ಶಿವಮೊಗ್ಗದಲ್ಲಿ ಮತ್ತಷ್ಟು ಉದ್ವಿಗ್ನ: ಬೈಕ್ ಗಳಿಗೆ ಬೆಂಕಿ, ಕಾರುಗಳ ಗ್ಲಾಸ್ ಪುಡಿ ಪುಡಿ

ಶಿವಮೊಗ್ಗ: ನಿನ್ನೆ ಹತ್ಯೆಯಾಗಿದ್ದಂತ ಭಜರಂಗ ದಳದ ಕಾರ್ಯಕರ್ತ ಹರ್ಷ ಮೃತದೇಹದ ಮರಣೋತ್ತರ ಪರೀಕ್ಷೆಯ ಬಳಿಕ, ಕುಟುಂಬಸ್ಥರಿಗೆ ಮೆಗ್ಗಾನ್ ಆಸ್ಪತ್ರೆಯಿಂದ ದೇಹವನ್ನು ಹಸ್ತಾಂತರಿಸಲಾಗಿತ್ತು. ಅವರ ಪಾರ್ಥೀವ ಶರೀರದ ಮೆರವಣಿಗೆ ಸಂದರ್ಭದಲ್ಲಿ ಸಿಕ್ಕ ಸಿಕ್ಕ ಸ್ಥಳಗಳಲ್ಲಿ ಕಲ್ಲು ತೂರಾಟವನ್ನು ನಡೆಸಿರೋದಾಗಿ ತಿಳಿದು ಬಂದಿದೆ.

ಅಲ್ಲದೇ ಬೈಕ್ ಗಳಿಗೆ ಬೆಂಕಿ ಹಚ್ಚಿ, ಕಾರುಗಳ ಗ್ಲಾಸ್ ಗಳನ್ನು ಪುಡಿ ಪುಡಿ ಮಾಡಿರೋ ಘಟನೆ ಕೂಡ ನಡೆದಿದೆ. ಹೀಗಾಗಿ ನಗರದಲ್ಲಿ ಪರಿಸ್ಥಿತಿ ಉದ್ವಿಗ್ನತೆಯನ್ನು ತಲುಪಿದೆ ಎನ್ನಲಾಗಿದೆ.

ಭಜರಂಗದಳದ ಕಾರ್ಯಕರ್ತ ಹರ್ಷ ಕೊಲೆ ನಂತ್ರ, ಇಂದು ಮೆಗ್ಗಾನ್ ನಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆಯ ಬಳಿಕ, ಕುಟುಂಬಸ್ಥರಿಗೆ ಹರ್ಷ ಫಾರ್ಥೀವ ಶರೀರವನ್ನು ಹಸ್ತಾಂತರಿಸಲಾಗಿತ್ತು. ಮೆಗ್ಗಾನ್ ಆಸ್ಪತ್ರೆಯಿಂದ ಹರ್ಷ ಮನೆ ಇರುವಂತ ಬಸವನ ಬೀದಿಯವರೆಗೆ ಮೆರವಣಿಗೆಯಲ್ಲಿ ಮೃತದೇಹವನ್ನು ಕೊಂಡೊಯ್ಯಲಾಗುತ್ತಿತ್ತು.

ಈ ಸಂದರ್ಭದಲ್ಲಿ ಮೆರವಣಿಗೆ ವೇಳೆಯಲ್ಲಿ ಎನ್ ಟಿ ರಸ್ತೆಯಲ್ಲಿ ಸಿಕ್ಕ ಸಿಕ್ಕ ಮನೆಗಳು, ವಾಹನಗಳ ಮೇಲೆ ರೊಚ್ಚಿಗೆದ್ದಂತ ವಿವಿಧ ಗುಂಪುಗಳು ಕಲ್ಲು ತೂರಾಟ ನಡೆಸಿರೋದಾಗಿ ತಿಳಿದು ಬಂದಿದೆ. ಇದಷ್ಟೇ ಅಲ್ಲದೇ ಉದ್ರಿಕ್ತ ಗುಂಪುಗಳಿಂದ ಬೈಕ್ ಗಳಿಗೆ ಬೆಂಕಿ ಕೂಡ ಹಚ್ಚಿದ್ದಾರೆ ಎನ್ನಲಾಗಿದೆ. ಜೊತೆಗೆ ಮೆರವಣಿಗೆ ಸಾಗುತ್ತಿದ್ದಂತ ರಸ್ತೆಗಳಲ್ಲಿ ನಿಲ್ಲಿಸಿದ್ದಂತ ಕಾರುಗಳ ಗ್ಲಾಸ್ ಗಳನ್ನು ಪುಡಿ ಪುಡಿ ಮಾಡಿದ್ದಾರೆ ಎನ್ನಲಾಗಿದೆ. ಈ ಮೂಲಕ ನಗರದಲ್ಲಿ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಂಡಿದೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ಕೂಡ ನಡೆಸಿದ್ದಾರೆ ಎನ್ನಲಾಗುತ್ತಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಫೆಬ್ರವರಿ 2022 ರಲ್ಲಿ Garena Free Fire ನಂತಹ 3 ಅತ್ಯುತ್ತಮ ಆಟಗಳು!

Mon Feb 21 , 2022
ಫ್ರೀ ಫೈರ್ ಭಾರತದಲ್ಲಿ ಮಹತ್ವದ ಅಸ್ತಿತ್ವವನ್ನು ಹೊಂದಿದೆ ಮತ್ತು ಇದು ದೇಶದ ಮೊಬೈಲ್ ಗೇಮಿಂಗ್ ಸಮುದಾಯದಲ್ಲಿ ವ್ಯಾಪಕವಾದ ಮನ್ನಣೆಯನ್ನು ಗಳಿಸಿದೆ. ಆದಾಗ್ಯೂ, ಬ್ಯಾಟಲ್ ರಾಯಲ್ ಶೀರ್ಷಿಕೆಯ ಹೆಸರನ್ನು ಒಳಗೊಂಡಂತೆ 54 ನಿಷೇಧಿತ ಅಪ್ಲಿಕೇಶನ್‌ಗಳ ಪಟ್ಟಿಯು ಹೊರಹೊಮ್ಮಿದಾಗ ಇಡೀ ಆಟಗಾರರ ನೆಲೆಯನ್ನು ದಿಗ್ಭ್ರಮೆಗೊಳಿಸಲಾಯಿತು. ಭಾರತದಲ್ಲಿ ಅಧಿಕೃತ ಅಮಾನತುಗೊಂಡಾಗಿನಿಂದ, ಬ್ಯಾಟಲ್ ರಾಯಲ್ ಉತ್ಸಾಹಿಗಳು ತಾವು ಯಾವ ಆಟವನ್ನು ಆಡಬೇಕು ಎಂದು ತಲೆ ಕೆರೆದುಕೊಳ್ಳುತ್ತಿದ್ದಾರೆ. ಹಲವಾರು ಪ್ರವೇಶಿಸಬಹುದಾದ ಆಯ್ಕೆಗಳ ಕಾರಣದಿಂದಾಗಿ, ಅವರು ಪ್ರಯತ್ನಿಸಲು ಮತ್ತು […]

Advertisement

Wordpress Social Share Plugin powered by Ultimatelysocial