ದೇವಸ್ಥಾನಗಳಿಗೆ ಅನುದಾನವನ್ನು ಬಿಡುಗಡೆ ಮಾಡಲಾಗುವುದು ಎಂದು ಸಚಿವೆ ಶಶಿಕಲಾ ಜೊಲ್ಲೆ ವಿಧಾನಸಭೆಗೆ ತಿಳಿಸಿದರು.!

ಬೆಂಗಳೂರು,ಮಾ.7- ಹಣಕಾಸಿನ ಲಭ್ಯತೆ ನೋಡಿಕೊಂಡು ಮುಜರಾಯಿ ವ್ಯಾಪ್ತಿಗೆ ಒಳಪಡುವ ದೇವಸ್ಥಾನಗಳಿಗೆ ಅನುದಾನವನ್ನು ಬಿಡುಗಡೆ ಮಾಡಲಾಗುವುದು ಎಂದು ಸಚಿವೆ ಶಶಿಕಲಾ ಜೊಲ್ಲೆ ವಿಧಾನಸಭೆಗೆ ತಿಳಿಸಿದರು.ಪ್ರಶ್ನೋತ್ತರ ಅವಯಲ್ಲಿ ಶಾಸಕ ಆನಂದ್ ಸಿದ್ದುನಾಮೆಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಬಹುತೇಕ ಶಾಸಕರು ತಮ್ಮ ಕ್ಷೇತ್ರ ವ್ಯಾಪ್ತಿಯ ದೇವಸ್ಥಾನಗಳಿಗೆ ಅನುದಾನ ಬಿಡುಗಡೆ ಮಾಡಬೇಕೆಂದು ಮನವಿ ಮಾಡಿದ್ದಾರೆ.ಹಣಕಾಸಿನ ಲಭ್ಯತೆ ನೋಡಿಕೊಂಡು ಅನುದಾನ ಬಿಡುಗಡೆ ಮಾಡಲಾಗುವುದು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜೊತೆಯೂ ೀ ಕುರಿತು ಚರ್ಚಿಸಿ ಹಣ ಬಿಡುಗಡೆ ಮಾಡುವ ಆಶ್ವಾಸನೆ ನೀಡಿದರು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ದೇವಸ್ಥಾನಗಳಿಗೆ ಹೆಚ್ಚಿನ ಅನುದಾನವನ್ನು ನೀಡಿದೆ.ಪ್ರಸಕ್ತ ಸಾಲಿನ ಬಜೆಟ್‍ನಲ್ಲೂ ದೇವಸ್ಥಾನಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸಿಎಂ ವಿಶೇಷ ಅನುದಾನ ಪ್ರಕಟಿಸಿದ್ದಾರೆ. ಇದನ್ನು ಬಳಸಿಕೊಂಡು ದೇವಾಲಯಗಳ ಅಭಿವೃದ್ದಿಗೆ ಸರ್ಕಾರ ತುರ್ತು ಕ್ರಮ ಕೈಗೊಳ್ಳಲಿದೆ ಎಂದರು. ಈ ವೇಳೆ ಶಾಸಕ ಪ್ರಸಾದ್ ಅಬ್ಬಯ್ಯ ಮಧ್ಯಪ್ರವೇಶಿಸಿ ಕಳೆದ ಎರಡು ವರ್ಷಗಳ ಅವಯಲ್ಲಿ ನಾನು ನನ್ನ ಕ್ಷೇತ್ರ ವ್ಯಾಪ್ತಿಗೆ ಬರುವ ದೇವಸ್ಥಾನಗಳಿಗೆ ಅನುದಾನ ಬಿಡುಗಡೆ ಮಾಡುವಂತೆ ಪ್ರಸ್ತಾವನೆ ಸಲ್ಲಿಸಿದ್ದೇನೆ.ಕೆಲವು ಕ್ಷೇತ್ರಗಳಿಗೆ ಮಾತ್ರ ಬಿಡುಯಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜೊಲ್ಲೆ, ಶಾಸಕರು ಪ್ರಸ್ತಾವನೆ ಮಾಡಿರುವುದು ನಿಜ. ಶೀಘ್ರದಲ್ಲೇ ಅನುದಾನವನ್ನು ಬಿಡುಗಡೆ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ತಾಪ್ಸಿ: ಅವರು ನನ್ನ ಮೈಕಟ್ಟು ಪ್ರಶ್ನಿಸಿದಾಗ ಸಮಸ್ಯೆಗಳಿದ್ದವು!

Mon Mar 7 , 2022
ಕಳೆದ ವರ್ಷ ರಶ್ಮಿ ರಾಕೆಟ್‌ನ ಪೋಸ್ಟರ್ ಬಿಡುಗಡೆಯಾದ ದಿನಗಳು, ತಾಪ್ಸಿ ಪನ್ನು ಅವರ ಕೆತ್ತಲಾದ ದೇಹವು ವಿಎಫ್‌ಎಕ್ಸ್‌ನ ಫಲಿತಾಂಶ ಎಂದು ಟ್ವಿಟ್ಟರ್ ಹೇಳಿಕೊಳ್ಳುವುದರೊಂದಿಗೆ ಅಬ್ಬರಿಸಿತು. ಈಗ, ಅವರು ಅತ್ಯುತ್ತಮ ನಟಿ (ಮಹಿಳೆ) ನಲ್ಲಿ ನಾಮನಿರ್ದೇಶನಗೊಂಡಿದ್ದಾರೆ: ಮಿಡ್-ಡೇ ಮತ್ತು ರೇಡಿಯೊ ಸಿಟಿ ಹಿಟ್‌ಲಿಸ್ಟ್ OTT ಪ್ರಶಸ್ತಿಗಳಲ್ಲಿ ಚಲನಚಿತ್ರ ವಿಭಾಗದಲ್ಲಿ, ನಾವು ಅವಧಿಯನ್ನು ಮರುಪರಿಶೀಲಿಸುವ ಮೂಲಕ ನಮ್ಮ ಚಾಟ್ ಅನ್ನು ಪ್ರಾರಂಭಿಸುತ್ತೇವೆ. ಅವಳು ವಿರೋಧಿಗಳಿಂದ ವಿಚಲಿತಳಾಗಿದ್ದಾಳೆಯೇ? “ಇದು ಮೌಲ್ಯೀಕರಿಸುತ್ತಿದೆ. ತರಬೇತಿಯ ಅಂತ್ಯದ ವೇಳೆಗೆ […]

Advertisement

Wordpress Social Share Plugin powered by Ultimatelysocial