‘ಕಸ್ತೂರಿ ಮಹಲ್‌’ನಲ್ಲಿ ಕನಸು ನನಸಾಯ್ತು: ಶಾನ್ವಿ ಶ್ರೀವಾಸ್ತವ್‌

ನಟಿ ಶಾನ್ವಿ ಶ್ರೀವಾಸ್ತವ್‌ ಈಗ ಖುಷಿಯ ಮೂಡ್‌ನ‌ಲ್ಲಿದ್ದಾರೆ. ಇಂಥದ್ದೊಂದು ಖುಷಿ ಕಾರಣ ಅವರ ಬಹು ವರ್ಷದ ಕನಸು ನನಸಾಗಿರುವುದು. ಅಂದಹಾಗೆ, ಆ ಕನಸು ನನಸಾಗಿರುವುದು “ಕಸ್ತೂರಿ ಮಹಲ್‌’ ಸಿನಿಮಾದ ಕಾರಣದಿಂದ.

ಹೌದು, ಹಿರಿಯ ನಿರ್ದೇಶಕ ದಿನೇಶ್‌ ಬಾಬು ನಿರ್ದೇಶನದ “ಕಸ್ತೂರಿ ಮಹಲ್‌’ ಚಿತ್ರದಲ್ಲಿ ಶಾನ್ವಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಇಡೀ ಸಿನಿಮಾ ಶಾನ್ವಿ ಪಾತ್ರದ ಸುತ್ತ ನಡೆಯುತ್ತದೆ. ಮೊದಲ ಬಾರಿಗೆ ಮಹಿಳಾ ಪ್ರಧಾನ ಕಥೆ ಮತ್ತು ಪಾತ್ರವಿರುವ ಸಿನಿಮಾ ಸಿಕ್ಕಿರುವುದಕ್ಕೆ ಶಾನ್ವಿ ಫ‌ುಲ್‌ ಖುಷಿಯಾಗಿದ್ದಾರೆ.

ಈ ಬಗ್ಗೆ ಮಾತನಾಡುವ ಶಾನ್ವಿ, “ಎಲ್ಲರಿಗೂ ಗೊತ್ತಿರುವಂತೆ, ನಮ್ಮದು ಹೀರೋ ಸೆಂಟ್ರಿಕ್‌ ಸಿನಿಮಾ ಇಂಡಸ್ಟ್ರಿ. ಇಲ್ಲಿ ಬರುವ ಬಹುತೇಕ ಸಿನಿಮಾಗಳು ಹೀರೋ ಕೇಂದ್ರಿತವಾಗಿಯೇ ಬರುತ್ತವೆ. ಸಬ್ಜೆಕ್ಟ್ ಆಧಾರಿತ, ಹೀರೋಯಿನ್‌ ಕೇಂದ್ರಿತ ಸಿನಿಮಾಗಳ ಸಂಖ್ಯೆ ಇಲ್ಲಿ ಸ್ವಲ್ಪ ಕಡಿಮೆ. ಹಾಗಾಗಿ ಸಹಜವಾಗಿಯೇ ಪ್ರತಿಯೊಬ್ಬ ನಟಿಗೂ ಸಬ್ಜೆಕ್ಟ್ ಆಧಾರಿತ, ಮಹಿಳಾ ಕೇಂದ್ರಿತ ಸಿನಿಮಾಗಳನ್ನು ಮಾಡ್ಬೇಕು ಅಂಥ ಆಸೆ, ಕನಸು ಇದ್ದೇ ಇರುತ್ತೆ. ನನಗೂ ಕೆಲ ವರ್ಷಗಳಿಂದ ಅಂಥದ್ದೊಂದು ಕನಸಿತ್ತು. ಆ ಕನಸು “ಕಸ್ತೂರಿ ಮಹಲ್‌’ ಮೂಲಕ ನನಸಾಗುತ್ತಿದೆ’ ಎನ್ನುತ್ತಾರೆ ಶಾನ್ವಿ.

