ಕುಂಬಾರ, ಕಮ್ಮಾರ, ಬಡಗಿ ಸೇರಿ ಕುಶಲಕರ್ಮಿಗಳಿಗೆ ಗುಡ್ ನ್ಯೂಸ್.

 

ಶಿವಮೊಗ್ಗ : ಕುಶಲಕರ್ಮಿಗಳಾದ ಕುಂಬಾರ/ಟೆರಾಕೋಟ/ಮಣ್ಣಿನ ವಿಗ್ರಹ, ಕಮ್ಮಾರ, ಬಡಗಿ, ಶಿಲ್ಪಿಗಳು, ಬುಟ್ಟಿ ಹೆಣೆಯುವವರು, ಆಭರಣ ತಯಾರಿಸುವ ಅಕ್ಕಸಾಲಿಗರು, ಶ್ರೀಗಂಧದ ಕೆತ್ತನೆ, ಕಲ್ಲಿನ ಕೆತ್ತೆ, ಲೋಹದ ಕರಕುಶಲ ವಸ್ತು, ಬೆತ್ತ ಮತ್ತು ಬಿದಿರಿನ ಕೆಲಸ, ಸಂಡೂರು ಲಂಬಾಣಿ ಕಸೂತಿ, ಕಸೂತಿ ಕಲೆ, ಕೋಕೋನಟ್ ಸೆಲ್ ಕ್ರಾಫ್ಟ್, ಕಂಬಳಿ ನೇಯುವವರು, ಚಾಪೆ ಹೆಣೆಯುವವರು, ಕರಕುಶಲ ವಸ್ತುಗಳನ್ನು ತಯಾರಿಸುವ ಜಿಲ್ಲೆಯ ಕುಶಲಕರ್ಮಿಗಳಿಂದ ಅವರ ಸಾಮಾಜಿಕ, ಆರ್ಥಿಕ ಬೆಳವಣಿಗೆ ಮತ್ತು ಅಭಿವೃದ್ಧಿಗಾಗಿ ಬ್ಯಾಂಕಿನ ಸಾಲದೊಂದಿಗೆ ಕುಶಲಕರ್ಮಿಗಳಿಗೆ ಸಾಲ-ಸಹಾಯಧನ ಎಂಬ ಹೊಸ ಯೋಜನೆಯಡಿ ಅರ್ಜಿಯನ್ನು ಅಹ್ವಾನಿಸಲಾಗಿದೆ.

ಈ ಯೋಜನೆಯಡಿ ಮಂಜೂರಾದ ಸಾಲದ ಶೇ. 30 ರಷ್ಟು ಗರಿಷ್ಟ ರೂ. 15,000/- ಸಹಾಯಧನವನ್ನು ಯೋಜನಾ ವೆಚ್ಚವು ರೂ. 50,000/- ಮೀರದಿರುವ ಚಟುವಟಿಕೆಗಳಿಗೆ ನೀಡಲಾವುದು. ಅರ್ಜಿ ಸಲ್ಲಿಸಲು ಜ.25 ಅಂತಿಮ ದಿನಾಂಕವಾಗಿರುತ್ತದೆ.

ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಜಂಟಿ ನಿರ್ದೇಶಕರ ಕಚೇರಿ, ಜಿಲ್ಲಾ ಕೈಗಾರಿಕಾ ಕೇಂದ್ರ, ಶಿವಮೊಗ್ಗ ದೂ.ಸಂ.: 08182-222802 ಹಾಗೂ ಎಲ್ಲಾ ತಾಲೂಕಿನ ಕೈಗಾರಿಕಾ ವಿಸ್ತರಣಾಧಿಕಾರಿಗಳನ್ನು ಸಂಪರ್ಕಿಸುವಂತೆ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಇಡೀ ಬೆಂಗಳೂರಿಗೆ ತಲೆನೋವಾಗಿದ್ದ ನಟೋರಿಯಸ್ ಸುಲುಗೆಕೋರರು ಅರೆಸ್ಟ್‌.

Tue Jan 17 , 2023
77 ಪ್ರಕರಣದಲ್ಲಿ ಬೇಕಾಗಿದ್ದ ಅಬ್ರಹಾರ್ ಹಾಗೂ ಅಫ್ತಾಬ್ ಅರೆಸ್ಟ್. ಬೆಂಗಳೂರಿನ ರಾಜಗೋಪಾಲನಗರ ಪೊಲೀಸರಿಂದ ಅಬ್ರಹಾರ್ ಟೀಂ ಅರೆಸ್ಟ್. ಹಾಡುಹಗಲೇ ಲಾಂಗ್ ಹಿಡಿದು ಸುಲಿಗೆ ಮಾಡ್ತಿದ್ದ ಅಬ್ರಹಾರ್ ಟೀಂ. ಬಿಟಿಎಂ ಲೇಔಟ್ ನಲ್ಲಿ ರಸ್ತೆಯಲ್ಲೇ ಮಚ್ಚೆತ್ತಿ ಸುಲಿಗೆ ಮಾಡಿದ್ದ ಅಬ್ರಹಾರ್. ರಾಜಗೋಪಲನಗರ,ಕಾಮಾಕ್ಷಿಪಾಳ್ಯ ಭಾಗದಲ್ಲೂ ರೋಡ್ ರಾಬ್ರಿ ಮಾಡಿದ್ದ ಅಬ್ರಹಾರ್. ಶಿವಾಜಿನಗರದ ಉದ್ಯಮಿಯೊಬ್ಬರನ್ನೂ ಸುಲಿಗೆ ಮಾಡಿದ್ದ ಟೀಂ. ಪಲ್ಸರ್ ಬೈಕ್ ನಲ್ಲಿ ಬಂದು ಕೃತ್ಯವೆಸಗ್ತಿದ್ದ ಟೀಂ ಅರೆಸ್ಟ್. ರಾಜಗೋಪಾಲನಗರ ಪೊಲೀಸರಿಂದ ಮುಂದುವರಿದ ತನಿಖೆ. […]

Advertisement

Wordpress Social Share Plugin powered by Ultimatelysocial