ ಕಂಪನಿ  ಪ್ರಸ್ತುತ ಮತ್ತೊಂದು ಮೈಲಿಗಲ್ಲು ಸಾಧಿಸಲು ಸಜ್ಜಾಗಿದೆ. ಸೋಶಿಯಲ್ ಮೀಡಿಯಾ ಕಾಂಗ್ಲೋಮರೇಟ್ ಮೆಟಾ ಕಂಪನಿಯು “AI ಸೂಪರ್‌ಕಂಪ್ಯೂಟರ್” (AI supercomputer) ಅನ್ನು ನಿರ್ಮಿಸಲು ಮುಂದಾಗಿದೆ. ಯಂತ್ರ ಕಲಿಕೆ ವ್ಯವಸ್ಥೆಗಳಿಗೆ ತರಬೇತಿ ನೀಡಲು ವಿಶೇಷವಾಗಿ ವಿನ್ಯಾಸಗೊಳಿಸಲಾದ ಅತಿ ಹೆಚ್ಚಿನ ವೇಗದ ಕಂಪ್ಯೂಟರ್ ಇದಾಗಿದ್ದು, 2022ರಲ್ಲಿ ವಿಶ್ವದ ಅತ್ಯಂತ ವೇಗದ ಕಂಪ್ಯೂಂಟರ್ ಆಗಿ ಹೊರಬರಲಿದೆ ಎಂದು ಕಂಪನಿ ಹೇಳಿದೆ. . ಮೆಟಾ ಸಿಇಒ […]

Advertisement

Wordpress Social Share Plugin powered by Ultimatelysocial