“ಕಸ್ತೂರಿ ಮಹಲ್‌’ ಸಸ್ಪೆನ್ಸ್‌, ಹಾರರ್‌, ಥ್ರಿಲ್ಲರ್‌ ಹೀಗೆ ಎಲ್ಲ ಥರದ ಎಲಿಮೆಂಟ್ಸ್‌ ಇರುವಂಥ ಸಿನಿಮಾ. ಈ ಥರದ ಸಿನಿಮಾ ಮಾಡೋದಕ್ಕೆ ಅವಕಾಶ ಸಿಗೋದು ತುಂಬ ಕಡಿಮೆ. ನಾನು ಇಲ್ಲಿಯವರೆಗೆ ಮಾಡಿದ ಸಿನಿಮಾಗಳಿಗಿಂತ ಸಂಪೂರ್ಣ ಡಿಫ‌ರೆಂಟ್‌ ಸಬ್ಜೆಕ್ಟ್, ಕ್ಯಾರೆಕ್ಟರ್‌ ಈ ಸಿನಿಮಾದಲ್ಲಿದೆ. ಇಡೀ ಟೀಮ್‌ ತುಂಬ ಪ್ಯಾಷನೇಟ್‌ ಆಗಿ ಇಂಥದ್ದೊಂದು ಸಿನಿಮಾ ಮಾಡಿದೆ. ತುಂಬ ಅಚ್ಚುಕಟ್ಟಾಗಿ “ಕಸ್ತೂರಿ ಮಹಲ್‌’ ಬಂದಿದೆ. ನಾನು ಕೂಡ ಸಿನಿಮಾ ರಿಲೀಸ್‌ ಆಗೋದನ್ನ ಕಾಯುತ್ತಿದ್ದೇನೆ’ ಎನ್ನುವುದು ಶಾನ್ವಿ ಮಾತು.

ಅಂದಹಾಗೆ, ಶಾನ್ವಿ ಅಭಿನಯದ “ಕಸ್ತೂರಿ ಮಹಲ್‌’ ಇದೇ ಮೇ. 13ಕ್ಕೆ ತೆರೆಗೆ ಬರುತ್ತಿದೆ. ಶಾನ್ವಿ ಅವರೊಂದಿಗೆ ಸ್ಕಂದ ಅಶೋಕ್‌, ಶ್ರುತಿ ಪ್ರಕಾಶ್‌, ರಂಗಾಯಣ ರಘು ಮೊದಲಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. “ಶ್ರೀ ಭವಾನಿ ಆರ್ಟ್ಸ್’ ಬ್ಯಾನರ್‌ನಲ್ಲಿ ರವೀಶ್‌ ಆರ್‌.ಸಿ ಈ ಸಿನಿಮಾವನ್ನ ನಿರ್ಮಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಪ್ರಧಾನಿ ಮೋದಿಯವರ 'ಮಾಸ್ಟರ್ಸ್ಟ್ರೋಕ್'ಗಳಿಂದ 45 ಕೋಟಿಗೂ ಹೆಚ್ಚು ಜನರು ಉದ್ಯೋಗ ಪಡೆಯುವ ಭರವಸೆ ಕಳೆದುಕೊಂಡಿದ್ದಾರೆ ಎಂದು ಹೇಳಿದ್ದ,ರಾಹುಲ್!

Tue Apr 26 , 2022
ನಿರುದ್ಯೋಗ ಸಮಸ್ಯೆಯ ಕುರಿತು ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದು, ಅವರ ಮಾಸ್ಟರ್ ಸ್ಟ್ರೋಕ್‌ನಿಂದಾಗಿ 45 ಕೋಟಿಗೂ ಹೆಚ್ಚು ಜನರು ಉದ್ಯೋಗ ಪಡೆಯುವ ಭರವಸೆಯನ್ನು ಕಳೆದುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಮೋದಿ ಅವರು 75 ವರ್ಷಗಳಲ್ಲಿ ಇಂತಹ ಮೊದಲ ಪ್ರಧಾನಿಯಾಗಿದ್ದಾರೆ ಎಂದು ಅವರು ಹೇಳಿದ್ದಾರೆ. “ಹೊಸ ಭಾರತದ ಹೊಸ ಘೋಷಣೆ — ‘ಹರ್ ಘರ್ ಬೇರೋಜೆಗಾರಿ, ಘರ್ ಘರ್ ಬೇರೋಜೆಗಾರಿ (ಪ್ರತಿ ಮನೆಯಲ್ಲೂ […]

Advertisement

Wordpress Social Share Plugin powered by Ultimatelysocial