10,000 ರೂ. ಮೀರಿದ ಠೇವಣಿಗೆ ಈ ಬ್ಯಾಂಕಿನ ಗ್ರಾಹಕರು ಪಾವತಿಸಬೇಕು ಶುಲ್ಕ

BIG NEWS: 10,000 ರೂ. ಮೀರಿದ ಠೇವಣಿಗೆ ಈ ಬ್ಯಾಂಕಿನ ಗ್ರಾಹಕರು ಪಾವತಿಸಬೇಕು ಶುಲ್ಕ
ಭಾರತೀಯ ಅಂಚೆಯ ಪೇಮೆಂಟ್ಸ್‌ ಬ್ಯಾಂಕ್ (ಐಪಿಪಿಬಿ) ತನ್ನ ಎಲ್ಲಾ ಗ್ರಾಹಕರಿಗೂ ತ್ವರಿತ ಹಾಗೂ ವಿಶ್ವಾಸಾರ್ಹ ಆರ್ಥಿಕ ಸೇವೆಗಳನ್ನು ಒದಗಿಸುತ್ತಾ ಬಂದಿದೆ. ಇತ್ತೀಚಿನ ವರದಿಯೊಂದರ ಪ್ರಕಾರ, ಐಪಿಪಿಬಿಯ ಗ್ರಾಹಕರು ಜನವರಿ 1, 2022ರಿಂದ ನಿಗದಿತ ಮಟ್ಟಕ್ಕಿಂತ ಹೆಚ್ಚಿನ ಹಣದ ವಹಿವಾಟು ಮಾಡಿದಲ್ಲಿ ಶುಲ್ಕ ಪಾವತಿ ಮಾಡಬೇಕಾಗುತ್ತದೆ.

ಐಪಿಪಿಬಿಯಲ್ಲಿ ಮೂರು ಬೇರೆ ರೀತಿಯ ಉಳಿತಾಯ ಖಾತೆಗಳಿವೆ. ಪ್ರತಿಯೊಂದು ಖಾತೆಯೂ ಒಂದಕ್ಕಿಂತ ಭಿನ್ನವಾಗಿವೆ. ಆರ್‌ಬಿಐ ನಿರ್ಬಂಧಗಳ ಪ್ರಕಾರ ನೀವು ಒಂದು ಲಕ್ಷ ರೂ.ಗಿಂತ ಹೆಚ್ಚಿನ ಮೊತ್ತವನ್ನು ಉಳಿತಾಯ ಬ್ಯಾಂಕ್‌ ಖಾತೆಯಲ್ಲಿ ಇಡುವಂತಿಲ್ಲ, ಆದರೆ ನೀವು ಅಂಚೆ ಸೇವಾ ಬ್ಯಾಂಕ್‌ ಖಾತೆಯಲ್ಲಿ ಒಂದು ಲಕ್ಷಕ್ಕಿಂತ ಮೀರಿದ ಯಾವುದೇ ಮೊತ್ತವನ್ನು ಇಡಬಹುದಾಗಿದೆ.

ಉಳಿತಾಯ ಹಾಗೂ ಚಾಲ್ತಿ ಖಾತೆಗಳಲ್ಲಿ 10,000 ರೂ.ಗಳವರೆಗೂ ಅನಿಯಮಿತವಾಗಿ ಠೇವಣಿ ಇಡಬಹುದಾಗಿದೆ. ಇದಾದ ಬಳಿಕ ಖಾತೆಯ 0.5%ನಷ್ಟು, ಕನಿಷ್ಠ 25 ರೂ.ಗೆ ಮಿತಿ ಪಡಿಸಿದಂತೆ ಶುಲ್ಕ ವಿಧಿಸಲಾಗುವುದು. ಇದೇ ರೀತಿ, ಉಳಿತಾಯ ಹಾಗೂ ಚಾಲ್ತಿ ಖಾತೆಗಳಿಂದ ಹಣ ಹಿಂಪಡೆಯುವ ವೇಳೆ ಮಾಸಿಕ ಮಿತಿ 25,000 ರೂ.ಗಳೆಂದು ನಿಗದಿ ಪಡಿಸಲಾಗಿದ್ದು, ಇದಾದ ಬಳಿಕ ನಗದಿನ 0.5%, ವರ್ಗಾವಣೆಯೊಂದರ ಮೇಲೆ ಕನಿಷ್ಠ 25 ರೂ.ನಂತೆ ಚಾರ್ಜ್ ಮಾಡಲಾಗುವುದು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ದೇಶದ ರೈತ ಸಮುದಾಯಕ್ಕೆ ಮತ್ತೊಂದು ಸಿಹಿಸುದ್ದಿ

Mon Dec 20 , 2021
ನವದೆಹಲಿ: ಆಟೋಮೊಬೈಲ್‌ಗಳು, ದ್ವಿಚಕ್ರ ವಾಹನಗಳು, ತ್ರಿಚಕ್ರ ವಾಹನಗಳು, ಬಸ್‌ಗಳು ಮತ್ತು ಮೈಕ್ರೋ ಟ್ರಕ್‌ಗಳ ನಂತರ ಮುಂದಿನ ದಿನಗಳಲ್ಲಿ ಬ್ಯಾಟರಿ-ಎಲೆಕ್ಟ್ರಿಕ್ ಟ್ರ್ಯಾಕ್ಟರ್ ಅನ್ನು ಬಿಡುಗಡೆ ಮಾಡಲಾಗುವುದು ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಘೋಷಿಸಿದ್ದಾರೆ, ಇದು ಕೃಷಿ ಉತ್ಪಾದನೆಯ ಒಟ್ಟಾರೆ ವೆಚ್ಚವನ್ನು ಕಡಿಮೆ ಮಾಡುತ್ತದೆ. ಎಲೆಕ್ಟ್ರಿಕ್ ಟ್ರಾಕ್ಟರ್ ಅನ್ನು ಬಿಡುಗಡೆ ಮಾಡುವ ದಿನಾಂಕವನ್ನು ಸಚಿವರು ನಿರಾಕರಿಸಿದ್ದು, ಬಿಡುಗಡೆ ದಿನಾಂಕಗಳು ಮತ್ತು ಕಾನೂನುಗಳನ್ನು ಇನ್ನೂ ಅಂತಿಮಗೊಳಿಸಲಾಗುತ್ತಿದೆ ಎಂದು ಹೇಳಿದರು. […]

Advertisement

Wordpress Social Share Plugin powered by Ultimatelysocial