ತರಗತಿಯಲ್ಲಿ ಪಾಠ ಕೇಳೋದು ಬಿಟ್ಟು ಈ ವಿದ್ಯಾರ್ಥಿನಿ ಏನು ಮಾಡಿದ್ದಾಳೆ ನೋಡಿ, ಆದ್ರೂ ಟೀಚರ್ ಖುಷ್

ಸಾಮಾನ್ಯವಾಗಿ ನಾವು ನಮ್ಮ ವಿದ್ಯಾರ್ಥಿ ಜೀವನದಲ್ಲಿದ್ದಾಗ ತರಗತಿಗಳಲ್ಲಿ (Class) ಕುಳಿತು ಸ್ನೇಹಿತರೊಂದಿಗೆ ಸೇರಿಕೊಂಡು ಹರಟೆ ಹೊಡೆಯುತ್ತಾ, ಮಾತಿನಲ್ಲಿ ಒಬ್ಬರ ಕಾಲನ್ನು ಇನ್ನೊಬ್ಬರು ಎಳೆದುಕೊಳ್ಳುತ್ತಾ, ಕೊನೆಯ ಸಾಲಿನ ಬೆಂಚ್ ಮೇಲೆ ಕುಳಿತು ಮೇಷ್ಟ್ರು ಪಾಠ ಮಾಡುವಾಗ ಸುಮ್ಮನೆ ವಿಚಿತ್ರವಾದ ಶಬ್ದ ಮಾಡುವುದು, ಬೋರ್ಡ್ (Board) ಮೇಲೆ ಕಾಗದದಿಂದ ರಾಕೆಟ್ ಮಾಡಿ ಎಸೆಯುವುದು – ಹೀಗೆ ಅನೇಕ ರೀತಿಯ ತುಂಟಾಟಗಳು ಮತ್ತು ತರ್ಲೆ ಕೆಲಸಗಳನ್ನು ಮಾಡಿರುತ್ತೇವೆ.

ಎಷ್ಟೋ ಸಾರಿ ಇಂತಹ ತರ್ಲೆಗಳನ್ನು ಮಾಡಿ ಸಿಕ್ಕಿ ಹಾಕಿಕೊಂಡು ಶಿಕ್ಷಕರಿಂದ (Teachers) ಶಿಕ್ಷೆಗೆ (Punishment) ಗುರಿಯಾಗಿರುತ್ತೇವೆ. ಅದರಲ್ಲೂ ಯಾರಾದರೂ ವಿದ್ಯಾರ್ಥಿಗಳು ಈ ಚಿತ್ರ ಬಿಡಿಸುವುದರಲ್ಲಿ ನಿಪುಣರಾಗಿದ್ದರೆ, ಅವರು ಪಾಠ ಹೇಳಬೇಕಾದರೆ, ಆ ಪಾಠವನ್ನು ಕೇಳದೆ ಆ ಮೇಷ್ಟ್ರುಗಳ ಭಾವಚಿತ್ರವನ್ನು ಹಾಗೆಯೇ ತಮ್ಮ ನೋಟ್ ಬುಕ್ಕಿನಲ್ಲಿರುವ ಬಿಳಿ ಹಾಳೆಯ ಮೇಲೆ ಬಿಡಿಸುತ್ತಾರೆ.

ಕೆಲವೊಮ್ಮೆ ಅವರನ್ನು ತುಂಬಾನೇ ತಮಾಷೆಯಾಗಿ ವ್ಯಂಗ್ಯವಾಗಿ ತೋರಿಸಲು ಕಾರ್ಟೂನ್‌ಗಳನ್ನು ಸಹ ಬಿಡಿಸುವುದುಂಟು. ಕೆಲವೊಮ್ಮೆ ಇಂತಹ ಚಿತ್ರವನ್ನು ತಮ್ಮ ವಿದ್ಯಾರ್ಥಿಗಳು ಬಿಡಿಸಿದ್ದಾರೆ ಎಂದು ಖುಷಿ ಪಡುವವರು ಇರುತ್ತಾರೆ. ಕೆಲವರಿಗೆ ಇದನ್ನೆಲ್ಲಾ ನೋಡಿ ಕೆಟ್ಟ ಕೋಪ ಬಂದು ವಿದ್ಯಾರ್ಥಿಗಳಿಗೆ ಬೈಯಲು ಶುರು ಮಾಡುತ್ತಾರೆ.

