ರಾಜ್ಯಾದ್ಯಂತ ನೇಕಾರರ ಹೋರಾಟ

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದಲ್ಲಿ ಲಾಕ್ ಡೌನ್  ಹೊಡೆತದಿಂದಾಗಿ ನೇಕಾರರು ತೀವ್ರ ಸಂಕಷ್ಟಕ್ಕೀಡಾಗಿದ್ದು, ರಾಜ್ಯಸರ್ಕಾರ  ನೆರವು ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಈ ಹಿನ್ನೆಲೆ ರಾಜ್ಯಾದ್ಯಂತ ನೇಕಾರರ ಹೋರಾಟ ಖಚಿತ ಎಂದು ನಗರದ ವಿದ್ಯಾನಗರದ ಸರ್ಕಾರಿ ಶಾಲಾವರಣದಲ್ಲಿ ನಡೆದ ನೇಕಾರರ ಹೋರಾಟದ ಪೂರ್ವಭಾವಿ ಸಭೆಯಲ್ಲಿ ರಾಜ್ಯ ನೇಕಾರ ಒಕ್ಕೂಟದ ಅಧ್ಯಕ್ಷ ಎಂ.ಡಿ ಲಕ್ಷ್ಮೀನಾರಾಯಣ್ ಹೇಳಿದರು. ಬೇರೆ ಸಮುದಾಯಗಳಿಗೆ 5ಸಾವಿರ ಪರಿಹಾರಧನ ನೀಡುತ್ತಿರುವ  ಸರ್ಕಾರ ನೇಕಾರರಿಗೆ ಮಾತ್ರ ಕೇವಲ 2ಸಾವಿರ ನೀಡುತ್ತಿದೆ. ಆದರೆ ಆ ಹಣ ಪಡೆಯಲು ನೇಕಾರರು ಪರದಾಡುವ ಸ್ಥಿತಿಯಲ್ಲಿದ್ದಾರೆ. ಕಾರ್ಯಕ್ರಮದಲ್ಲಿ ನೇಕಾರ ಮುಖಂಡರಾದ ಎಂ.ಜಿ ಶ್ರೀನಿವಾಸ್, ಪಿ.ಎ ವೆಂಕಟೇಶ್, ಸಂಜೀವ್ನಾಯಕ್,ಚಂದ್ರತೇಜಸ್ವಿ, ತ.ನ ಪ್ರಭುದೇವ್ ಸೇರಿದಂತೆ ಮತ್ತಿತರರು ಹಾಜರಿದ್ದರು.

Please follow and like us:

Leave a Reply

Your email address will not be published. Required fields are marked *

Next Post

ಗ್ರಾಹಕರ ಡೇಟಾ ಕಳವು ಖತರ್ನಾಕ್‌ಗಳ ಬಂಧನ

Tue Jun 23 , 2020
ಎಟಿಎಂಗಳಿಗೆ ಸ್ಕೀಮರ್‌ ಮೆಷಿನ್‌ ಅಳವಡಿಸಿ ಗ್ರಾಹಕರ ಡಾಟಾಗಳನ್ನು ಕಳವು ಮಾಡಿ, ಹಣ ದೋಚಲು ಯತ್ನಿಸುತ್ತಿದ್ದ ಇಬ್ಬರು ವಿದೇಶಿ ಪ್ರಜೆಗಳನ್ನು ಆರ್‌.ಟಿ. ನಗರ ಪೊಲೀಸರು ಬಂಧಿಸಿದ್ದಾರೆ.ಆರ್ ಟಿ ನಗರದ ಗಂಗನಗರ ಬಳಿ ಇರುವ ಕಾರ್ಪೊರೇಷನ್ ಬ್ಯಾಂಕ್ ನಲ್ಲಿ ಹಣ ಕಳ್ಳತನಕ್ಕೆ ಯತ್ನ. ಗ್ರಾಹಕರ ಡೇಟಾ ಕಳವು ಮಾಡುತಿದ್ದ ಖತರ್ನಾಕ್ಗಳು.ನಕಲಿ ಎಟಿಎಂ ತಯಾರು ಮಾಡುತಿದ್ದ ಆರೋಪಿಗಳು ಉಗಾಂಡದ ಫೆಲಿಕ್ಸ್‌ ಕಿಸ್ಸಿಬೊ ಮತ್ತು ತಾಂಜೇನಿಯಾದ ಖೈರುನ್‌ ಅಬ್ದುಲ್ಲ ಬಂಧಿತರು. ಇಬ್ಬರೂ ಸದ್ಯ ಯಲಹಂಕದ ಕೋಗಿಲು […]

Advertisement

Wordpress Social Share Plugin powered by Ultimatelysocial