ಶ್ರೀ ರಾಮನವಮಿಯಂದು ಬಿಡುಗಡೆಯಾಯಿತು “ಶೋಕಿವಾಲ” ನ ಟೀಸರ್.!

ಕ್ರಿಸ್ಟಲ್ ಪಾರ್ಕ್ ಸಿನಿಮಾ ಲಾಂಛನದಲ್ಲಿ ಟಿ.ಆರ್.ಚಂದ್ರಶೇಖರ್ ಹಾಗೂ ಕಿಶೋರ್ ಅವರು ನಿರ್ಮಿಸಿರುವ “ಶೋಕಿವಾಲ” ಚಿತ್ರದ ಟೀಸರ್ ಬಿಡುಗಡೆಯಾಗಿದೆ.

ಜಾಕಿ ನಿರ್ದೇಶನದಲ್ಲಿ ಅಜಯ್ ರಾವ್ ನಾಯಕರಾಗಿ ನಟಿಸಿರುವ ಈ ಚಿತ್ರದ ಟೀಸರ್ ಮಹಾಲಕ್ಷ್ಮಿ ಪುರದಲ್ಲಿರುವ ಅಣ್ಣವ್ರ ಪ್ರತಿಮೆ ಬಳಿ ಬಿಡುಗಡೆಯಾಗಿದೆ. ಅಪ್ಪು ಅವರ ಪ್ರತಿಮೆ ಕೂಡಯಿದ್ದು, ಇಬ್ಬರು ದಿಗ್ಗಜರ ಪ್ರತಿಮೆ ಮುಂದೆ “ಶೋಕಿವಾಲ” ಚಿತ್ರದ ಟೀಸರ್, ಶ್ರೀರಾಮನವಮಿಯ ಪುಣ್ಯದಿನದಂದು ಬಿಡುಗಡೆಯಾಗಿದ್ದು ವಿಶೇಷ.

ನನ್ನ ಮೊದಲ ಸಿನಿಮಾದ ಟೀಸರ್ ರೀಲಿಸ್ ಅಗಿದೆ. ಎಲ್ಲಾ ಕಡೆಯಿಂದಲ್ಲೂ ಒಳ್ಳೆಯ ಪ್ರತಿಕ್ರಿಯೆ ಬರುತ್ತಿದೆ…‌ ಮುಂದಿನ ದಿನಗಳಲ್ಲಿ “ಶೋಕಿವಾಲ” ಚಿತ್ರದ ಮೊದಲ ವೀಡಿಯೋ ಸಾಂಗ್ ಬಿಡುಗಡೆ ಮಾಡುವ ತಯಾರಿ ನಡೆಸಿದ್ದೇವೆ. ಇದೇ ತಿಂಗಳು 29 ರಂದು ಚಿತ್ರವನ್ನು ಕರ್ನಾಟಕದಾದ್ಯಂತ ಭರ್ಜರಿಯಾಗಿ ಬಿಡುಗಡೆ ಮಾಡುತ್ತಿದ್ದೇವೆ.
ವಿತರಕರ ಕಡೆಯಿಂದಲೂ ಚಿತ್ರಕ್ಕೆ ಒಳ್ಳೆ ಪ್ರತಿಕ್ರಿಯೆ ಬಂದಿದ್ದು… ಅಜಯ್ ರಾವ್ ಅವರಿಗೆ ಹಿಂದಿನ ಸಿನಿಮಾಗಳಿಗಿಂತ ಹೆಚ್ಚು ಹೆಸರು ತಂದುಕೊಡಲಿದೆ ಎಂದು ನಿರ್ದೇಶಕ ಜಾಕಿ ತಿಳಿಸಿದ್ದಾರೆ. ಅವಕಾಶ ನೀಡಿದ ನಿರ್ಮಾಪಕರಿಗೆ ನಿರ್ದೇಶಕರು ಧನ್ಯವಾದ ತಿಳಿಸಿದ್ದಾರೆ.
ಪಕ್ಕಾ ಹಳ್ಳಿ ಸೊಗಡಿನ ಈ ಚಿತ್ರದಲ್ಲಿ ಅಜಯ್ ರಾವ್, ಸಂಜನಾ ಆನಂದ್, ಶರತ್ ಲೋಹಿತಾಶ್ವ , ಗಿರೀಶ್ ಶಿವಣ್ಣ , ತಬಲಾ ನಾಣಿ , ಮುನಿರಾಜ್, ಪ್ರಮೋದ್ ಶೆಟ್ಟಿ, ಅರುಣ ಬಾಲರಾಜ್, ವಾಣಿ , ಚಂದನ , ಲಾಸ್ಯ, ನಾಗರಾಜಮೂರ್ತಿ ಮುಂತಾದ ಕಲಾವಿದರು ನಟಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

"ಲಹರಿ" ಗೆ ನಲವತ್ತೆಂಟು ವರ್ಷ. ರಿಕ್ಕಿಕೇಜ್ ಗೆ ಗ್ರ್ಯಾಮಿ ಬಂದ ಹರ್ಷ. !

Tue Apr 12 , 2022
  ಸಂಗೀತ ಕ್ಷೇತ್ರದಲ್ಲಿ ತನ್ನದೇ ಆದ ಹೆಸರು ಮಾಡಿರುವ “ಲಹರಿ” ಸಂಸ್ಥೆ ಆರಂಭವಾಗಿ ನಲವತ್ತೆಂಟು ವರ್ಷವಾಗಿದೆ. “ಲಹರಿ ಮ್ಯೂಸಿಕ್” ಮೂಲಕ ರಿಕ್ಕಿಕೇಜ್ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿದ್ದ ಡಿವೈನ್ ಟೈಡ್ಸ್ ಆಲ್ಬಂ ಗೆ ಸಂಗೀತ ಕ್ಷೇತ್ರದ ಮೇರು ಪ್ರಶಸ್ತಿಯಾದ ಗ್ರ್ಯಾಮಿ ಸಹ ಬಂದಿದೆ. ರಿಕ್ಕಿ ಕೇಜ್ ಅವರಿಗೆ ಈ ಪ್ರಶಸ್ತಿ ಸಂದಿದೆ. ಈ ಎರಡು ಸಂತಸವನ್ನು ಹಂಚಿಕೊಳ್ಳಲು ಲಹರಿ ವೇಲು ಪತ್ರಿಕಾಗೋಷ್ಠಿ ಆಯೋಜಿಸಿದ್ದರು. ಕೇವಲ ಐನ್ನೂರು ರೂಪಾಯಿ ಬಂಡವಾಳದಿಂದ ನಮ್ಮ ಅಣ್ಣ […]

Advertisement

Wordpress Social Share Plugin powered by Ultimatelysocial