ಬಾಲಿವುಡ್ ಜೀರೋ ಬ್ಯೂಟಿ ಶಿಲ್ಪಾ ಶೆಟ್ಟಿ

 

ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್. ಸದಾ ಒಂದಲ್ಲ ಒಂದು ಪೋಸ್ಟ್ ಹಂಚಿಕೊಳ್ತಾ ಅಭಿಮಾನಿಗಳೊಟ್ಟಿಗೆ ಕನೆಕ್ಟ್ ಆಗುವ ಮಂಗಳೂರು ಬ್ಯೂಟಿ ಇನ್ಮುಂದೆ ನಿಮ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಿಗೋದೇ ಇಲ್ಲ.

ಏಕಾಏಕಿ ಶಿಲ್ಪಾ ಶೆಟ್ಟಿ ಸೋಷಿಯಲ್ ಮೀಡಿಯಾದಿಂದ ಹೊರ ನಡೆದಿದ್ದಾರೆ. ಶಿಲ್ಪಾ ಈ ನಡೆಗೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಪತಿ ರಾಜ್ ಕುಂದ್ರಾ ನೀಲಿ ಚಿತ್ರಗಳ ನಿರ್ಮಾಣ ಪ್ರಕರಣದಡಿ ಬಂಧನವಾದ ಸಮಯದಲ್ಲೂ ಶಿಲ್ಪಾ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದರು. ಯೋಗಾಸನದ ಬಗ್ಗೆ, ಸ್ಫೂರ್ತಿದಾಯ ಭಾಷಣದ ವಿಡಿಯೋ ಶೇರ್ ಮಾಡುತ್ತಿದ್ದರು. ಆದ್ರೆ ಇಂದಿನಿಂದ ಸೋಷಿಯಲ್ ಮೀಡಿಯಾದಲ್ಲಿ ದೂರ ಇರಲಿದ್ದೇನೆ. ನನ್ನಲ್ಲಿ ಹೊಸತನವನ್ನು ಕಂಡುಕೊಳ್ಳವವರೆಗೂ ಇವೆಲ್ಲವೂಗಳಿಂದ ದೂರ ಇರಲಿದ್ದೇನೆ ಎಂದು ಘೋಷಿಸಿದ್ದಾರೆ.

ಶಿಲ್ಪಾ ಶೆಟ್ಟಿ ಸಡನ್ ಆಗಿ ಈ ರೀತಿ ನಿರ್ಧಾರ ಮಾಡಿದ್ದೇಕೆ ಎಂಬ ಚರ್ಚೆ ಬಾಲಿವುಡ್ ಅಂಗಳದಲ್ಲಿ ನಡೆಯುತ್ತಿದೆ. ಈ ನಿರ್ಧಾರದ ಹಿಂದೆ ಏನಿರಬಹುದು ಕಾರಣ ಅನ್ನೋ ಕುತೂಹಲದ ಜೊತೆಗೆ ಅಭಿಮಾನಿಗಳಲ್ಲಿ ಬೇಸರ ಮೂಡಿದೆ. ಸದ್ಯಕ್ಕೆ ಮಾತ್ರ ಶಿಲ್ಪಾ ಶೆಟ್ಟಿ ಸೋಷಿಯಲ್ ಮೀಡಿಯಾದಿಂದ ಬ್ರೇಕ್ ತೆಗೆದುಕೊಂಡಿದ್ದು, ಮತ್ಯಾವಾಗ ಕಂಬ್ಯಾಕ್ ಆಗ್ತಾರೋ ಕಾದು ನೋಡ್ಬೇಕು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವೈರಲ್ ಆಯ್ತು ನಟ ರಾಹುಲ್ ರಾಮಕೃಷ್ಣ ಕಿಸ್ಸಿಂಗ್ ಫೋಟೋ..!

Fri May 13 , 2022
  ತೆಲುಗಿನ ಅರ್ಜುನ್ ರೆಡ್ಡಿ ಸಿನಿಮಾದ ಮೂಲಕ ಸಿನಿಮಾ ಜಗತ್ತಿಗೆ ಪರಿಚಿತರಾದ ರಾಹುಲ್ ರಾಮಕೃಷ್ಣ ತಮ್ಮ ಮದುವೆ ವಿಚಾರದಲ್ಲಿ ಎಡವಟ್ಟು ಮಾಡಿಕೊಂಡಿದ್ದಾರೆ. ಹುಡುಗಿಯೊಬ್ಬಳಿಗೆ ಮುತ್ತಿಡುವ ಫೋಟೋವನ್ನು ಟ್ವಿಟರ್ ನಲ್ಲಿ ಹಂಚಿಕೊಂಡು, ‘ಕೊನೆಗೂ ಮದುವೆ ಆಗುತ್ತಿದ್ದೇನೆ. ಶೀಘ್ರದಲ್ಲೇ’ ಎಂದು ಬರೆದುಕೊಂಡಿದ್ದರು. ಈ ಟ್ವಿಟ್ ಮಾಡಿದ ಕೆಲವೇ ನಿಮಿಷಗಳಲ್ಲೇ ಈ ಅಕ್ಷರಗಳನ್ನು ಎಡಿಟ್ ಮಾಡಿ, ಆಗುತ್ತಿದ್ದ ಮುಜಗರವನ್ನು ತಪ್ಪಿಸಿಕೊಂಡಿದ್ದಾರೆ. ತೆಲುಗಿನಲ್ಲಿ ಹಲವು ಚಿತ್ರಗಳನ್ನು ಮಾಡಿರುವ ರಾಹುಲ್ ರಾಮಕೃಷ್ಣ, ಮೂಲತಃ ಲೇಖಕರೂ ಹೌದು. ಸೈನ್ಮಾ […]

Advertisement

Wordpress Social Share Plugin powered by Ultimatelysocial