ಶಿರ, ಸ್ತನ ಛೇದಿಸಿ ಪಾಕ್‌ನಲ್ಲಿ ಹಿಂದೂ ಮಹಿಳೆಯ ಹತ್ಯೆ

 

ಪಾಕಿಸ್ತಾನದ ಸಿಂಝೋರೊ ಪಟ್ಟಣದಲ್ಲಿ ಅಲ್ಪಸಂಖ್ಯಾತ ಹಿಂದೂ ಮಹಿಳೆಯನ್ನು ಕ್ರೂರವಾಗಿ ಹತ್ಯೆ ಮಾಡಲಾಗಿದೆ. 40 ವರ್ಷದ ಮಹಿಳೆಯ ಶಿರಚ್ಛೇದ ಮಾಡಿದ್ದು, ಆಕೆಯ ಸ್ತನಗಳನ್ನು ಕತ್ತರಿಸಲಾಗಿದೆ ಎಂದು ಪಾಕಿಸ್ತಾನದ ಸಂಸದೆ ಕೃಷ್ಣಾ ಕುಮಾರಿ ತಿಳಿಸಿದ್ದಾರೆ.ಸಂತ್ರಸ್ತೆಯ ದೇಹ ಹಾಗೂ ಮುಖದ ಚರ್ಮಗಳನ್ನು ಸುಲಿದು ಹಾಕಲಾಗಿದೆ.ಹತ್ಯೆಗೀಡಾದ ಮಹಿಳೆಗೆ ನಾಲ್ವರು ಮಕ್ಕಳಿದ್ದಾರೆ ಎಂದು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ನಾಯಕಿ ಕೃಷ್ಣಾ ಕುಮಾರಿ ವಿವರಿಸಿದ್ದಾರೆ.”40 ವರ್ಷದ ದಯಾ ಭೇಲ್ ಕೊಲೆಯಾದವರು, ಅವರ ದೇಹವು ಬಹಳ ಹೀನಾಯ ಸ್ಥಿತಿಯಲ್ಲಿ ಪತ್ತೆಯಾಗಿದೆ. ಶಿರವನ್ನು ದೇಹದಿಂದ ಪ್ರತ್ಯೇಕಿಸಲಾಗಿತ್ತು. ತಲೆಯಿಂದ ಸಂಪೂರ್ಣ ಮಾಂಸವನ್ನು ಕಿತ್ತು ಹಾಕಿದ್ದರು. ಆಕೆಯ ಗ್ರಾಮಕ್ಕೆ ಭೇಟಿ ನೀಡಿದ್ದೆ. ಸಿಂಝೋರೊ ಹಾಗೂ ಶಹಪುರ್ಚಾಕರ್‌ನ ಪೊಲೀಸ್ ತಂಡಗಳು ಅಲ್ಲಿಗೆ ಭೇಟಿ ನೀಡಿವೆ ಎಂದು ಕೃಷ್ಣಾ ಕುಮಾರಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.ಮಹಿಳೆಯ ಛಿದ್ರಗೊಂಡ ದೇಹವು ಜಮೀನೊಂದರಲ್ಲಿ ಬುಧವಾರ ಪತ್ತೆಯಾಗಿತ್ತು.ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಎಂದು ಪಿಪಿಪಿಯ ಜಿಯಾಲ ಅಮರ್ ಲಾಲ್ ಭೀಲ್ ಹೇಳಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ಕಾಡುಕೋಣ ದಾಳಿಗೆ ವ್ಯಕ್ತಿ ಬಲಿ

Thu Dec 29 , 2022
ಕಳಸ ತಾಲೂಕಿನ ತೋಟದೂರು ಸಮೀಪ ಕಾಡುಕೋಣವೊಂದು ದಾಳಿ ನಡೆಸಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ನಡೆದಿದೆ. ಈ ಮೂಲಕ ಕಾಫಿನಾಡಲ್ಲಿ ಕಾಡು ಪ್ರಾಣಿಗಳ ದಾಳಿಗೆ ಮತ್ತೊಂದು ಬಲಿಯಾದಂತಾಗಿದೆ. ಈ ಹಿಂದೆ ಆನೆಗಳ ದಾಳಿಗೆ ಕಳೆದ ನಾಲ್ಕೈದು ತಿಂಗಳ ಅಂತರದಲ್ಲಿ ಮೂವರು ಮೃತಪಟ್ಟಿದ್ದರು.ಈಗ ಕಾಡುಕೋಣಕ್ಕೆ ಒಂದು ಬಲಿಯಾಗಿದೆ.ಸೋಮಶೇಖರ್ (45) ಮೃತ ದುರ್ದೈವಿಯಾಗಿದ್ದಾರೆ. ಇವರು ಅಡಿಕೆ ತೋಟದಲ್ಲಿ ಕೆಲಸ ಮಾಡುವಾಗ ಏಕಾಏಕಿ ಕಾಡುಕೋಣವು ದಾಳಿ ನಡೆಸಿದ್ದು, ತನ್ನ ಕೋಡಿನಿಂದ ತಿವಿದಿದೆ. ಪೊಲೀಸ್‌ ಠಾಣೆಯಲ್ಲಿ ಪ್ರಕರಣ […]

Advertisement

Wordpress Social Share Plugin powered by Ultimatelysocial