ವೈರಲ್ ಆಯ್ತು ವಿಡಿಯೋ

ಇಲ್ಲಿಯೂ ಸಹ ಇಂತಹದೇ ಒಂದು ಘಟನೆ ನಡೆದಿದ್ದು, ಉಪನ್ಯಾಸಕಿ ತನ್ನ ವಿದ್ಯಾರ್ಥಿ ಮಾಡಿದ ಕೆಲಸಕ್ಕೆ ಹೇಗೆ ಪ್ರತಿಕ್ರಿಯಿಸಿದ್ದಾರೆ ನೀವೇ ನೋಡಿ. ಇತ್ತೀಚೆಗೆ ಸಾಮಾಜಿಕ ಮಾಧ್ಯಮವಾದ ಇನ್‌ಸ್ಟಾಗ್ರಾಮ್‌ನಲ್ಲಿ ಭಾರ್ಗವಿ ಎಂಬ ಬಳಕೆದಾರರೊಬ್ಬರು ಈ ವಿಡಿಯೋವನ್ನು ಅಪ್ಲೋಡ್ ಮಾಡಿದ್ದಾರೆ.

8,300 ಕ್ಕೂ ಹೆಚ್ಚು ಫಾಲೋವರ್ಸ್

ಅವರು ಆಂಧ್ರ ಪ್ರದೇಶದ ವಿಶಾಖಪಟ್ಟಣದ ಮೂಲದ ಒಬ್ಬ ಕಲಾವಿದೆಯಾಗಿದ್ದು, ಪ್ರಸ್ತುತ ಅವರ ಪುಟದಲ್ಲಿ 8,300 ಕ್ಕೂ ಹೆಚ್ಚು ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ಅವರು ತನ್ನ ಕಲಾ ತುಣುಕುಗಳಿಗೆ ಮೀಸಲಾದ ಯೂಟ್ಯೂಬ್ ಚಾನೆಲ್ ಅನ್ನು ಸಹ ಹೊಂದಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ಲೋಡ್ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

COVID:ಭಾರತದಲ್ಲಿ 1,938 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ!

Thu Mar 24 , 2022
ಗುರುವಾರ ನವೀಕರಿಸಿದ ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿಯ ಪ್ರಕಾರ, ಒಂದು ದಿನದಲ್ಲಿ 1,938 ಹೊಸ ಕರೋನವೈರಸ್ ಸೋಂಕುಗಳು ವರದಿಯಾಗುವುದರೊಂದಿಗೆ, ಭಾರತದ ಒಟ್ಟು ಪ್ರಕರಣಗಳ ಸಂಖ್ಯೆ 4,30,14,687 ಕ್ಕೆ ಏರಿದೆ, ಆದರೆ ಸಕ್ರಿಯ ಪ್ರಕರಣಗಳು 22,427 ಕ್ಕೆ ಇಳಿದಿದೆ. ದೈನಂದಿನ 67 ಸಾವುಗಳೊಂದಿಗೆ ಸಾವಿನ ಸಂಖ್ಯೆ 5,16,672 ಕ್ಕೆ ಏರಿದೆ ಎಂದು ಬೆಳಿಗ್ಗೆ 8 ಗಂಟೆಗೆ ನವೀಕರಿಸಿದ ಡೇಟಾ ತಿಳಿಸಿದೆ. ಸಕ್ರಿಯ ಪ್ರಕರಣಗಳು ಒಟ್ಟು ಸೋಂಕುಗಳಲ್ಲಿ 0.05 ಪ್ರತಿಶತವನ್ನು ಒಳಗೊಂಡಿವೆ, ಆದರೆ […]

Advertisement

Wordpress Social Share Plugin powered by Ultimatelysocial